Bigg Boss Kannada: ‘ಸಂಗೀತಾ ಹೇಳಿದ್ರೆ ನಾವು ತಲೆ ಮೇಲೆ ಎಕ್ಕಡ ಇಟ್ಕೋಬೇಕು; ನಾವೆಲ್ಲ ಸೇವಕರು’: ಸಿಡಿದೆದ್ದ ತುಕಾಲಿ ಸಂತೋಷ್​

ಬಿಗ್​ ಬಾಸ್​ ಶುರು ಆದಾಗ ಸಂಗೀತಾ ಶೃಂಗೇರಿ ಅವರು ಬಹುತೇಕರಿಗೆ ಇಷ್ಟ ಆಗುತ್ತಿದ್ದರು. ಆದರೆ ದಿನ ಕಳೆದಂತೆಲ್ಲ ಅವರ ಬಗ್ಗೆ ಇರುವ ಅಭಿಪ್ರಾಯ ಬದಲಾಯಿತು. 8ನೇ ವಾರ ತಲುಪುವ ವೇಳೆಗೆ ಸಂಗೀತಾ ವರ್ತನೆಗೆ ಎಲ್ಲರೂ ವಿರೋಧ ವ್ಯಕ್ತಪಡಿಸಲು ಆರಂಭಿಸಿದ್ದಾರೆ. ತುಕಾಲಿ ಸಂತೋಷ್​ ಅವರು ಕಟು ಮಾತುಗಳಿಂದ ಟೀಕಿಸಿದ್ದಾರೆ.

Bigg Boss Kannada: ‘ಸಂಗೀತಾ ಹೇಳಿದ್ರೆ ನಾವು ತಲೆ ಮೇಲೆ ಎಕ್ಕಡ ಇಟ್ಕೋಬೇಕು; ನಾವೆಲ್ಲ ಸೇವಕರು’: ಸಿಡಿದೆದ್ದ ತುಕಾಲಿ ಸಂತೋಷ್​
ತುಕಾಲಿ ಸಂತೋಷ್​
Follow us
ಮದನ್​ ಕುಮಾರ್​
|

Updated on: Nov 27, 2023 | 10:19 PM

ನಟಿ ಸಂಗೀತಾ ಶೃಂಗೇರಿ (Sangeetha Sringeri) ಅವರು ಬಿಗ್​ ಬಾಸ್​ ಮನೆಯಲ್ಲಿ ಹಲವು ಕಾರಣಗಳಿಂದ ಹೈಲೈಟ್​ ಆಗುತ್ತಿದ್ದಾರೆ. ಕಾರ್ತಿಕ್​ ಮಹೇಶ್​ ಜೊತೆಗಿನ ಅವರ ಸ್ನೇಹದಿಂದ ದೊಡ್ಮನೆಯಲ್ಲಿ ಹಲವು ಏರಿಳಿತಗಳು ಆಗಿವೆ. ಕೆಲವೊಮ್ಮೆ ಸಂಗೀತಾ ಶೃಂಗೇರಿ ನಡೆದುಕೊಂಡ ರೀತಿ ವೀಕ್ಷಕರಿಗೆ ಇಷ್ಟ ಆಗಿಲ್ಲ. ಎಲ್ಲರನ್ನೂ ಅವರು ಡಾಮಿನೇಟ್​ ಮಾಡುತ್ತಾರೆ ಎಂಬ ಅಭಿಪ್ರಾಯ ಇದೆ. ಬಿಗ್​ ಬಾಸ್​ ಕನ್ನಡ’ (BBK 10) ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುತ್ತಿರುವ ಹಲವರಿಗೆ ಸಂಗೀತಾ ಶೃಂಗೇರಿ ಅವರನ್ನು ಕಂಡರೆ ಆಗುತ್ತಿಲ್ಲ. ಅದರಲ್ಲೂ ತುಕಾಲಿ ಸಂತೋಷ್​ (Tukali Santhosh) ಅವರು ನೇರವಾಗಿಯೇ ತಮ್ಮ ಅಸಮಾಧಾನವನ್ನು ತೋಡಿಕೊಂಡಿದ್ದಾರೆ. ತುಂಬಾ ಕಟುವಾದ ಮಾತುಗಳಿಂದ ಅವರು ಸಂಗೀತಾರ ನಡೆಯನ್ನು ಟೀಕಿಸಿದ್ದಾರೆ.

ನವೆಂಬರ್​ 27ರ ಸಂಚಿಕೆಯಲ್ಲಿ ಡ್ರೋನ್​ ಪ್ರತಾಪ್​, ವರ್ತೂರು ಸಂತೋಷ್​, ತುಕಾಲಿ ಸಂತೋಷ್​ ಅವರು ಒಟ್ಟಿಗೆ ಕುಳಿತು ಮಾತನಾಡುತ್ತಿದ್ದರು. ಆಗ ಸಂಗೀತಾ ಶೃಂಗೇರಿ ಬಗ್ಗೆ ತಮಗೆ ಯಾವ ರೀತಿಯ ಅಸಮಾಧಾನ ಇದೆ ಎಂಬುದನ್ನು ತುಕಾಲಿ ಸಂತೋಷ್​ ಅವರು ವಿವರಿಸಿದ್ದಾರೆ. ಮುಖ್ಯವಾಗಿ ಸಂಗೀತಾ ಶೃಂಗೇರಿ ಅವರ ಡಾಮಿನೇಟಿಂಗ್​ ವರ್ತನೆ ಬಗ್ಗೆ ತುಕಾಲಿ ಸಂತೋಷ್​ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ‘ವಿನಯ್ ಗುಂಪಲ್ಲಿ ಜಾಸ್ತಿ ಖುಷಿ ಸಿಕ್ತಿದೆ’; ಅಭಿಮಾನಿಗಳ ಮನಸ್ಸು ಮುರಿದ ಸಂಗೀತಾ ಶೃಂಗೇರಿ

‘ಸಂಗೀತಾ ಎಲಿಜಬೆತ್​ ರಾಣಿ. ನಾವೆಲ್ಲರೂ ಸೇವಕರು. ಹುಕುಂ ಅಂಥ ಆರ್ಡರ್​ ಮಾಡಿದ ತಕ್ಷಣ ನಾವೆಲ್ಲ ಕೇಳಬೇಕು. ಪ್ರಜೆಗಳೇ.. ಈಗಿಂದೀಗಲೇ ಎಲ್ಲರೂ ಊರನ್ನು ಬಿಟ್ಟು ತೊಲಗಿ ಎಂದ ತಕ್ಷಣ ನಾವೆಲ್ಲ ಗಂಟುಮೂಟೆ ಹಿಡಿದುಕೊಂಡು, ತಲೆ ಮೇಲೆ ಎಕ್ಕಡ ಹಾಕಿಕೊಂಡು ಹೋಗುತ್ತಾ ಇರಬೇಕು. ಪ್ರತಿ ದಿನ ಹಣ್ಣು, ಗಂಧದ ಕಡ್ಡಿ, ಕರ್ಪೂರ ಬೆಳಗಿ ಅವ್ವಾ.. ತಾಯಿ.. ಅಂತ ಅವರಿಗೆ ಪೂಜೆ ಮಾಡಬೇಕು. ಪ್ರತಿ ದಿನ ಬೆಳಗ್ಗೆ ಅವರನ್ನು ಕೇಳಿ ನಾವು ಕೆಲಸ ಮಾಡಬೇಕು. ಒಬ್ಬರು ಬಾತ್​ರೂಮ್​ ತೊಳೆಯಿರಿ ಅಂತಾರೆ, ಇನ್ನೊಬ್ಬರು ಟಾಯ್ಲೆಟ್​ ತೊಳೆಯಿರಿ ಅಂತಾರೆ. ಅದೆಲ್ಲ ಇಲ್ಲಿ ನಡೆಯಲ್ಲ’ ಎಂದು ತುಕಾಲಿ ಸಂತೋಷ್​ ಗರಂ ಆಗಿದ್ದಾರೆ.

ಆರಂಭದಲ್ಲಿ ಸಂಗೀತಾ ಶೃಂಗೇರಿ ಅವರು ಎಲ್ಲರಿಗೂ ಇಷ್ಟ ಆಗುತ್ತಿದ್ದರು. ಆದರೆ ನಂತರದ ದಿನಗಳಲ್ಲಿ ಅವರ ಬಗ್ಗೆ ಇರುವ ಅಭಿಪ್ರಾಯ ಬದಲಾಗುತ್ತಾ ಬಂತು. ಟಾಸ್ಕ್​ ಒಂದರಲ್ಲಿ ಕಾರ್ತಿಕ್​ ಮಹೇಶ್​ ಅವರ ತಲೆ ಬೋಳಿಸುವಂತೆ ಸಂಗೀತಾ ಚಾಲೆಂಜ್​ ನೀಡಿದ್ದರು. ಅದರಿಂದ ಎಲ್ಲರಿಗೂ ಬೇಸರ ಆಯಿತು. ಮೊದಲು ಕಾರ್ತಿಕ್​ ಜೊತೆ ಕ್ಲೋಸ್​ ಆಗಿದ್ದ ಸಂಗೀತಾ ಅವರು ನಂತರ ವಿನಯ್​ ಗ್ಯಾಂಗ್​ ಸೇರಿಕೊಂಡರು. ಆ ಕಾರಣದಿಂದಲೂ ವೀಕ್ಷಕರಿಗೆ ಸಂಗೀತಾ ಬಗ್ಗೆ ಅಸಮಾಧಾನ ಉಂಟಾಯಿತು. ದಿನದಿಂದ ದಿನಕ್ಕೆ ಅವರ ಬೆಂಬಲಿಗರ ಸಂಖ್ಯೆ ಕಡಿಮೆ ಆಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್