‘ವಿನಯ್ ಗುಂಪಲ್ಲಿ ಜಾಸ್ತಿ ಖುಷಿ ಸಿಕ್ತಿದೆ’; ಅಭಿಮಾನಿಗಳ ಮನಸ್ಸು ಮುರಿದ ಸಂಗೀತಾ ಶೃಂಗೇರಿ

ಇಷ್ಟು ದಿನ ಕಾರ್ತಿಕ್ ಗ್ಯಾಂಗ್​ನಲ್ಲಿ ಸಂಗೀತಾ ಕಾಣಿಸಿಕೊಂಡಿದ್ದರು. ಕಾರ್ತಿಕ್ ಅವರಿಂದ ಸಂಗೀತಾಗೆ ಪ್ರೀತಿ ಸಿಕ್ಕಿದೆ. ಅವರ ಕೇರಿಂಗ್​ನ ಸಂಗೀತಾ ಕೂಡ ಸ್ವೀಕರಿಸಿದ್ದಾರೆ. ಆದರೆ, ಒಂದೇ ವಾರದಲ್ಲಿ ಎಲ್ಲವೂ ಬದಲಾಗಿದೆ.

‘ವಿನಯ್ ಗುಂಪಲ್ಲಿ ಜಾಸ್ತಿ ಖುಷಿ ಸಿಕ್ತಿದೆ’; ಅಭಿಮಾನಿಗಳ ಮನಸ್ಸು ಮುರಿದ ಸಂಗೀತಾ ಶೃಂಗೇರಿ
ವಿನಯ್​ ಗೌಡ ಸಂಗೀತಾ ಶೃಂಗೇರಿ
Follow us
ಮದನ್​ ಕುಮಾರ್​
|

Updated on: Nov 26, 2023 | 12:55 PM

ವಿನಯ್ ಗೌಡ ಹಾಗೂ ಸಂಗೀತಾ ಶೃಂಗೇರಿ (Sangeetha Sringeri) ಅವರು ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಬದ್ಧ ವೈರಿಗಳಂತೆ ನಡೆದುಕೊಂಡಿದ್ದರು. ‘ನನಗೆ ನಿಮ್ಮಿಂದ ಥ್ರೆಟ್ ಆಗುತ್ತಿದೆ’ ಎಂದು ಸಂಗೀತಾ ಆರೋಪಿಸಿದ್ದರು. ಈ ವಿಚಾರದಲ್ಲಿ ವಿನಯ್ ಹಾಗೂ ಸಂಗೀತಾ ಮಧ್ಯೆ ದೊಡ್ಡ ಜಗಳವೇ ಏರ್ಪಟ್ಟಿತ್ತು. ಇನ್ನು, ಬಳೆಯ ವಿಚಾರಕ್ಕೆ ವಿನಯ್ (Vinay Gowda) ಹಾಗೂ ಸಂಗೀತಾ ಮಧ್ಯೆ ನಡೆದ ವಾರ್ ಅಂತಿಂಥದ್ದಲ್ಲ. ಅಚ್ಚರಿಯ ಬೆಳವಣಿಗೆಯಲ್ಲಿ ಸಂಗೀತಾ ಅವರು ವಿನಯ್ ಗ್ಯಾಂಗ್ ಸೇರಿಕೊಂಡಿದ್ದಾರೆ. ‘ಕಾರ್ತಿಕ್​ಗಿಂತ ವಿನಯ್ ಬೆಸ್ಟ್’ ಎಂದಿದ್ದಾರೆ. ಇದು ಸಂಗೀತಾ ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಅವರ ಇನ್​ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ ದಿನ ಕಳೆದಂತೆ ತಗ್ಗುತ್ತಿರುವುದೇ ಇದಕ್ಕೆ ಉತ್ತಮ ಸಾಕ್ಷಿ.

ಇಷ್ಟು ದಿನ ಕಾರ್ತಿಕ್ ಗ್ಯಾಂಗ್​ನಲ್ಲಿ ಸಂಗೀತಾ ಕಾಣಿಸಿಕೊಂಡಿದ್ದರು. ಕಾರ್ತಿಕ್ ಅವರಿಂದ ಸಂಗೀತಾಗೆ ಪ್ರೀತಿ ಸಿಕ್ಕಿದೆ. ಅವರ ಕೇರಿಂಗ್​ನ ಸಂಗೀತಾ ಕೂಡ ಸ್ವೀಕರಿಸಿದ್ದಾರೆ. ಆದರೆ, ಒಂದೇ ವಾರದಲ್ಲಿ ಎಲ್ಲವೂ ಬದಲಾಗಿದೆ. ಗೇಮ್ ಒಂದರಲ್ಲಿ ಕಾರ್ತಿಕ್ ಹಾಗೂ ತನಿಷಾ ತಮ್ಮನ್ನು ಸೇವ್ ಮಾಡಿಲ್ಲ ಎಂದು ಸಂಗೀತಾ ಅವರು ಸಿಟ್ಟಾದರು. ಅದು ಯಾವ ಹಂತಕ್ಕೆ ಹೋಯಿತು ಎಂದರೆ ಸಂಗೀತಾ ಗ್ರೂಪ್​ನೆ ಬದಲಾಯಿಸಿಬಿಟ್ಟರು. ಗೇಮ್ ಒಂದರಲ್ಲಿ ಕಾರ್ತಿಕ್ ಅವರ ತಲೆ ಬೋಳಿಸುವಂತೆ ಸಂಗೀತಾ ಗುಂಪಿನಿಂದಲೇ ಚಾಲೆಂಜ್ ಬಂತು. ಈಗ ಸಂಗೀತಾ ಅವರು ವಿನಯ್​ ಈಸ್ ಬೆಸ್ಟ್ ಎಂದಿದ್ದಾರೆ.

ಇದನ್ನೂ ಓದಿ: ‘ನಾನು ಇಲ್ಲಿರೋಕೆ ಅರ್ಹನಲ್ಲ’; ಬಿಗ್ ಬಾಸ್ ಬಿಟ್ಟು ಹೋಗುವ ಆಲೋಚನೆ ಮಾಡಿದ ವಿನಯ್

ವೀಕೆಂಡ್​ನಲ್ಲಿ ಸುದೀಪ್ ಅವರು ವಿನಯ್ ಗ್ರೂಪ್​ನ ಬಗ್ಗೆ ಪ್ರಶ್ನೆ ಕೇಳಿದರು. ಆ ತಂಡ ಹೇಗೆ ಅನ್ನಿಸಿತು ಎಂದು ಕೇಳಿದರು. ಇದಕ್ಕೆ ಮೊದಲು ಪ್ರತಾಪ್ ಉತ್ತರಿಸಿದರು. ‘ಹಲವು ವಿಚಾರ ಈ ಟೀಂ ಸೇರಿದ ಮೇಲೆ ನನಗೆ ಗೊತ್ತಾಯಿತು. ಜೋರಾಗಿ ಮಾತನಾಡಿದರೆ ಎದುರಾಳಿ ತಂಡದವರು ಪ್ಯಾನಿಕ್ ಆಗ್ತಾರೆ ಅನ್ನೋ ಸ್ಟ್ರೆಟೆಜಿ ಈ ತಂಡ ಹೊಂದಿದೆ’ ಎಂದಿದ್ದಾರೆ ಪ್ರತಾಪ್. ಆದರೆ, ಸಂಗೀತಾ ಉತ್ತರ ಬೇರೆಯದೇ ಆಗಿತ್ತು.

‘ಅವರ ತಂಡದಲ್ಲಿ ವಿನಯ್ ಯಾವಾಗಲೂ ಕಾಲ್ ತೆಗೆದುಕೊಳ್ತಾರೆ ಎಂದುಕೊಂಡಿದ್ದೆ. ಅವರ ಟೀಂಗೆ ಹೋಗಿ ನಾನು ತಂಡದ ನಾಯಕಿಯಾದೆ. ವಿನಯ್ ಅವರು ಬಂದು ಎಲ್ಲಾದರೂ ಒತ್ತಡ ಹೇರಲು ಪ್ರಯತ್ನಿಸುತ್ತಾರಾ ಎಂಬುದನ್ನು ಗಮನಿಸಿದೆ. ಆದರೆ ಹಾಗೆ ಅನಿಸಲಿಲ್ಲ. ಅವರು ಬೇಕಂತಲೇ ಪ್ರವೋಕ್ ಮಾಡ್ತಾರಾ ಅನ್ನೋದನ್ನು ಕೂಡ ನೋಡಿದೆ. ಅವರು ಹಾಗೆ ಮಾಡಿದ್ದು ಕಾಣಲಿಲ್ಲ. ಕೇರಿಂಗ್ ಹಾಗೂ ಶಾಂತವಾಗಿರುವ ವಿನಯ್ ಕಾಣಿಸಿದರು. ವಿನಯ್ ಗುಂಪಲ್ಲಿ ಒಗ್ಗಟ್ಟಿದೆ, ಕಾರ್ತಿಕ್ ತಂಡದಲ್ಲಿ ಯುನಿಟಿ ಇರಲಿಲ್ಲ’ ಎಂದರು ಸಂಗೀತಾ.

ಇದನ್ನೂ ಓದಿ: ಬಿಗ್ ಬಾಸ್​ಗೆ ಕಾಲಿಟ್ಟ ಒರಿ; ಸುಮ್ಮನೆ ಸುತ್ತಾಡುವ ಈ ವ್ಯಕ್ತಿಗಿದ್ದಾರೆ ಐದು ಮ್ಯಾನೇಜರ್

‘ಆರು ವಾರಗಳಲ್ಲಿ ಇದ್ದ ಅಭಿಪ್ರಾಯ ಒಂದೇ ರಾತ್ರಿಯಲ್ಲಿ ಬದಲಾಗಿ ಹೋಯ್ತಾ’ ಎಂದು ಸುದೀಪ್ ಮರು ಪ್ರಶ್ನೆ ಹಾಕಿದರು. ‘ಮೊದಲು ಹೌದು ಎಂದ ಸಂಗೀತಾ ನಂತರ ಉತ್ತರ ಬದಲಿಸಿದರು. ‘ಇಲ್ಲ ನಿಧಾನವಾಗಿ ಬದಲಾಗಿದೆ. ಎಲ್ಲವನ್ನೂ ನೋಡಿ ಈ ನಿರ್ಧಾರ ತೆಗೆದುಕೊಂಡೆ. ವಿನಯ್ ಗುಂಪಲ್ಲಿ ಜಾಸ್ತಿ ಖುಷಿ ಸಿಕ್ತಿದೆ. ಇಲ್ಲಿ ಹೆಚ್ಚು ಹಿತ ಎನಿಸುತ್ತಿದೆ’ ಎಂದಿದ್ದಾರೆ ಸಂಗೀತಾ. ಇದು ಸಂಗೀತಾ ಅಭಿಮಾನಿಗಳಿಗೇ ಬೇಸರ ಮೂಡಿಸಿದೆ. ಸಂಗೀತಾ ಅವರಿಗೆ ಈ ಮೊದಲು ಇನ್​ಸ್ಟಾಗ್ರಾಮ್​ನಲ್ಲಿ 449 ಸಾವಿರ ಹಿಂಬಾಲಕರು ಇದ್ದರು. ಅಂದರೆ, 4.49 ಲಕ್ಷ. ಈಗ ಅದು 433 ಸಾವಿರಕ್ಕೆ (4.33 ಲಕ್ಷ) ಇಳಿಕೆ ಆಗಿದೆ. ಕೆಲವೇ ದಿನಗಳಲ್ಲಿ ಅವರು 16 ಸಾವಿರ ಜನ ಹಿಂಬಾಲಕರನ್ನು ಕಳೆದುಕೊಂಡಿದ್ದಾರೆ. ಬಿಗ್ ಬಾಸ್ ಜರ್ನಿ ಮೇಲೆ ಇದು ನೇರ ಪ್ರಭಾವ ಬೀರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಸಂಗೀತಾ ಅವರು ಕಾರ್ತಿಕ್ ಗ್ಯಾಂಗ್​ನ ಬಿಟ್ಟು ಹೋಗಿದ್ದು, ಈಗ ಆಡುತ್ತಿರುವ ರೀತಿ ಅನೇಕರಿಗೆ ಇಷ್ಟ ಆಗುತ್ತಿಲ್ಲ. ದಿನ ಕಳೆದಂತೆ ವಿನಯ್ ಅವರ ಚಮಚ ಆಗಿ ಸಂಗೀತಾ ಬದಲಾಗುತ್ತಿದ್ದಾರೆ ಎನ್ನುವ ಅಭಿಪ್ರಾಯವನ್ನು ಅನೇಕರು ವ್ಯಕ್ತಪಡಿಸಿದ್ದಾರೆ. ಹೊರ ಜಗತ್ತಿಗೆ ಈ ವಿಚಾರ ಸ್ಪಷ್ಟವಾಗಿ ಕಾಣುತ್ತಿದೆ. ಈ ವಿಚಾರಕ್ಕೆ ನಮ್ರತಾ ಅವರಿಗೆ ಈ ಮೊದಲು ಕ್ಲಾಸ್ ತೆಗೆದುಕೊಂಡಿದ್ದರು. ಈಗ ಆ ಸ್ಥಾನವನ್ನು ಸಂಗೀತಾ ತುಂಬುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?