Bigg Boss Kannada: ಕನ್ನಡದ ಮೇಲೆ ಮೈಕೆಲ್​ ಹೊಂದಿರುವ ಪ್ರೀತಿಗೆ ಈ ಘಟನೆ ಸಾಕ್ಷಿ; ಸುದೀಪ್ ಕೂಡ ಫಿದಾ

ತಮಗೆ ಹೆಚ್ಚು ಕನ್ನಡ ಬರುವುದಿಲ್ಲ ಎಂಬುದನ್ನೇ ನೆಪವಾಗಿಸಿಕೊಂಡು ಮೈಕೆಲ್​ ಅಜಯ್​ ಅವರು ಇಂಗ್ಲಿಷ್​ನಲ್ಲಿ ಮಾತನಾಡಿದ್ದರೆ ನಡೆಯುತ್ತಿತ್ತು. ಆದರೂ ಮೈಕೆಲ್​ ಆ ರೀತಿ ಮಾಡಿಲ್ಲ. ಅತಿ ಕಷ್ಟದ ಸಂದರ್ಭದಲ್ಲೂ ಕೂಡ ಅವರು ಕನ್ನಡಕ್ಕೆ ಮೊದಲ ಆದ್ಯತೆ ನೀಡಿದ್ದಾರೆ. ಈ ಕಾರಣದಿಂದ ಅವರಿಗೆ ಈ ವಾರ ಕಿಚ್ಚನ ಚಪ್ಪಾಳೆ ಸಿಕ್ಕಿದೆ.

Bigg Boss Kannada: ಕನ್ನಡದ ಮೇಲೆ ಮೈಕೆಲ್​ ಹೊಂದಿರುವ ಪ್ರೀತಿಗೆ ಈ ಘಟನೆ ಸಾಕ್ಷಿ; ಸುದೀಪ್ ಕೂಡ ಫಿದಾ
ಮೈಕೆಲ್​ ಅಜಯ್​
Follow us
ಮದನ್​ ಕುಮಾರ್​
|

Updated on: Nov 26, 2023 | 8:38 AM

ಬಿಗ್ ಬಾಸ್​ನಲ್ಲಿ ಸ್ಪರ್ಧಿಸುತ್ತಿರುವ ಮೈಕೆಲ್​ ಅಜಯ್​ (Michael Ajay) ಅವರು ಕನ್ನಡಿಗನಾದರೂ ಅವರು ಹುಟ್ಟಿ ಬೆಳೆದಿದ್ದು ನೈಜೀರಿಯಾದಲ್ಲಿ. ಹಾಗಾಗಿ ಅವರಿಗೆ ಅಷ್ಟೇನೂ ಚೆನ್ನಾಗಿ ಕನ್ನಡ ಮಾತನಾಡಲು ಬರುವುದಿಲ್ಲ. ಹಾಗಿದ್ದರೂ ಕೂಡ ಅವರು ಕನ್ನಡ (Kannada Language) ಕಲಿತು ಮಾತನಾಡಲು ಪ್ರಯತ್ನಿಸುತ್ತಿದ್ದಾರೆ. ಆ ಕಾರಣದಿಂದ ಅವರು ಎಲ್ಲರ ಪ್ರಶಂಸೆಗೆ ಪಾತ್ರರಾಗುತ್ತಿದ್ದಾರೆ. ಕನ್ನಡದ ಮೇಲೆ ಮೈಕೆಲ್​ ಅಜಯ್​ ಇಟ್ಟುಕೊಂಡಿರುವ ಪ್ರೀತಿಗೆ ಕಿಚ್ಚ ಸುದೀಪ್ ಕೂಡ ಫಿದಾ ಆಗಿದ್ದಾರೆ. 7ನೇ ವೀಕೆಂಡ್​ ಸಂಚಿಕೆಯಲ್ಲಿ ಸುದೀಪ್​ ಅವರು ಈ ಕುರಿತು ಮಾತನಾಡಿದ್ದಾರೆ. ಕನ್ನಡ ಕಲಿಯಲು ಮನಸಾರೆ ಶ್ರಮಿಸುತ್ತಿರುವ ಮೈಕೆಲ್​ ಅಜಯ್​ ಅವರಿಗೆ ಈ ವಾರದ ಕಿಚ್ಚನ ಚಪ್ಪಾಳೆ (Kichchana Chappale) ಸಿಕ್ಕಿದೆ. ಅತಿಯಾಗಿ ಇಂಗ್ಲಿಷ್​ ಮಾತನಾಡುವ ಇತರೆ ಸ್ಪರ್ಧಿಗಳಿಗೆ ಸುದೀಪ್​ ಕ್ಲಾಸ್​ ತೆಗೆದುಕೊಂಡಿದ್ದಾರೆ.

ಮೈಕೆಲ್​ ಅಜಯ್​ ಅವರು ಬಿಗ್​ ಬಾಸ್​ಗೆ ಎಂಟ್ರಿ ನೀಡುವಾಗ ಕೂಡ ಕನ್ನಡದ ಬಗ್ಗೆ ಮಾತನಾಡಿದ್ದರು. ‘ನನಗೆ ಅವಕಾಶ ಕೊಟ್ಟರೆ ನಿಮಗೆಲ್ಲರಿಗೂ ಒಂದು ಡಿಫರೆಂಟ್​ ಕನ್ನಡ ಸಿಗುತ್ತದೆ’ ಎಂದು ಅವರು ಹೇಳಿದ್ದರು. ಕೊಟ್ಟ ಮಾತಿನಂತೆಯೇ ಅವರು ಕನ್ನಡ ಕಲಿಯುವಲ್ಲಿ ಶ್ರಮಪಡುತ್ತಿದ್ದಾರೆ. ಅದು ಕಿಚ್ಚ ಸುದೀಪ್​ ಅವರ ಗಮನ ಸೆಳೆದಿದೆ. ಕರ್ನಾಟಕದಲ್ಲಿ ಹುಟ್ಟಿ ಬೆಳೆದವರೇ ಇಂಗ್ಲಿಷ್​ ವ್ಯಾಮೋಹವನ್ನು ಅತಿಯಾಗಿ ಅಂಟಿಸಿಕೊಂಡಿರುವಾಗ ಮೈಕೆಲ್​ ಅಜಯ್​ ಅವರು ಎಲ್ಲ ಮಾತಿನಲ್ಲೂ ಕನ್ನಡ ಬಳಸಲು ಪ್ರಯತ್ನಿಸುತ್ತಿರುವುದು ವೀಕ್ಷಕರ ಮೆಚ್ಚುಗೆಗೆ ಕಾರಣ ಆಗಿದೆ.

ಇದನ್ನೂ ಓದಿ: BBK 10: ಬಿಗ್​ ಬಾಸ್​ ಮನೆಯಲ್ಲಿ ಅತಿಯಾಗಿ ಇಂಗ್ಲಿಷ್​ ಮಾತಾಡುವ ಮಂದಿಗೆ ಕಿಚ್ಚ ಸುದೀಪ್​ ಕ್ಲಾಸ್​

ತಮಗೆ ಹೆಚ್ಚು ಕನ್ನಡ ಬರುವುದಿಲ್ಲ ಎಂಬುದನ್ನೇ ನೆಪವಾಗಿಸಿಕೊಂಡು ಮೈಕೆಲ್​ ಅಜಯ್​ ಅವರು ಇಂಗ್ಲಿಷ್​ನಲ್ಲಿ ಮಾತನಾಡಿದ್ದರೆ ನಡೆಯುತ್ತಿತ್ತು. ಆದರೆ ಮೈಕೆಲ್​ ಆ ರೀತಿ ಮಾಡಿಲ್ಲ. ಅತಿ ಕಷ್ಟದ ಸಂದರ್ಭದಲ್ಲೂ ಕೂಡ ಅವರು ಕನ್ನಡಕ್ಕೆ ಮೊದಲ ಆದ್ಯತೆ ನೀಡಿದ್ದಾರೆ. ‘ಅವಕಾಶವಾದಿ’ ಎಂಬ ಪದವನ್ನು ಕೂಡ ಅವರು ಕಲಿತುಕೊಂಡು ಬಳಕೆ ಮಾಡಿದ್ದಾರೆ. ಇದು ಸುದೀಪ್​ ಅವರಿಗೆ ಹೆಚ್ಚು ಇಷ್ಟ ಆಯಿತು. ಕನ್ನಡದ ಮೇಲೆ ಮೈಕೆಲ್​ ಎಷ್ಟು ಪ್ರೀತಿ ಇಟ್ಟುಕೊಂಡಿದ್ದಾರೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ ಆಯಿತು. ಈ ಎಲ್ಲ ಕಾರಣದಿಂದ ಅವರಿಗೆ ಕಿಚ್ಚನ ಚಪ್ಪಾಳೆ ಸಿಕ್ಕಿತು.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ ನೈಜೀರಿಯಾ ಕನ್ನಡಿಗ ಮೈಕೆಲ್​ ಅಜಯ್​; ಏನು ಇವರ ಹಿನ್ನೆಲೆ?

ಶನಿವಾರದ (ನವೆಂಬರ್​ 25) ಸಂಚಿಕೆಯಲ್ಲಿ ಮೈಕೆಲ್ ಅಜಯ್​ ಅವರಿಗೆ ಕಿಚ್ಚ ಸುದೀಪ್​​ ಅವರು ‘ಕಂಗ್ರ್ಯಾಜುಲೇಷನ್​’ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ಮೈಕೆಲ್​ ಅಜಯ್​ ಅವರು ಕನ್ನಡದಲ್ಲಿಯೇ ‘ಧನ್ಯವಾದಗಳು ಸರ್​’ ಎಂದರು. ಇದು ಸುದೀಪ್​ ಅವರ ಮನ ಮುಟ್ಟಿತು. ಒಂದಷ್ಟು ಜನರಿಗೆ ಮೈಕೆಲ್​ ಆಟ ಇಷ್ಟ ಆಗುತ್ತಿದೆ. ಈಶಾನಿ ಹೊರಗೆ ಹೋದ ಬಳಿಕ ಮೈಕೆಲ್​ ಹೆಚ್ಚು ಚುರುಕಾಗಿದ್ದಾರೆ. ಅವರು ಫಿನಾಲೆ ತನಕ ಪೈಪೋಟಿ ನೀಡುತ್ತಾರೋ ಇಲ್ಲವೋ ಎಂಬುದನ್ನು ಕಾದು ನೋಡಬೇಕು. ‘ಜಿಯೋ ಸಿನಿಮಾ’ದಲ್ಲಿ ಈ ಶೋ ಉಚಿತವಾಗಿ 24 ಗಂಟೆಯೂ ಪ್ರಸಾರ ಆಗುತ್ತಿದೆ. ‘ಕಲರ್ಸ್​ ಕನ್ನಡ’ ವಾಹಿನಿಯಲ್ಲಿ ಪ್ರತಿ ರಾತ್ರಿ 9.30ಕ್ಕೆ ಎಪಿಸೋಡ್​ ಬಿತ್ತರ ಆಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?