AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿನಯ್​ಗಾಗಿ ಬಾತ್​ರೂಂ ಕಾದ ಸ್ನೇಹಿತ್​ಗೆ ಚಳಿ ಬಿಡಿಸಿದ ಸುದೀಪ್

Bigg Boss: ಬಿಗ್​ಬಾಸ್ ಮನೆಯಲ್ಲಿ ಜಂಟಲ್​ಮ್ಯಾನ್ ರೀತಿ ವರ್ತಿಸುವ ಸ್ನೇಹಿತ್​, ಈ ವಾರವೂ ಸಹ ಸುದೀಪ್​ರಿಂದ ಟೀಕೆಗೆ ಒಳಗಾದರು. ಡ್ರೋನ್ ಪ್ರತಾಪ್​ ಜೊತೆ ಸ್ನೇಹಿತ್ ನಡೆದುಕೊಂಡ ರೀತಿಯನ್ನು ಸುದೀಪ್ ಟೀಕಿಸಿದರು.

ವಿನಯ್​ಗಾಗಿ ಬಾತ್​ರೂಂ ಕಾದ ಸ್ನೇಹಿತ್​ಗೆ ಚಳಿ ಬಿಡಿಸಿದ ಸುದೀಪ್
ಡ್ರೋನ್ ಪ್ರತಾಪ್
ಮಂಜುನಾಥ ಸಿ.
|

Updated on: Nov 25, 2023 | 11:33 PM

Share

ಸ್ನೇಹಿತ್​ ತಮ್ಮ ಓವರ್ ಸ್ಮಾರ್ಟ್​ನೆಸ್​ನಿಂದಾಗಿ ಪ್ರತಿವಾರಾಂತ್ಯದಲ್ಲೂ ಒಂದಲ್ಲ ಒಂದು ಕಾರಣಕ್ಕೆ ಸುದೀಪ್ (Sudeep) ಅವರಿಂದ ಬೈಸಿಕೊಳ್ಳುತ್ತಿರುತ್ತಾರೆ. ಕಳೆದ ವಾರ ಭಾಗ್ಯಶ್ರೀ ಅವರೊಟ್ಟಿಗೆ ಸ್ನೇಹಿತ್ ಆಡಿದ ಮಾತಿನಿಂದಾಗಿ ಸುದೀಪ್ ಕೈಲಿ ಬೈಸಿಕೊಂಡಿದ್ದರು. ಈ ವಾರ ಪ್ರತಾಪ್ (Prathap)​ ಅನ್ನು ಸುಖಾ ಸುಮ್ಮನೆ ಕಾಡಿಸಿದ್ದು ಮಾತ್ರವಲ್ಲದೆ, ಪ್ರತಾಪ್ ಅನ್ನು ಹೆದರಿಸಲು ಪ್ರಯತ್ನಿಸಿದ ಕಾರಣಕ್ಕೆ ಬೈಸಿಕೊಂಡರು.

ಬಾತ್​ರೂಂಗೆ ಹೋಗಲು ಬಂದ ಡ್ರೋನ್ ಪ್ರತಾಪ್ ಅನ್ನು ಅಲ್ಲೇ ಇದ್ದ ಸ್ನೇಹಿತ್ ಉದ್ದೇಶಪೂರ್ವಕವಾಗಿ ತಡೆದಿದ್ದರು. ಆಗಿದ್ದಿಷ್ಟು ವಿನಯ್ ಸ್ನಾನಕ್ಕೆ ಹೋಗಲು ಕಾಯುತ್ತಿದ್ದರು, ಡ್ರೋನ್ ಪ್ರತಾಪ್ ಸಹ ಅಲ್ಲಿಯೇ ಇದ್ದರು. ಅಸಲಿಗೆ ಆಗ ಡ್ರೋನ್ ಪ್ರತಾಪ್ ಆಗ ಬಾತ್​ರೂಂ ಬಳಸಬೇಕಿತ್ತು. ಆದರೆ ವಿನಯ್​, ಟವೆಲ್ ತರಲು ಹೋಗುತ್ತಿರುವುದಾಗಿ ಹೇಳಿ ಹೋದರು, ಆಗ ಡ್ರೋನ್ ಪ್ರತಾಪ್ ಬಾತ್​ರೂಂ ಒಳಗೆ ಹೋಗಿಬಿಡುತ್ತಾರೆ ಎಂದು, ಸ್ನೇಹಿತ್ ಕೂಡಲೇ ಬಾತ್​ರೂಂಗೆ ನುಗ್ಗಿದರು.

ಸ್ನೇಹಿತ್​ಗೆ ಬಾತ್​ರೂಂನಲ್ಲಿ ಏನೂ ಕೆಲಸವಿರಲಿಲ್ಲ ಆದರೆ ಪ್ರತಾಪ್ ಬಾತ್​ರೂಂ ಬಳಸದಂತೆ ತಡೆಯಲು ಹಾಗೆ ಮಾಡಿದರು. ಅದಾದ ಬಳಿಕ ವಿನಯ್ ಬರುವುದು ಬಹಳವೇ ತಡವಾಯ್ತು ಆದರೂ ಸ್ನೇಹಿತ್ ಹೊರಗೆ ಬರಲಿಲ್ಲ, ಹೊರಗಿನಿಂದ ಪ್ರತಾಪ್ ಕರೆದರೂ, ಕೇಳಿ ಕೊಂಡರು ಹೊರಗೆ ಬರಲಿಲ್ಲ, ಬಳಿಕ ವಿನಯ್ ಬಂದಮೇಲೆ ಸ್ನೇಹಿತ್ ಹೊರಗೆ ಬಂದು, ವಿನಯ್​ಗೆ ಬಾತ್​ರೂಂ ಬಿಟ್ಟುಕೊಟ್ಟರು. ಇದನ್ನು ಪ್ರಶ್ನೆ ಮಾಡಿದ ಪ್ರತಾಪ್ ಅನ್ನು ಏನು ಮಾಡ್ಕೋತೀಯಾ ಎಂದು ಬೆದರಿಕೆ ಹಾಕುವ ರೀತಿಯಲ್ಲಿ ಪ್ರಶ್ನೆ ಮಾಡಿದರು.

ಇದನ್ನೂ ಓದಿ:ಗ್ರೂಪ್​ ಬಿಟ್ಟು ಹೋದ ಡ್ರೋನ್ ಪ್ರತಾಪ್ ಬಗ್ಗೆ ವರ್ತೂರು-ತುಕಾಲಿ ಬೇಸರ

ವೀಕೆಂಡ್ ಎಪಿಸೋಡ್​ನಲ್ಲಿ ಬಂದಿದ್ದ ಸುದೀಪ್ ಸ್ನೇಹಿತ್​ರ ಈ ನಡೆಯನ್ನು ಬಹುವಾಗಿ ಟೀಕಿಸಿದರು. ಸ್ನೇಹಿತ್​ರನ್ನು ಮಾತ್ರವಲ್ಲದೆ ವಿನಯ್​ರನ್ನು ಈ ವಿಷಯವಾಗಿ ಟೀಕಿಸಿದರು. ‘ಈ ಬಾತ್​ರೂಂ ಕಾಯುವ ಕೆಲಸ ಯಾವಾಗ ಪ್ರಾರಂಭ ಮಾಡಿಕೊಂಡಿರಿ. ವಿನಯ್​ಗೆ ಅವರದ್ದು ಅವರಿಗೆ ತೊಳೆದುಕೊಳ್ಳಲು ಬರುವುದಿಲ್ಲವೇ ನೀವು ಹೋಗಿ ತೊಳೆಯಬೇಕೆ’ ಎಂದು ಸಹ ಪ್ರಶ್ನೆ ಮಾಡಿದರು.

ಅಲ್ಲದೆ, ತಾವು ಡ್ರೋನ್​ ಪ್ರತಾಪ್​ಗೆ ಬಾತ್​ರೂಂ ನೀಡದೇ ಇರುವ ಬಗ್ಗೆ ಖುಷಿಯಿಂದ ತಮ್ಮ ತಂಡದ ಮುಂದೆ ಹೇಳಿಕೊಂಡು ನಗಾಡಿದ್ದನ್ನು ಹಾಗೂ ಸ್ನೇಹಿತ್ ಮಾತಿಗೆ ಅವರ ಗೆಳೆಯರ ತಂಡ ಸಹ ಅದೇ ರೀತಿಯ ಪ್ರತಿಕ್ರಿಯೆ ನೀಡಿದ್ದನ್ನು ಸಹ ಸುದೀಪ್ ಸೂಕ್ಷ್ಮವಾಗಿ ಟೀಕಿಸಿದರು. ಅಲ್ಲದೆ, ಹಾಗೆ ಮಾಡಿದ್ದು ತಪ್ಪು ಎಂಬುದನ್ನು ಸೂಚ್ಯವಾಗಿ ತಿಳಿಸಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ