AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊರಬಿತ್ತು ಬಿಗ್​ ಬಾಸ್​ ಸ್ಪರ್ಧಿಯ ಪ್ರೆಗ್ನೆನ್ಸಿ ಟೆಸ್ಟ್ ರಿಸಲ್ಟ್; ಅಭಿಮಾನಿಗಳಿಗೆ ಗುಡ್ ನ್ಯೂಸ್

ಬಿಗ್ ಬಾಸ್​ನಲ್ಲಿ ಇತ್ತೀಚೆಗೆ ಪತಿಯ ಜೊತೆ ಅಂಕಿತಾ ಮಾತನಾಡುತ್ತಿದ್ದರು. ‘ನನಗೆ ಪಿರಿಯಡ್ಸ್ ಆಗಿಲ್ಲ. ನನ್ನ ಭಾವನೆಗಳಲ್ಲಿ ಸಾಕಷ್ಟು ಏರಿಳಿತ ಉಂಟಾಗುತ್ತಿದೆ. ನಾನು ಪ್ರೆಗ್ನೆಂಟ್ ಎನ್ನುವ ಭಾವನೆ ಕಾಡುತ್ತಿದೆ’ ಎಂದು ಅಂಕಿತಾ ಹೇಳಿದ್ದರು.

ಹೊರಬಿತ್ತು ಬಿಗ್​ ಬಾಸ್​ ಸ್ಪರ್ಧಿಯ ಪ್ರೆಗ್ನೆನ್ಸಿ ಟೆಸ್ಟ್ ರಿಸಲ್ಟ್; ಅಭಿಮಾನಿಗಳಿಗೆ ಗುಡ್ ನ್ಯೂಸ್
ಅಂಕಿತಾ-ವಿಕ್ಕಿ
ರಾಜೇಶ್ ದುಗ್ಗುಮನೆ
|

Updated on:Nov 25, 2023 | 3:01 PM

Share

ಅಂಕಿತಾ ಲೋಖಂಡೆ (Ankita Lokhande) ಹಾಗೂ ವಿಕ್ಕಿ ಜೈನ್ ದಂಪತಿ ಹಿಂದಿ ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ. ಅಂಕಿತಾ ಅವರು ಇತ್ತೀಚೆಗೆ ಮಾತನಾಡುತ್ತಾ ತಾವು ಪ್ರೆಗ್ನೆಂಟ್ ಆಗಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಆ ಬಳಿಕ ಬಿಗ್ ಬಾಸ್ ಕಡೆಯಿಂದ ಪ್ರೆಗ್ನೆನ್ಸಿ ಟೆಸ್ಟ್ ಮಾಡಲಾಯಿತು. ಟೆಸ್ಟ್​ ವೇಳೆ ರಿಸಲ್ಟ್ ನೆಗೆಟಿವ್ ಬಂದಿದೆ. ಇದರಿಂದ ಅಂಕಿತಾ ಹಾಗೂ ಅವರ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಒಂದೊಮ್ಮೆ ಪ್ರೆಗ್ನೆಂಟ್ ಆಗಿದ್ದರೆ ಅವರು ಮನೆಯಿಂದ ಹೊರ ಹೋಗಬೇಕಾದ ಪರಿಸ್ಥಿತಿ ಬಂದೊದಗುತ್ತಿತ್ತು. ಹೀಗಾಗಿ, ಇದನ್ನು ಸ್ಪರ್ಧಿಗಳು ಗುಡ್ ನ್ಯೂಸ್ ಎಂದು ಕರೆದಿದ್ದಾರೆ.

ಬಿಗ್ ಬಾಸ್​ನಲ್ಲಿ ಇತ್ತೀಚೆಗೆ ಪತಿಯ ಜೊತೆ ಅಂಕಿತಾ ಮಾತನಾಡುತ್ತಿದ್ದರು. ‘ನನಗೆ ಪಿರಿಯಡ್ಸ್ ಆಗಿಲ್ಲ. ನನ್ನ ಭಾವನೆಗಳಲ್ಲಿ ಸಾಕಷ್ಟು ಏರಿಳಿತ ಉಂಟಾಗುತ್ತಿದೆ. ನಾನು ಪ್ರೆಗ್ನೆಂಟ್ ಎನ್ನುವ ಭಾವನೆ ಕಾಡುತ್ತಿದೆ’ ಎಂದು ಅಂಕಿತಾ ಹೇಳಿದ್ದರು. ಇದನ್ನು ಹಾಸ್ಯಕ್ಕೆ ಹೇಳಿಲ್ಲ ಎಂಬುದು ಅವರ ಮುಖದ ಭಾವನೆ ನೋಡಿಯೇ ಅಭಿಮಾನಿಗಳಿಗೆ ಸ್ಪಷ್ಟವಾಗಿತ್ತು. ವಿಕ್ಕಿ ಜೊತೆ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಎಲ್ಲರೂ ಊಹಿಸಿದ್ದರು. ಆದರೆ, ಅದು ಸುಳ್ಳಾಗಿದೆ.

ಅಂಕಿತಾ ಅವರ ಪ್ರೆಗ್ನೆನ್ಸಿ ಟೆಸ್ಟ್​ನ ರಿಸಲ್ಟ್ ಬಂದಿದೆ ಎನ್ನಲಾಗಿದೆ. ಅವರು ಪ್ರೆಗ್ನೆಂಟ್ ಅಲ್ಲ ಅನ್ನೋದು ಖಚಿತವಾಗಿದೆ. ಈ ಬಗ್ಗೆ ಬಿಗ್ ಬಾಸ್ ಮನೆಯಲ್ಲಿ ಶೀಘ್ರವೇ ಘೋಷಣೆ ಆಗುತ್ತದೆಯೇ ಅಥವಾ ಈ ವಿಚಾರವನ್ನು ಗುಟ್ಟಾಗಿಯೇ ಇಡಲಾಗುತ್ತದೆ ಎನ್ನುವ ಕುತೂಹಲ ಮೂಡಿದೆ.

ಅಂಕಿತಾ ಲೋಖಂಡೆ ಅವರು ಸುಶಾಂತ್ ಸಿಂಗ್ ರಜಪೂತ್ ಜೊತೆ ಪ್ರೀತಿಯಲ್ಲಿದ್ದರು. ಇಬ್ಬರೂ ಆರು ವರ್ಷಗಳ ಕಾಲ ಸುತ್ತಾಟ ನಡೆಸಿದ್ದರು. ಸುಶಾಂತ್ ಸಿಂಗ್​ಗೆ ಯಶಸ್ಸು ಸಿಕ್ಕ ಬಳಿಕ ಅವರು ಅಂಕಿತಾ ಇಂದ ದೂರವಾದರು ಎನ್ನಲಾಗಿದೆ. ಅಂಕಿತಾ ಅವರು ನಂತರ ವಿಕ್ಕಿಯನ್ನು ಮದುವೆ ಆದರು. ಇಬ್ಬರ ಮಧ್ಯೆ ಸಾಕಷ್ಟು ಮನಸ್ತಾಪಗಳು ಇವೆ. ಅದು ಬಿಗ್ ಬಾಸ್ ಮನೆಯಲ್ಲಿ ಕಾಣುತ್ತಿದೆ.

ಇದನ್ನೂ ಓದಿ: ‘ಪ್ರತೀ ಬಾರಿ ಇದೇ ಡ್ರಾಮಾ’; ಹೊಡೆದಾಟದ ಹಂತಕ್ಕೆ ಹೋಯ್ತು ಬಿಗ್ ಬಾಸ್ ಟಾಸ್ಕ್​

ಅಂಕಿತಾ ಹಾಗೂ ವಿಕ್ಕಿ ಸಾಕಷ್ಟು ಕಿತ್ತಾಟ ನಡೆಸುತ್ತಿದ್ದಾರೆ. ವಿಕ್ಕಿಗೆ ಇತ್ತೀಚೆಗೆ ಅಂಕಿತಾ ಚಪ್ಪಲಿ ಬೀಸಿ ಹೊಡೆದಿದ್ದರು. ಈ ವಿಡಿಯೋ ವೈರಲ್ ಆಗಿತ್ತು. ಪತ್ನಿ ಚಪ್ಪಲಿ ಎಸೆದಿದ್ದನ್ನು ವಿಕ್ಕಿ ಸಹಜವಾಗಿಯೇ ಸ್ವೀಕರಿಸಿದ್ದರು. ಇವರು ಶೀಘ್ರವೇ ವಿಚ್ಛೇದನ ಪಡೆಯುತ್ತಾರೆ ಎನ್ನುವ ಸುದ್ದಿ ಹರಿದಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 3:01 pm, Sat, 25 November 23