AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪ್ರತೀ ಬಾರಿ ಇದೇ ಡ್ರಾಮಾ’; ಹೊಡೆದಾಟದ ಹಂತಕ್ಕೆ ಹೋಯ್ತು ಬಿಗ್ ಬಾಸ್ ಟಾಸ್ಕ್​

ಆರಂಭದಲ್ಲಿ ಎಲ್ಲವೂ ಸರಿಯಾಗಿಯೇ ಇತ್ತು. ಆದರೆ, ಸ್ನೇಹಿತ್ ಅವರು ತುಕಾಲಿ ಸಂತೋಷ್ ಅವರ ಮೈಮೇಲೆ ಬಿದ್ದ ಕಾರಣ ಗಲಾಟೆ ಶುರುವಾಯಿತು.  

‘ಪ್ರತೀ ಬಾರಿ ಇದೇ ಡ್ರಾಮಾ’; ಹೊಡೆದಾಟದ ಹಂತಕ್ಕೆ ಹೋಯ್ತು ಬಿಗ್ ಬಾಸ್ ಟಾಸ್ಕ್​
ಬಿಗ್ ಬಾಸ್
ರಾಜೇಶ್ ದುಗ್ಗುಮನೆ
|

Updated on: Nov 24, 2023 | 7:39 AM

Share

ಬಿಗ್ ಬಾಸ್​ನಲ್ಲಿ (Bigg Boss) ಒಂದು ಟಾಸ್ಕ್ ಕೊಟ್ಟರೆ ಸಾಕು ಸ್ಪರ್ಧಿಗಳ ಮಧ್ಯೆ ಕಿತ್ತಾಟ ಶುರುವಾಗುತ್ತದೆ. ಎರಡೂ ಟೀಂನವರು ಬದ್ಧ ವೈರಿಗಳಂತೆ ಆಟ ಆಡುತ್ತಾರೆ. ನವೆಂಬರ್ 23ರ ಎಪಿಸೋಡ್​ನಲ್ಲಿ ಆಗಿದ್ದೂ ಇದೇ. ಮೈಕೆಲ್ ನೇತೃತ್ವದ ಸಂಪತ್ತಿಗೆ ಸವಾಲ್ ತಂಡ ಹಾಗೂ ಸಂಗೀತಾ ನೇತೃತ್ವದ ಗಜಕೇಸರಿ ತಂಡದ ಮಧ್ಯೆ ಕಿತ್ತಾಟ ನಡೆದಿದೆ. ಒಬ್ಬರ ಹೂವನ್ನು ಮತ್ತೊಬ್ಬರು ಕಿತ್ತುಕೊಳ್ಳುವ ಹಂತಕ್ಕೆ ಫೈಟ್ ಹೋಗಿದೆ.

ಕೃತಕ ಹೂವುಗಳನ್ನು ಬಿಗ್ ಬಾಸ್ ಕಳುಹಿಸಿಕೊಟ್ಟಿದ್ದರು. ಈ ಹೂವನ್ನು ನಿಗದಿ ಪಡಿಸಿದ ಜಾಗದಲ್ಲಿ ನೆಡಬೇಕಿತ್ತು. ಆ ಬಳಿಕ ಎದುರಾಳಿ ತಂಡದವರು ಇದನ್ನು ಕೀಳಬೇಕು. ಕೊನೆಯಲ್ಲಿ ಯಾರು ಹೆಚ್ಚು ಹೂವುಗಳನ್ನು ನೆಟ್ಟಿರುತ್ತಾರೋ ಅವರು ಗೆದ್ದಂತೆ. ಆರಂಭದಲ್ಲಿ ಎಲ್ಲವೂ ಸರಿಯಾಗಿಯೇ ಇತ್ತು. ಆದರೆ, ಸ್ನೇಹಿತ್ ಅವರು ತುಕಾಲಿ ಸಂತೋಷ್ ಅವರ ಮೈಮೇಲೆ ಬಿದ್ದ ಕಾರಣ ಗಲಾಟೆ ಶುರುವಾಯಿತು.

ಇದನ್ನೂ ಓದಿ: ಇನ್​ಸ್ಟಾಗ್ರಾಮ್​ನಲ್ಲಿ 11 ಸಾವಿರ ಹಿಂಬಾಲಕರನ್ನು ಕಳೆದುಕೊಂಡ ಸಂಗೀತಾ ಶೃಂಗೇರಿ

ಮೈಕೆಲ್ ಹೋಗಿ ಎದುರಾಳಿ ತಂಡದ ಹೂವುಗಳನ್ನು ಕಸಿದುಕೊಂಡರು. ಆ ಬಳಿಕ ವಿನಯ್ ಬಂದು ಕಾರ್ತಿಕ್ ಅವರಿಂದ ಹೂವನ್ನು ಕಸಿದುಕೊಂಡರು. ಎರಡೂ ತಂಡಗಳ ಮಧ್ಯೆ ಇದೇ ರೀತಿಯ ಕಿತ್ತಾಟ ಮುಂದುವರಿಯಿತು. ಇದು ವೀಕ್ಷಕರ ಬೇಸರಕ್ಕೆ ಕಾರಣ ಆಗಿದೆ. ‘ಪ್ರತೀ ಬಾರಿ ಇದೇ ಡ್ರಾಮಾ’ ಎಂದು ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಅಪಸ್ವರ ತೆಗೆದಿದ್ದಾರೆ.

ಇದನ್ನೂ ಓದಿ: ವಿಕ್ಟಿಮ್ ಕಾರ್ಡ್​ ಪ್ಲೇ ಮಾಡ್ತಿದ್ದಾರೆ ಸಂಗೀತಾ? ನಟಿಯ ನಡೆಯಿಂದ ಅಭಿಮಾನಿಗಳಿಗೆ ಬೇಸರ

ಈ ಮೊದಲು ಕೂಡ ಇದೇ ಮಾದರಿಯ ಟಾಸ್ಕ್ ನೀಡಲಾಗಿತ್ತು. ಆಗಲೂ ಎರಡೂ ತಂಡದವರು ಕಿತ್ತಾಡಿಕೊಂಡಿದ್ದರು. ಟಾಸ್ಕ್ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು. ಈಗಲೂ ಹಾಗೆಯೇ ಆಗಿದೆ. ಒಂದು ಟಾಸ್ಕ್ ಮಾಡಬೇಕಾದರೆ ಅದಕ್ಕೆ ಸಾಕಷ್ಟು ಜನರ ಶ್ರಮ ಇರುತ್ತದೆ. ಸ್ಪರ್ಧಿಗಳು ಆ ಶ್ರಮವನ್ನು ಹಾಳು ಮಾಡಿಬಿಡುತ್ತಾರೆ. ಈ ವಿಚಾರದಲ್ಲಿ ಸುದೀಪ್ ಅವರು ವೀಕೆಂಡ್​ನಲ್ಲಿ ಕ್ಲಾಸ್ ತೆಗೆದುಕೊಳ್ಳುವ ಸಾಧ್ಯತೆ ಇದೆ. ಕರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ‘ಬಿಗ್ ಬಾಸ್’ ಎಪಿಸೋಡ್ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ ಲೈವ್ ನೋಡಲು ಅವಕಾಶ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ