AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅವನು ನನ್ನ ಬಾಯ್​ಫ್ರೆಂಡ್​ ಅಲ್ಲ, ಇನ್ನು ಮಾತನಾಡಲ್ಲ’; ಶಪಥ ಮಾಡಿದ ಸಂಗೀತಾ  

ಊಟದ ವಿಚಾರದಲ್ಲಿ ಕಿರಿಕ್ ಆಗಿತ್ತು. ಕಾರ್ತಿಕ್ ಅವರು ಜೋರು ಧ್ವನಿಯಲ್ಲಿ ಮಾತನಾಡಿದ್ದು ಸಂಗೀತಾಗೆ ಬೇಸರ ಮೂಡಿಸಿದೆ. ಕಾರ್ತಿಕ್ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎನ್ನುವ ಭಾವನೆ ಅವರನ್ನು ಕಾಡುತ್ತಿದೆ. ಹೀಗಾಗಿ, ಪದೇ ಪದೇ ಮನೆ ಬಿಟ್ಟು ಹೋಗುವ ಬಗ್ಗೆ ಮಾತನಾಡುತ್ತಿದ್ದಾರೆ.

‘ಅವನು ನನ್ನ ಬಾಯ್​ಫ್ರೆಂಡ್​ ಅಲ್ಲ, ಇನ್ನು ಮಾತನಾಡಲ್ಲ’; ಶಪಥ ಮಾಡಿದ ಸಂಗೀತಾ  
ಸಂಗೀತಾ-ಕಾರ್ತಿಕ್
ರಾಜೇಶ್ ದುಗ್ಗುಮನೆ
|

Updated on:Nov 23, 2023 | 6:31 AM

Share

ಸಂಗೀತಾ ಶೃಂಗೇರಿ ಹಾಗೂ ಕಾರ್ತಿಕ್ ಮಹೇಶ್ (Karthik Mahesh) ಮಧ್ಯೆ ಕಿತ್ತಾಟ ನಡೆಯುತ್ತಲೇ ಇದೆ. ಕಳೆದ ವಾರ ನಡೆದ ಟಾಸ್ಕ್​​ನಲ್ಲಿ ಸಂಗೀತಾ ಅವರು ಕಾರ್ತಿಕ್ ವಿರುದ್ಧ ಸಿಟ್ಟಾಗಿದ್ದರು. ಈ ವಾರ ಬೇರೆಯದೇ ಕಥೆ ಆಗಿದೆ. ತಲೆ ಬೋಳಿಸಿಕೊಳ್ಳುವ ಚಾಲೆಂಜ್​ನ ಕಾರ್ತಿಕ್​ಗೆ ನೀಡಲಾಯಿತು. ಇದನ್ನು ಅವರು ಸ್ವೀಕರಿಸಿದ್ದಾರೆ. ಅವರು ತಲೆ ಬೋಳಿಸಿಕೊಂಡಿದ್ದಾರೆ. ಇದು ಸಂಗೀತಾಗೆ ತುಂಬಾನೇ ಹರ್ಟ್ ಮಾಡಿದಂತಿದೆ. ಈ ಕಾರಣಕ್ಕೆ ಸಂಗೀತಾ ಮನೆ ಬಿಟ್ಟು ಹೋಗುವ ನಿರ್ಧಾರಕ್ಕೆ ಬಂದಿದ್ದಾರೆ. ಕಾರ್ತಿಕ್ ಸೇಡುತೀರಿಸಿಕೊಳ್ಳಬಹುದು ಎನ್ನುವ ಭಯ ಅವರನ್ನು ಕಾಡಿದಂತಿದೆ.

ಊಟದ ವಿಚಾರದಲ್ಲಿ ಕಿರಿಕ್ ಆಗಿತ್ತು. ಕಾರ್ತಿಕ್ ಅವರು ಜೋರು ಧ್ವನಿಯಲ್ಲಿ ಮಾತನಾಡಿದ್ದು ಸಂಗೀತಾಗೆ ಬೇಸರ ಮೂಡಿಸಿದೆ. ಕಾರ್ತಿಕ್ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎನ್ನುವ ಭಾವನೆ ಅವರನ್ನು ಕಾಡುತ್ತಿದೆ. ಹೀಗಾಗಿ, ಪದೇ ಪದೇ ಮನೆ ಬಿಟ್ಟು ಹೋಗುವ ಬಗ್ಗೆ ಮಾತನಾಡುತ್ತಿದ್ದಾರೆ. ಈ ವಿಚಾರದಲ್ಲಿ ಕಾರ್ತಿಕ್ ಅವರು ಸಂಗೀತಾನ ಸಮಾಧಾನ ಮಾಡಲು ಬಂದಿದ್ದಾರೆ. ಆದರೆ, ಸಂಗೀತಾ ಆಡಿದ ಮಾತು ಕಾರ್ತಿಕ್​ಗೆ ಬೇಸರ ತರಿಸಿದೆ.

‘ಅವನು ನನ್ನ ಬಾಯ್​ಫ್ರೆಂಡ್ ಅಲ್ಲ. ನನಗೆ ಸಖತ್ ಸ್ಟ್ರೆಸ್ ಆಗುತ್ತಿದೆ’ ಎಂದು ಸಂಗೀತಾ ಕೂಗಾಡಿದ್ದಾರೆ. ಆ ಬಳಿಕ ವಿನಯ್, ನಮ್ರತಾ ಸಮಾಧಾನ ಮಾಡಲು ಬಂದಿದ್ದಾರೆ. ಇದಕ್ಕೂ ಸಂಗೀತಾ ಜಗ್ಗಲಿಲ್ಲ. ಆ ಬಳಿಕ ಕಾರ್ತಿಕ್ ಎಂಟ್ರಿ ಕೊಟ್ಟಿದ್ದಾರೆ. ಕಾರ್ತಿಕ್ ಸಮಾಧಾನ ಮಾಡಲು ಪ್ರಯತ್ನಿಸಿದರೂ ಅದು ಸಾಧ್ಯವಾಗಿಲ್ಲ.

ಇದನ್ನೂ ಓದಿ: ಹೆಣ್ಮಕ್ಕಳ ಬಗ್ಗೆ ಡ್ರೋನ್​ ಪ್ರತಾಪ್​ ಹೇಳಿದ ಗಾದೆ ಮಾತು ಕೇಳಿ ಕಾರ್ತಿಕ್​ ಮಹೇಶ್​ ಕಕ್ಕಾಬಿಕ್ಕಿ

‘ದಯವಿಟ್ಟು ಇಲ್ಲಿಂದ ಹೋಗಿ. ನಾನು ಎಂದಿಗೂ ನಿಮ್ಮ ಜೊತೆ ಮಾತನಾಡುವುದಿಲ್ಲ. ಇಲ್ಲಷ್ಟೇ ಅಲ್ಲ, ಬಿಗ್ ಬಾಸ್​ನಿಂದ ಹೋದ ಬಳಿಕವೂ ನಿಮ್ಮ ಜೊತೆ ನಾನು ಮಾತುಕತೆ ಮುಂದುವರಿಸಲ್ಲ’ ಎಂದಿದ್ದಾರೆ ಅವರು. ಇದು ಕಾರ್ತಿಕ್​ಗೆ ಬೇಸರ ಮೂಡಿಸಿದೆ. ಹೀಗಾಗಿ, ಆ ಜಾಗದಿಂದ ಅವರು ಹೊರ ಬಂದಿದ್ದಾರೆ. ವಿನಯ್ ಗೌಡ ಅವರು ರಾತ್ರಿ ಒತ್ತಾಯ ಮಾಡಿಸಿ ಸಂಗೀತಾಗೆ ಊಟ ಬಡಿಸಿದ್ದಾರೆ. ಆಗಲೂ, ‘ನಾನು ಕಾರ್ತಿಕ್ ಮಾಡಿದ ಅಡುಗೆ ಊಟ ಮಾಡಲ್ಲ’ ಎಂದು ಹೇಳಿದ್ದಾರೆ ಸಂಗೀತಾ. ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಕಾಣುತ್ತದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ 24 ಗಂಟೆ ಲೈವ್ ಕೂಡ ವಿಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:36 pm, Wed, 22 November 23

Follow Us
ಒಮೈದಿಯಾ ಏರ್​ಪೋರ್ಟ್​ ಮೇಲೆ ಅಮೆರಿಕ ಬಾಂಬ್ ದಾಳಿ
ಒಮೈದಿಯಾ ಏರ್​ಪೋರ್ಟ್​ ಮೇಲೆ ಅಮೆರಿಕ ಬಾಂಬ್ ದಾಳಿ
Dudhsagar Falls: ಹಾಲಿನ ಕಡಲಿನಂತೆ ಹರಿಯುತ್ತಿದೆ ದೂದ್‌ ಸಾಗರ್​!
Dudhsagar Falls: ಹಾಲಿನ ಕಡಲಿನಂತೆ ಹರಿಯುತ್ತಿದೆ ದೂದ್‌ ಸಾಗರ್​!
ಸ್ಕೂಟಿಯಲ್ಲಿ ಗಾಂಜಾ ಮಾರಲು ಬಂದು ಪೊಲೀಸರ ಕೈಗೆ ಸಿಕ್ಕಿಬಿದ್ದ ಮಹಿಳೆ
ಸ್ಕೂಟಿಯಲ್ಲಿ ಗಾಂಜಾ ಮಾರಲು ಬಂದು ಪೊಲೀಸರ ಕೈಗೆ ಸಿಕ್ಕಿಬಿದ್ದ ಮಹಿಳೆ
ಮಿಥುನ ರಾಶಿಯಲ್ಲಿ ಸೂರ್ಯ, ಚಂದ್ರ ಸಂಚಾರ: ಇಂದಿನ ರಾಶಿ ಭವಿಷ್ಯ ಹೇಗಿದೆ ನೋಡಿ
ಮಿಥುನ ರಾಶಿಯಲ್ಲಿ ಸೂರ್ಯ, ಚಂದ್ರ ಸಂಚಾರ: ಇಂದಿನ ರಾಶಿ ಭವಿಷ್ಯ ಹೇಗಿದೆ ನೋಡಿ
ಎಸ್ ಜಾನಕಿ ಅವರೊಟ್ಟಿಗಿನ ಅನುಬಂಧ ನೆನೆದ ಹಿರಿಯ ನಟ ಶ್ರೀನಾಥ್
ಎಸ್ ಜಾನಕಿ ಅವರೊಟ್ಟಿಗಿನ ಅನುಬಂಧ ನೆನೆದ ಹಿರಿಯ ನಟ ಶ್ರೀನಾಥ್
ಬೆಳೆ ಹಾನಿ ಪರಿಹಾರದ ಬಗ್ಗೆ ಸರ್ಕಾರ ನಿರ್ಧಾರ ಮಾಡುತ್ತದೆ: ಸತೀಶ್ ಜಾರಕಿಹೊಳಿ
ಬೆಳೆ ಹಾನಿ ಪರಿಹಾರದ ಬಗ್ಗೆ ಸರ್ಕಾರ ನಿರ್ಧಾರ ಮಾಡುತ್ತದೆ: ಸತೀಶ್ ಜಾರಕಿಹೊಳಿ
ಹೊಳೆ ದಾಟೋಕೆ ದೊಣ್ಣೆ‌ನಾಯಕನ ಅಪ್ಪಣೆ ಬೇಕೆ: ಖರ್ಗೆಗೆ ಜೋಶಿ ತಿರುಗೇಟು
ಹೊಳೆ ದಾಟೋಕೆ ದೊಣ್ಣೆ‌ನಾಯಕನ ಅಪ್ಪಣೆ ಬೇಕೆ: ಖರ್ಗೆಗೆ ಜೋಶಿ ತಿರುಗೇಟು
ಎಸ್ ಜಾನಕಿ ಅವರಿಗೆ ಗೌರವ ವಂದನೆ ಸಮರ್ಪಣೆ: ವಿಡಿಯೋ ನೋಡಿ
ಎಸ್ ಜಾನಕಿ ಅವರಿಗೆ ಗೌರವ ವಂದನೆ ಸಮರ್ಪಣೆ: ವಿಡಿಯೋ ನೋಡಿ
ಎಸ್ ಜಾನಕಿ ಅವರಿಗಿದ್ದ ನೋವೇನು? ಭಾರತಿ ವಿಷ್ಣುವರ್ಧನ್ ಮಾತು
ಎಸ್ ಜಾನಕಿ ಅವರಿಗಿದ್ದ ನೋವೇನು? ಭಾರತಿ ವಿಷ್ಣುವರ್ಧನ್ ಮಾತು
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್