‘ಸ್ನೇಹಿತ್ ಮೂರ್ಖತನಕ್ಕೆ ಅವರೇ ಸಾಟಿ’; ಯಾರೇ ಹೇಳಿದರೂ ಬದಲಾಗುವುದಿಲ್ಲ ಈ ವ್ಯಕ್ತಿ

ಬಿಗ್ ಬಾಸ್​ನಲ್ಲಿ ಸ್ನೇಹಿತ್ ಗೌಡ ಉತ್ತಮ ಆಟಗಾರನಾಗಿ ಗುರುತಿಸಿಕೊಳ್ಳಬೇಕಿತ್ತು. ಆದರೆ, ವಿನಯ್ ಗೌಡ ಹಾಗೂ ನಮ್ರತಾ ಅವರ ಜೊತೆ ಕ್ಲೋಸ್ ಆಗುವ ಪ್ರಯತ್ನದಲ್ಲಿ ಅವರು ತಮ್ಮತನವನ್ನು ಕಳೆದುಕೊಂಡಿದ್ದಾರೆ. ಏಳು ವಾರಗಳ ಆಟದಲ್ಲಿ ಅವರು ಎಂದಿಗೂ ತಮ್ಮ ಆಟವನ್ನು ತೋರಿಸಿಯೇ ಇಲ್ಲ.

‘ಸ್ನೇಹಿತ್ ಮೂರ್ಖತನಕ್ಕೆ ಅವರೇ ಸಾಟಿ’; ಯಾರೇ ಹೇಳಿದರೂ ಬದಲಾಗುವುದಿಲ್ಲ ಈ ವ್ಯಕ್ತಿ
ಸ್ನೇಹಿತ್ ಗೌಡ
Follow us
ರಾಜೇಶ್ ದುಗ್ಗುಮನೆ
|

Updated on:Nov 25, 2023 | 10:45 AM

ಬಿಗ್ ಬಾಸ್​ನಲ್ಲಿ (Bigg Boss) ಪ್ರತಿ ವಾರ ಉತ್ತಮ ಹಾಗೂ ಕಳಪೆ ನೀಡಲಾಗುತ್ತದೆ. ಕಳಪೆ ನೀಡಿದವರಿಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಉತ್ತಮ ಸಿಕ್ಕವರಿಗೆ ಮೆಡಲ್ ಸಿಗುತ್ತದೆ. ಇದನ್ನು ಯಾರು, ಯಾರೊಂದಿಗೂ ಚರ್ಚೆ ಮಾಡುವಂತೆ ಇಲ್ಲ. ಆದರೆ, ಸ್ನೇಹಿತ್ ಅವರು ಈ ಮೊದಲು ಮನೆ ಮಂದಿಯ ಜೊತೆ ಚರ್ಚೆ ಮಾಡಿದ್ದರು. ಈ ಬಗ್ಗೆ ಸುದೀಪ್ ಬುದ್ಧಿವಾದ ಹೇಳಿದ್ದರು. ಬಿಗ್ ಬಾಸ್ ನಿಯಮ ಈ ರೀತಿ ಎಂದು ತಿದ್ದಿದ್ದರು. ಆದರೂ, ಅವರು ಬದಲಾಗಲೇ ಇಲ್ಲ. ಇದು ಅವರ ಮೂರ್ಖತನ ಎಂದು ಅನೇಕರು ಕರೆದಿದ್ದಾರೆ.

ಬಿಗ್ ಬಾಸ್​ನಲ್ಲಿ ಸ್ನೇಹಿತ್ ಗೌಡ ಉತ್ತಮ ಆಟಗಾರನಾಗಿ ಗುರುತಿಸಿಕೊಳ್ಳಬೇಕಿತ್ತು. ಆದರೆ, ವಿನಯ್ ಗೌಡ ಹಾಗೂ ನಮ್ರತಾ ಅವರ ಜೊತೆ ಕ್ಲೋಸ್ ಆಗುವ ಪ್ರಯತ್ನದಲ್ಲಿ ಅವರು ತಮ್ಮತನವನ್ನು ಕಳೆದುಕೊಂಡಿದ್ದಾರೆ. ಏಳು ವಾರಗಳ ಆಟದಲ್ಲಿ ಅವರು ಎಂದಿಗೂ ತಮ್ಮ ಆಟವನ್ನು ತೋರಿಸಿಯೇ ಇಲ್ಲ. ಅವರು ಈಗಾಗಲೇ ಬಿಗ್ ಬಾಸ್​ ಮನೆಯಿಂದ ಔಟ್ ಆಗಿರಬೇಕಿತ್ತು ಎಂಬುದು ಅನೇಕರ ಅಭಿಪ್ರಾಯ. ಅವರು ತಲೆಯಲ್ಲಿ ಬುದ್ಧಿ ಇಲ್ಲದೆ ಆಡುತ್ತಿದ್ದಾರೆ ಎಂದು ಕೂಡ ಅನೇಕರು ಮಾತನಾಡಿದ್ದಾರೆ.

ನಮ್ರತಾ, ವಿನಯ್ ಹಾಗೂ ಸ್ನೇಹಿತ್ ಕುಳಿತಿದ್ದರು. ಈ ವೇಳೆ ಸ್ನೇಹಿತ್ ಉತ್ತಮ ಯಾರಿಗೆ ನೀಡಬೇಕು ಎನ್ನುವ ಚರ್ಚೆ ತೆಗೆದಿದ್ದಾರೆ. ‘ಕಾರ್ತಿಕ್ ಒಳ್ಳೆಯ ರೀತಿಯ ಆಟ ಆಡಿದ್ದಾರೆ. ಅವರ ಬಗ್ಗೆ ಜನರಿಗೆ ಸಿಂಪತಿ ಇದೆ. ಅವರಿಗೆ ಈ ವಾರ ನಾವು ಕಳಪೆ ನೀಡೋದು ಬೇಡ. ನಾವು ಪ್ರತಾಪ್​ನ ಹೀರೋ ಮಾಡಿದ್ದು ಹಾಗೆಯೇ. ಕಾರ್ತಿಕ್​ಗೆ ಕಳಪೆ ನೀಡಿದರೆ ಅವರಿಗೇ ಹೆಚ್ಚು ಫೂಟೇಜ್ ಸಿಗುತ್ತದೆ’ ಎಂದಿದ್ದಾರೆ ಸ್ನೇಹಿತ್.

ಇದನ್ನೂ ಓದಿ: ‘ಪ್ರತೀ ಬಾರಿ ಇದೇ ಡ್ರಾಮಾ’; ಹೊಡೆದಾಟದ ಹಂತಕ್ಕೆ ಹೋಯ್ತು ಬಿಗ್ ಬಾಸ್ ಟಾಸ್ಕ್​

ಈ ವಿಚಾರಗಳನ್ನು ಚರ್ಚೆ ಮಾಡುವಂತಿಲ್ಲ ಎಂದು ಪದೇ ಪದೇ ಹೇಳಿದರೂ ಸ್ನೇಹಿತ್ ಅದೇ ತಪ್ಪನ್ನು ಮಾಡುತ್ತಿದ್ದಾರೆ. ‘ಸ್ನೇಹಿತ್ ಮೂರ್ಖತನಕ್ಕೆ ಸ್ನೇಹಿತ್ ಅವರೇ ಸಾಕ್ಷಿ’ ಎಂದು ಅನೇಕರು ಅಭಿಪ್ರಾಯ ಹೊರಹಾಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:41 am, Sat, 25 November 23