AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನೀವೇನು ಮೇಲಿನಿಂದ ಇಳಿದುಬಂದಿಲ್ಲ’; ವಿನಯ್, ಸ್ನೇಹಿತ್ ಗುಂಪುಗಾರಿಕೆಗೆ ಪ್ರತಾಪ್ ತಿರುಗೇಟು

‘ನೀವೇನು ಮೇಲಿನಿಂದ ಇಳಿದುಬಂದಿಲ್ಲ’; ವಿನಯ್, ಸ್ನೇಹಿತ್ ಗುಂಪುಗಾರಿಕೆಗೆ ಪ್ರತಾಪ್ ತಿರುಗೇಟು

ರಾಜೇಶ್ ದುಗ್ಗುಮನೆ
|

Updated on:Nov 24, 2023 | 11:00 AM

Share

ಡ್ರೋನ್​ ಪ್ರತಾಪ್ ಹಾಗೂ ಸ್ನೇಹಿತ್ ಮಧ್ಯೆ ಕಿತ್ತಾಟ ಆಗಿದೆ. ಬಾತ್​ರೂಂನ ತಮಗೆ ಬೇಕಾದವರಿಗೆ ಬಿಟ್ಟುಕೊಡಲು ವಿನಯ್ ಹಾಗೂ ಸ್ನೇಹಿತ್ ತಮ್ಮದೇ ತಂತ್ರ ರೂಪಿಸಿದ್ದರು. ಇದನ್ನು ಪ್ರತಾಪ್ ಪ್ರಶ್ನೆ ಮಾಡಿದ್ದಾರೆ.

ಪ್ರತಾಪ್ (Prathap) ಅವರನ್ನು ತಮ್ಮತ್ತ ಸೆಳೆದುಕೊಳ್ಳಲು ವಿನಯ್, ಸ್ನೇಹಿತ್ ಹಾಗೂ ನಮ್ರತಾ ಪ್ರಯತ್ನಿಸಿದ್ದರು. ಇದರಲ್ಲಿ ಅವರು ಯಶಸ್ಸು ಪಡೆದಿದ್ದರು ಕೂಡ. ಆದರೆ, ಇದು ಹೆಚ್ಚು ದಿನ ನಿಲ್ಲಲಿಲ್ಲ. ಪ್ರತಾಪ್​ಗೆ ಅವರ ಜೊತೆ ಸರಿ ಹೊಂದುತ್ತಲೇ ಇಲ್ಲ. ಈಗ ಡ್ರೋನ್​ ಪ್ರತಾಪ್ ಹಾಗೂ ಸ್ನೇಹಿತ್ ಮಧ್ಯೆ ಕಿತ್ತಾಟ ಆಗಿದೆ. ಬಾತ್​ರೂಂನ ತಮಗೆ ಬೇಕಾದವರಿಗೆ ಬಿಟ್ಟುಕೊಡಲು ವಿನಯ್ ಹಾಗೂ ಸ್ನೇಹಿತ್ ತಮ್ಮದೇ ತಂತ್ರ ರೂಪಿಸಿದ್ದರು. ಇದನ್ನು ಪ್ರತಾಪ್ ಪ್ರಶ್ನೆ ಮಾಡಿದ್ದಾರೆ. ‘ನೀವೇನು ಮೇಲಿನಿಂದ ಬಂದವರಲ್ಲ’ ಎಂದು ಪ್ರತಾಪ್ ನೇರವಾಗಿ ಹೇಳಿದ್ದಾರೆ. ಈ ವಿಚಾರ ವೀಕೆಂಡ್​ನಲ್ಲಿ ಚರ್ಚೆಗೆ ಬರೋ ಸಾಧ್ಯತೆ ಇದೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಎಪಿಸೋಡ್ ವೀಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published on: Nov 24, 2023 10:59 AM

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More