AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಜೈಲು ಸೇರಿದ ವರ್ತೂರು ಸಂತೋಷ್, ಆದರೆ ಜೈಲಿಂದ ಪರಾರಿ

Bigg Boss: ಹುಲಿ ಉಗುರು ಪ್ರಕರಣದಲ್ಲಿ ಬಿಗ್​ಬಾಸ್ ಮನೆಯಿಂದ ಜೈಲು ಪಾಲಾಗಿದ್ದ ವರ್ತೂರು ಸಂತೋಷ್ ಈಗ ಮತ್ತೆ ಜೈಲು ಸೇರಿದ್ದಾರೆ ಮಾತ್ರವಲ್ಲ ಅಲ್ಲಿಂದ ತಪ್ಪಿಸಿಕೊಂಡಿದ್ದಾರೆ ಸಹ!

ಮತ್ತೆ ಜೈಲು ಸೇರಿದ ವರ್ತೂರು ಸಂತೋಷ್, ಆದರೆ ಜೈಲಿಂದ ಪರಾರಿ
ವರ್ತೂರು ಸಂತೋಷ್
ಮಂಜುನಾಥ ಸಿ.
|

Updated on: Nov 24, 2023 | 3:36 PM

Share

ಹಳ್ಳಿಕಾರ್ ತಳಿ ಸಂರಕ್ಷಕನಾಗಿ ಗುರುತಿಸಿಕೊಂಡಿದ್ದ ವರ್ತೂರು ಸಂತೋಷ್ (Varthur Santhosh) ಬಿಗ್​ಬಾಸ್ 10 ರ (Bigg Boss) ಸ್ಪರ್ಧಿಯಾಗಿ ಗಮನ ಸೆಳೆಯುತ್ತಿದ್ದಾರೆ. ಬಿಗ್​ಬಾಸ್ ಮನೆ ಸೇರಿದ ಕೆಲವೇ ದಿನಗಳಲ್ಲಿ ಹುಲಿ ಉಗುರು ಧರಿಸಿದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿ ಜೈಲು ಸೇರಿದ್ದರು. ಕೆಲ ದಿನ ಜೈಲು ವಾಸ ಅನುಭವಿಸಿದ ವರ್ತೂರು ಸಂತೋಷ್ ಜಾಮೀನಿನ ಮೇಲೆ ಬಿಡುಗಡೆ ಹೊಂದಿ ಮತ್ತೆ ಬಿಗ್​ಬಾಸ್ ಮನೆ ಪ್ರವೇಶಿಸಿದ್ದರು. ಈಗ ಮತ್ತೊಮ್ಮೆ ಜೈಲು ಸೇರಿದ್ದಾರೆ. ಮಾತ್ರವಲ್ಲ ಜೈಲಿನಿಂದ ತಪ್ಪಿಸಿಕೊಂಡಿದ್ದಾರೆ ಸಹ.

ಬಿಗ್​ಬಾಸ್ ಮನೆಯಲ್ಲಿಯೂ ಒಂದು ಜೈಲಿರುವ ಸಂಗತಿ ಗೊತ್ತಿರುವುದೇ. ಪ್ರತಿ ವಾರ ಒಬ್ಬ ಸ್ಪರ್ಧಿಯನ್ನು ಜೈಲಿಗೆ ಹಾಕಲಾಗುತ್ತದೆ. ಆ ವಾರ ಯಾವ ಸ್ಪರ್ಧಿ ಕಳಪೆ ಪ್ರದರ್ಶನ ನೀಡಿರುತ್ತಾನೆಯೋ ಅಂಥಹವನ್ನು ಮನೆಯ ಸ್ಪರ್ಧಿಗಳು ಒಮ್ಮತದಿಂದ ಕಳಪೆ ಎಂದು ಹೆಸರಿಸಿ ಮನೆಯ ಒಳಗೆ ಇರುವ ಜೈಲಿನಲ್ಲಿ ಇರಿಸಲಾಗುತ್ತದೆ. ಹಾಗೆಯೇ ಈ ವಾರ ಮನೆಯ ಸದಸ್ಯರು ಹಲವರು ವರ್ತೂರು ಸಂತೋಷ್ ಅನ್ನು ಕಳಪೆ ಎಂದು ನಿರ್ಧರಿಸಿ ಅವರನ್ನು ಕ್ಯಾಪ್ಟನ್ ಕಾರ್ತಿಕ್ ಜೈಲಿಗೆ ಹಾಕಿದ್ದಾರೆ.

ಬಿಗ್​ಬಾಸ್​ನ ಇತರೆ ಸ್ಪರ್ಧಿಗಳು ವರ್ತೂರು ಸಂತೋಷ್ ಅವರನ್ನು ಕಳಪೆ ಎಂದು ತೀರ್ಮಾನಿಸಿ, ಅವರಿಗೆ ಜೈಲು ಉಡುಗೆ ನೀಡಿದ್ದಾರೆ. ಈ ಸಮಯದಲ್ಲಿ ಮಾತನಾಡಿರುವ ವರ್ತೂರು ಸಂತೋಷ್, ಕಳಪೆ ಮಾತ್ರವಲ್ಲ, ವಿಷಕಾರಿ ಎಂದು ಬೇಕಾದರೂ ನನ್ನನ್ನು ಕರೆಯಿರಿ ನನ್ನ ವ್ಯಕ್ತಿತ್ವ ಎಂಥಹದ್ದು ಎಂಬುದು ನನಗೆ ಗೊತ್ತು ಎಂದು ಹೇಳಿದ್ದಾರೆ. ಮಾತ್ರವಲ್ಲದೆ ಮುಂದುವರೆದು ಇಲ್ಲೆಲ್ಲ ನಡೆಯುವುದು ನರಿ ಸಂಚು ಎಂದು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಸಹ.

ಇದನ್ನೂ ಓದಿ:ಕಾಗೆ-ಕೋಗಿಲೆ ಕಥೆ ಹೇಳಿದ ವರ್ತೂರು ಸಂತೋಷ್; ಇಲ್ಲಿ ಕಾಗೆ ಯಾರು, ಕೋಗಿಲೆ ಯಾರು?

ಇದೆಲ್ಲ ಆಗಿ ವರ್ತೂರು ಸಂತೋಷ್ ಅವರನ್ನು ಜೈಲಿಗೆ ಹಾಕಲಾಗಿದೆ. ಜೈಲಿನ ಹೊರಗೆ ಕುಳಿತಿದ್ದ ತುಕಾಲಿ ಸಂತು ಬಳಿ ಮಾತನಾಡುತ್ತಾ, ಈ ವರೆಗೆ ಯಾರೂ ಜೈಲಿನಿಂದ ಹೊರಗೆ ಬಂದಿಲ್ಲ ಅಲ್ಲವಾ? ಎಂದು ವರ್ತೂರು ಪ್ರಶ್ನೆ ಮಾಡಿದ್ದಾರೆ. ಆಗ ತುಕಾಲಿ, ಈವರೆಗೆ ಯಾರೂ ಬಂದಿಲ್ಲ, ಬಂದು ಬಿಡಣ್ಣ ನೋಡೋಣ ಎಂದು ತುಕಾಲಿ, ವರ್ತೂರು ಸಂತುಗೆ ಗುರಿದುಂಬಿಸಿದ್ದಾರೆ. ಕೂಡಲೇ ವರ್ತೂರು ಸಂತೋಷ್, ಜೈಲಿನ ಸರಳುಗಳ ಮಧ್ಯದಿಂದ ತೂರಿಕೊಂಡು ಹೊರಗೆ ಬಂದಿದ್ದಾರೆ.

ಸದ್ಯಕ್ಕೆ ಬಿಡುಗಡೆ ಆಗಿರುವ ಪ್ರೋಮೋನಲ್ಲಿ ವರ್ತೂರು ಸಂತೋಷ್ ಜೈಲಿನಿಂದ ತಪ್ಪಿಸಿಕೊಂಡಿರುವುದನ್ನು ಮಾತ್ರವೇ ತೋರಿಸಲಾಗಿದೆ. ಜೈಲಿನಿಂದ ತಪ್ಪಿಸಿಕೊಂಡಿರುವ ವರ್ತೂರು ಮುಂದೇನು ಮಾಡಿದರು. ವರ್ತೂರು ಅವರ ಈ ಕೃತ್ಯಕ್ಕೆ ಮನೆಯ ಸ್ಪರ್ಧಿಗಳು ಹೇಗೆ ಸ್ಪಂದಿಸಿದರು ಇತ್ಯಾದಿಗಳು ಇಂದು (ಶುಕ್ರವಾರ) ರಾತ್ರಿ ಎಪಿಸೋಡ್​ನಲ್ಲಿ ಗೊತ್ತಾಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ