Bigg Boss Kannada: ಬಿಗ್​ಬಾಸ್ ಮನೆಯಲ್ಲಿ ಎದುರಾಳಿಯ ತಲೆ ಬೋಳಿಸಿದ ಸ್ಪರ್ಧಿಗಳು

Bigg Boss: ಬಿಗ್​ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವೆ ‘ಆಟ’ ಮಿತಿ ಮೀರಿದೆ. ಈ ಹಿಂದೆ ಗೆಳೆಯರಾಗಿದ್ದ ಸಂಗೀತಾ ಕಾರ್ತಿಕ್ ಈಗ ದೂರಾಗಿದ್ದಾರೆ. ಟಾಸ್ಕ್ ಒಂದರಲ್ಲಿ ಸಂಗೀತಾ, ಕಾರ್ತಿಕ್ ಹಾಗೂ ತುಕಾಲಿಯ ತಲೆ ಬೋಳಿಸುವಂತೆ ಮಾಡಿದ್ದಾರೆ.

Bigg Boss Kannada: ಬಿಗ್​ಬಾಸ್ ಮನೆಯಲ್ಲಿ ಎದುರಾಳಿಯ ತಲೆ ಬೋಳಿಸಿದ ಸ್ಪರ್ಧಿಗಳು
ತುಕಾಲಿ-ಕಾರ್ತಿಕ್
Follow us
|

Updated on:Nov 21, 2023 | 12:17 PM

ಬಿಗ್​ಬಾಸ್ (Bigg Boss) ಮನೆಯಲ್ಲಿ ವಾರಗಳ ಕಳೆದಂತೆ ಕೆಲವು ಸ್ಪರ್ಧಿಗಳ ನಿಜ ವ್ಯಕ್ತಿತ್ವಗಳು ಹೊರಗೆ ಬರುತ್ತಿವೆ. ಆಟ ನಂತರ ಮೊದಲು ಗೆಳತನ, ಮೊದಲು ಮಾನವೀಯತೆ ಎಂದು ಯೋಚಿಸುವ ಕೆಲವು ಸ್ಪರ್ಧಿಗಳಿದ್ದಾರೆ. ಆದರೆ ಟಾಸ್ಕ್ ಗೆಲ್ಲಲು ಯಾವ ಹಂತಕ್ಕಾದರೂ ಹೋಗುವ ಮನಸ್ಥಿತಿಯ ಕೆಲವು ಸ್ಪರ್ಧಿಗಳು ಬಿಗ್​ಬಾಸ್ ಮನೆಯಲ್ಲಿದ್ದಾರೆ. ಬಿಗ್​ಬಾಸ್​ನ ಟಾಸ್ಕ್​ ಒಂದರಲ್ಲಿ ಸ್ಪರ್ಧಿಗಳು ಎದುರಾಳಿ ತಂಡದ ಇಬ್ಬರು ಸ್ಪರ್ಧಿಗಳ ತಲೆ ಬೋಳಿಸಿದ್ದಾರೆ.

ಈಗ ಬಿಡುಗಡೆ ಆಗಿರುವ ಪ್ರೋಮೋನಲ್ಲಿರುವಂತೆ ಬಿಗ್​ಬಾಸ್​ ಮನೆಯ ಸ್ಪರ್ಧಿಗಳಿಗೆ ಟಾಸ್ಕ್ ಒಂದನ್ನು ನೀಡಿದ್ದಾರೆ. ಮನೆಯ ಸದಸ್ಯರನ್ನು ಎರಡು ತಂಡಗಳನ್ನಾಗಿ ಮಾಡಿ ಪರಸ್ಪರ ಸವಾಲುಗಳನ್ನು ಹಾಕಿ ಆ ಸವಾಲುಗಳನ್ನು ಎದುರಾಳಿ ತಂಡ ಸ್ವೀಕರಿಸಬೇಕು ಅಥವಾ ಕೈಬಿಡಬೇಕು ಹೀಗೊಂದು ಟಾಸ್ಕ್ ನಲ್ಲಿ ಸ್ಪರ್ಧಿಗಳು ಭಾಗವಹಿಸಿದ್ದಾರೆ.

ಈ ಹಿಂದೆ ಒಂದೇ ತಂಡದವರಾಗಿದ್ದ ಸಂಗೀತಾ ಹಾಗೂ ಕಾರ್ತಿ ಅವರು ಈಗ ಎದುರಾಳಿ ತಂಡದವರಾಗಿದ್ದಾರೆ. ಹಾಗಾಗಿ ಸಂಗೀತಾ, ಎದುರಾಳಿ ತಂಡದ ಸದಸ್ಯರಾದ ಕಾರ್ತಿಕ್ ಹಾಗೂ ತುಕಾಲಿ ಸಂತು ಅವರು ತಲೆ ಬೋಳಿಸಿಕೊಳ್ಳಬೇಕು ಎಂಬ ಅತಿರೇಕದ ಸವಾಲು ಹಾಕಿದರು. ಈ ಸವಾಲು ಕೇಳಿ ಕಾರ್ತಿಕ್, ತನಿಷಾ ಅವರೆಲ್ಲ ಅವಾಕ್ಕಾದರು. ಕೊನೆಗೆ ಕಾರ್ತಿಕ್ ತಂಡಕ್ಕಾಗಿ ತಲೆ ಬೋಳಿಸಿಕೊಳ್ಳಲು ಸಿದ್ಧ ಎಂದರು. ತುಕಾಲಿ ಸಂತು ಸಹ ಕಾರ್ತಿಕ್ ಜೊತೆಗೆ ತಾವೂ ತಲೆ ಬೋಳಿಸಿಕೊಳ್ಳಲು ಕುಳಿತುಕೊಂಡರು. ಮನೆಯ ಸದಸ್ಯರೇ ಕಾರ್ತಿಕ್ ಅವರ ತಲೆ ಬೋಳಿಸಿದರು.

ಇದನ್ನೂ ಓದಿ:ಮದುವೆ ಬಗ್ಗೆ ಬಿಗ್​ಬಾಸ್ ಮನೆ ಒಳಗೆ ಏನು ಹೇಳಿಕೊಂಡಿದ್ದಾರೆ ವರ್ತೂರು ಸಂತೋಷ್?

ಈ ಸಮಯದಲ್ಲಿ ತನಿಷಾ, ಸಂಗೀತಾಗೆ ಬುದ್ಧಿ ಹೇಳುವ ಪ್ರಯತ್ನ ಮಾಡಿದರು. ಈ ಸವಾಲು ಅತಿರೇಕದ್ದಾಯಿತು ಎಂದು ಮನದಟ್ಟು ಮಾಡುವ ಪ್ರಯತ್ನ ಮಾಡಿದರು. ಆದರೆ ಸಂಗೀತಾ ಯಾರ ಮಾತು ಕೇಳುವ ಸ್ಥಿತಿಯಲ್ಲರಲಿಲ್ಲ. ಈ ವೇಳೆ ತನಿಷಾ ಹಾಗೂ ನಮ್ರತಾ ನಡುವೆಯೂ ಜೋರು ಗಲಾಟೆಗಳಾದವು. ಇವರ ಜಗಳ, ಆಟಗಳನ್ನು ಮೂಲೆಯಲ್ಲಿ ಕೂತು ನೋಡುತ್ತಿದ್ದ ಬ್ರಹ್ಮಾಂಡ ಗುರೂಜಿ.

ಬಿಗ್​ಬಾಸ್: ವಿನಯ್​ ಬಗ್ಗೆ ಹೊರಬಂದ ಭಾಗ್ಯಶ್ರೀ ಹೇಳಿದ್ದೇನು?

ಆರಂಭದ ವಾರಗಳಲ್ಲಿ ಸಂಗೀತಾರ ಆಟ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಆದರೆ ವಾರಗಳು ಕಳೆದಂತೆ ಸಂಗೀತಾರ ನಿಜ ವ್ಯಕ್ತಿತ್ವ ಹೊರಗೆ ಬರುತ್ತಿದೆ. ಡಾಮಿನೆಂಟ್, ಸ್ವಪ್ರತಿಷ್ಟೆ, ವಿತಂಡ ವಾದಗಳಿಂದ ಮನೆಯಲ್ಲಿದ್ದ ತಮ್ಮ ಗೆಳೆಯರನ್ನು ಸಂಗೀತಾ ಕಳೆದುಕೊಂಡಿದ್ದಾರೆ ಜೊತೆಗೆ ದಿನೇ ದಿನೇ ‘ಲೇಡಿ ವಿನಯ್’ ಆಗುತ್ತಾ ಸಾಗುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:45 am, Tue, 21 November 23

ತಾಜಾ ಸುದ್ದಿ
ಸದನದಲ್ಲಿ ರೇವಣ್ಣ ಕಾರ್ನರ್ ಆದಾಗ ಅಣ್ಣನ ನೆರವಿಗೆ ಧಾವಿಸಿದ ಕುಮಾರಣ್ಣ
ಸದನದಲ್ಲಿ ರೇವಣ್ಣ ಕಾರ್ನರ್ ಆದಾಗ ಅಣ್ಣನ ನೆರವಿಗೆ ಧಾವಿಸಿದ ಕುಮಾರಣ್ಣ
ರಾಜಕೀಯ ಭವಿಷ್ಯ ಕುರಿತು ವಿ ಸೋಮಣ್ಣ ಗೊಂದಲದಲ್ಲಿರುವುದು ಮಾತುಗಳಿಂದ ಸ್ಪಷ್ಟ
ರಾಜಕೀಯ ಭವಿಷ್ಯ ಕುರಿತು ವಿ ಸೋಮಣ್ಣ ಗೊಂದಲದಲ್ಲಿರುವುದು ಮಾತುಗಳಿಂದ ಸ್ಪಷ್ಟ
ಐಸಿಸ್ ಸಂಪರ್ಕ ಹೊಂದಿರುವ ವ್ಯಕ್ತಿ ವಿಜಯಪುರದಲ್ಲಿದ್ದಾನೆ: ಬಸನಗೌಡ ಯತ್ನಾಳ್
ಐಸಿಸ್ ಸಂಪರ್ಕ ಹೊಂದಿರುವ ವ್ಯಕ್ತಿ ವಿಜಯಪುರದಲ್ಲಿದ್ದಾನೆ: ಬಸನಗೌಡ ಯತ್ನಾಳ್
ವಿಪಕ್ಷ ಸದಸ್ಯರಿಂದ ಸದನದ ಸಮಯ ಹಾಳು ಮತ್ತು ಜನಕ್ಕೆ ವಂಚನೆ: ಸಿದ್ದರಾಮಯ್ಯ
ವಿಪಕ್ಷ ಸದಸ್ಯರಿಂದ ಸದನದ ಸಮಯ ಹಾಳು ಮತ್ತು ಜನಕ್ಕೆ ವಂಚನೆ: ಸಿದ್ದರಾಮಯ್ಯ
ಸೋಮಣ್ಣ ಎಲ್ಲೂ ಹೋಗಲ್ಲ, ಅವರೊಂದಿಗೆ ಮಾತಾಡುತ್ತೇನೆ: ಬಿಎಸ್ ಯಡಿಯೂರಪ್ಪ
ಸೋಮಣ್ಣ ಎಲ್ಲೂ ಹೋಗಲ್ಲ, ಅವರೊಂದಿಗೆ ಮಾತಾಡುತ್ತೇನೆ: ಬಿಎಸ್ ಯಡಿಯೂರಪ್ಪ
ನಾನು ಮೊದಲು ಸ್ಟ್ರಾಂಗ್ ಆಗಿದ್ದನ್ನು ಬಿಜೆಪಿ ಒಪ್ಪಿಕೊಂಡಿದೆ: ಸಿದ್ದರಾಮಯ್ಯ
ನಾನು ಮೊದಲು ಸ್ಟ್ರಾಂಗ್ ಆಗಿದ್ದನ್ನು ಬಿಜೆಪಿ ಒಪ್ಪಿಕೊಂಡಿದೆ: ಸಿದ್ದರಾಮಯ್ಯ
ಬೆಳಗಾವಿ ಅಧಿವೇಶನ: ಉತ್ತರ ಕರ್ನಾಟಕದ ಕಡೆಗಣನೆಯಿಂದ ರೊಚ್ಚಿಗೆದ್ದ ಸವದಿ
ಬೆಳಗಾವಿ ಅಧಿವೇಶನ: ಉತ್ತರ ಕರ್ನಾಟಕದ ಕಡೆಗಣನೆಯಿಂದ ರೊಚ್ಚಿಗೆದ್ದ ಸವದಿ
ಡಿಸೆಂಬರ್ 6ರಂದು ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದ ಸೋಮಣ್ಣ ಮಾತು ಬದಲು!
ಡಿಸೆಂಬರ್ 6ರಂದು ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದ ಸೋಮಣ್ಣ ಮಾತು ಬದಲು!
ಡಾ ಬಿಆರ್ ಅಂಬೇಡ್ಕರ್ ಪುಣ್ಯಸ್ಮರಣೆ: ಸಿಎಂ ಸಿದ್ದರಾಮಯ್ಯರಿಂದ ಗೌರವ ನಮನ
ಡಾ ಬಿಆರ್ ಅಂಬೇಡ್ಕರ್ ಪುಣ್ಯಸ್ಮರಣೆ: ಸಿಎಂ ಸಿದ್ದರಾಮಯ್ಯರಿಂದ ಗೌರವ ನಮನ
ಕೃಷಿಗೆ ತೊಂದರೆ ಮಾಡುವ ಯಾವುದೇ ಲೇಔಟ್ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ
ಕೃಷಿಗೆ ತೊಂದರೆ ಮಾಡುವ ಯಾವುದೇ ಲೇಔಟ್ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ