ಮದುವೆ ಬಗ್ಗೆ ಬಿಗ್​ಬಾಸ್ ಮನೆ ಒಳಗೆ ಏನು ಹೇಳಿಕೊಂಡಿದ್ದಾರೆ ವರ್ತೂರು ಸಂತೋಷ್?

Varthur Santhosh: ವರ್ತೂರು ಸಂತೋಷ್ ಮದುವೆಯಾಗಿರುವ ವಿಷಯ ವಿವಾದ ಎಬ್ಬಿಸಿದೆ. ಸಂತೋಷ್ ಅವರ ಮಾವ ಮಾಧ್ಯಮಗಳ ಮುಂದೆ ತಮ್ಮ ಅಳಿಯನ ಬಗ್ಗೆ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ತಮ್ಮ ಖಾಸಗಿ ಜೀವನದ ಬಗ್ಗೆ, ಮದುವೆ ಬಗ್ಗೆ ವರ್ತೂರು ಸಂತೋಷ್ ಬಿಗ್​ಬಾಸ್ ಮನೆಯ ಒಳಗೆ ಏನು ಹೇಳುಕೊಂಡಿದ್ದಾರೆ ಎಂಬುದನ್ನು ಈ ವಾರ ಮನೆಯಿಂದ ಹೊರಗೆ ಬಂದ ಸದಸ್ಯರು ಹೇಳಿದ್ದಾರೆ.

ಮದುವೆ ಬಗ್ಗೆ ಬಿಗ್​ಬಾಸ್ ಮನೆ ಒಳಗೆ ಏನು ಹೇಳಿಕೊಂಡಿದ್ದಾರೆ ವರ್ತೂರು ಸಂತೋಷ್?
ವರ್ತೂರು ಸಂತೋಷ್
Follow us
|

Updated on: Nov 20, 2023 | 10:40 PM

ಹಳ್ಳಿಕಾರ್ ತಳಿಗಳ ಸಂರಕ್ಷಣೆ ಕುರಿತಾಗಿ ಕೆಲಸ ಮಾಡುತ್ತಿದ್ದ ವರ್ತೂರು ಸಂತೋಷ್ (Varthur Santhosh) ಬಿಗ್​ಬಾಸ್ ಮನೆಯ ಒಳಗೆ ಹೋದ ಬಳಿಕ ಒಂದರ ಹಿಂದೊಂದು ವಿವಾದಗಳಿಗೆ ಗುರಿಯಾಗುತ್ತಿದ್ದಾರೆ. ಬಿಗ್​ಬಾಸ್​ ಮನೆಯೊಳಗೆ ಹೋದ ಕೆಲವೇ ದಿನಗಳಲ್ಲಿ ಹುಲಿ ಉಗುರು ಪ್ರಕರಣದಲ್ಲಿ ವರ್ತೂರು ಸಂತೋಷ್ ಜೈಲು ಪಾಲಾದರು. ಅದಾದ ಬಳಿಕ ಜಾಮೀನಿನ ಮೇಲೆ ಹೊರಗೆ ಬಂದರಾದರೂ, ಈಗ ವರ್ತೂರು ಸಂತೋಷ್​ರ ಖಾಸಗಿ ಜೀವನ ವಿವಾದಕ್ಕೆ ಈಡಾಗಿದೆ.

ವರ್ತೂರು ಸಂತೋಷ್​ರಿಗೆ ಮದುವೆ ಆಗಿದ್ದರೂ ಅದನ್ನು ಮುಚ್ಚಿಟ್ಟಿದ್ದಾರೆ, ಈಗ ಮತ್ತೊಂದು ಮದುವೆ ಆಗಲು ಸಜ್ಜಾಗಿದ್ದಾರೆ ಎಂದು ಆರೋಪಿಸಲಾಗಿದೆ. ವರ್ತೂರು ಸಂತೋಷ್​ರ ಪತ್ನಿಯ ತಂದೆ ತಮ್ಮ ಅಳಿಯನ ವಿರುದ್ಧ ಮಾಧ್ಯಮಗಳ ಮುಂದೆ ಕೂತು ಸರಣಿ ಆರೋಪಗಳನ್ನು ಮಾಡಿದ್ದಾರೆ. ವರ್ತೂರು ಸಂತೋಷ್ ಮಹಿಳಾ ಪೀಡಕ, ಮಗಳನ್ನು ಕೊಲ್ಲಲು ಯತ್ನಿಸಿದ್ದ, ಆತನಿಗೆ ಮಾದಕ ವಸ್ತು ಸೇವಿಸುವ ಅಭ್ಯಾಸವಿದೆ ಇನ್ನೂ ಹಲವು ಆರೋಪಗಳನ್ನು ಮಾಡಿದ್ದಾರೆ.

ಇದೇ ವೀಕೆಂಡ್​ನಲ್ಲಿ ಬಿಗ್​ಬಾಸ್ ಮನೆಯಿಂದ ಭಾಗ್ಯಶ್ರೀ ಹಾಗೂ ಇಶಾನಿ ಅವರುಗಳು ಎಲಿಮಿನೇಟ್ ಆಗಿ ಹೊರಗೆ ಬಂದಿದ್ದಾರೆ. ಹಲವು ಚಾನೆಲ್​ಗಳು ಇವರಿಬ್ಬರ ಸಂದರ್ಶನ ಮಾಡುತ್ತಿವೆ. ವರ್ತೂರು ಸಂತೋಷ್ ಕುರಿತಾಗಿಯೂ ಪ್ರಶ್ನೆಗಳನ್ನು ಕೇಳಲಾಗಿದೆ. ಅಸಲಿಗೆ ವರ್ತೂರು ಸಂತೋಷ್​ರ ಖಾಸಗಿ ಜೀವನದ ಕುರಿತು ಹೊರ ಬಂದಿರುವ ವಿಷಯಗಳು ಭಾಗ್ಯಶ್ರೀ ಹಾಗೂ ಇಶಾನಿ ಅವರಿಗೆ ಆಶ್ಚರ್ಯ ಮೂಡಿಸಿವೆ.

ಇದನ್ನೂ ಓದಿ:ಬಿಗ್​ಬಾಸ್ ಮನೆಯಲ್ಲಿ ಫೇಕ್ ಯಾರು? ಈ ಬಾರಿಯ ಫೈನಲಿಸ್ಟ್ ಯಾರು: ಇಶಾನಿ ಉತ್ತರ

ಟಿವಿ9 ಜೊತೆಗಿನ ಸಂದರ್ಶನದಲ್ಲಿ ಭಾಗ್ಯಶ್ರೀ ಹೇಳಿರುವಂತೆ, ವರ್ತೂರು ಸಂತೋಷ್ ಅವರ ಖಾಸಗಿ ಜೀವನದ ಬಗ್ಗೆ ಹೆಚ್ಚಿಗೇನೂ ಗೊತ್ತಿಲ್ಲ, ಆದರೆ ಬಿಗ್​ಬಾಸ್ ಮನೆಯಲ್ಲಿದ್ದಾಗ ತನ್ನೊಟ್ಟಿಗೆ ಮಾತನಾಡುತ್ತಾ, ‘ಬಿಗ್​ಬಾಸ್ ಮನೆಯಿಂದ ಹೊರಗೆ ಹೋದ ಮೇಲೆ ಮದುವೆ ಆಗಲಿದ್ದೇನೆ’ ಎಂದಿದ್ದರಂತೆ. ಅಲ್ಲಿಗೆ ಒಬ್ಬ ಪತ್ನಿ ಹಾಗೂ ಮಗಳು ಇರುವಾಗಲೇ ವರ್ತೂರು ಸಂತೋಷ್ ಮದುವೆ ಆಗುವ ನಿಶ್ಚಯ ಮಾಡಿದ್ದಾರೆ. ಅಲ್ಲದೆ ಬಿಗ್​ಬಾಸ್ ಮನೆಯಲ್ಲಿ ತಮಗೆ ಮದುವೆ ಆಗಿದೆ ಎಂಬ ವಿಷಯವನ್ನು ಯಾರೊಟ್ಟಿಗೂ ಹೇಳಿಕೊಂಡಿಲ್ಲವಂತೆ.

ಅಲ್ಲದೆ ವರ್ತೂರು ಸಂತೋಷ್ ಬಂಧನವಾದ ವಿಷಯವೂ ಸಹ ಬಿಗ್​ಬಾಸ್ ಮನೆಯಲ್ಲಿರುವ ಯಾರಿಗೂ ಗೊತ್ತಿಲ್ಲವಂತೆ. ವರ್ತೂರು ಸಂತೋಷ್ ಮನೆಯಲ್ಲಿ ಯಾರಿಗೋ ಆರೋಗ್ಯ ಸರಿಯಿಲ್ಲದ ಕಾರಣ ಅವರು ಹೊರಗೆ ಹೋಗಿ ಬಂದಿದ್ದಾರೆ ಎಂದುಕೊಂಡಿದ್ದರಂತೆ ಭಾಗ್ಯಶ್ರೀ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ