AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸಿರಿ, ಭಾಗ್ಯಶ್ರೀಗೂ ಬಿಟ್ಟಿಲ್ಲ, ಎಲ್ಲರಿಗೂ ತುಕಾಲಿ ಸಂತೋಷ್​ ಬತ್ತಿ ಇಟ್ಟಿದ್ದಾರೆ’: ಏನಿದು ಆರೋಪ?

‘ತುಕಾಲಿ ಸಂತೋಷ್​ ಅವರು ಈ ಮನೆಯಲ್ಲಿ ನಂಬಿಕೆಗೆ ಯೋಗ್ಯರಲ್ಲ’ ಎಂಬ ಅಭಿಪ್ರಾಯ ಕೆಲವರಿಂದ ವ್ಯಕ್ತವಾಗಿದೆ. ಕಿಚ್ಚ ಸುದೀಪ್​ ಅವರು ಈ ವಿಚಾರದ ಬಗ್ಗೆ ಬಿಗ್​ ಬಾಸ್​ ಮನೆಯ ಸದಸ್ಯರ ಜೊತೆ ಮಾತನಾಡಿದ್ದಾರೆ. ತುಕಾಲಿ ಸಂತೋಷ್​ ಅವರ ನಿಜವಾದ ಬುದ್ಧಿ ಎಂಥದ್ದು ಎಂಬ ಬಗ್ಗೆ ನಮ್ರತಾ ಓಪನ್​ ಆಗಿ ಮಾತನಾಡಿದ್ದಾರೆ.

‘ಸಿರಿ, ಭಾಗ್ಯಶ್ರೀಗೂ ಬಿಟ್ಟಿಲ್ಲ, ಎಲ್ಲರಿಗೂ ತುಕಾಲಿ ಸಂತೋಷ್​ ಬತ್ತಿ ಇಟ್ಟಿದ್ದಾರೆ’: ಏನಿದು ಆರೋಪ?
ತುಕಾಲಿ ಸಂತೋಷ್
ಮದನ್​ ಕುಮಾರ್​
|

Updated on: Nov 20, 2023 | 8:14 AM

Share

ಬಿಗ್ ಬಾಸ್​ ಮನೆಯಲ್ಲಿ ತುಕಾಲಿ ಸಂತೋಷ್​ (Tukali Santosh) ಅವರ ಪರಿಸ್ಥಿತಿ ಕಷ್ಟದಲ್ಲಿದೆ. ಯಾಕೆಂದರೆ ಅವರು ಕಾಮಿಡಿ ಮಾಡಿದರೂ ಕಷ್ಟ, ಸುಮ್ಮನೆ ಇದ್ದರೂ ಕಷ್ಟ ಎಂಬಂತಾಗಿದೆ. ಅಲ್ಲದೇ ಅವರು ಫೇಕ್​ ಎಂದು ಎಲ್ಲರೂ ಬ್ರ್ಯಾಂಡ್​ ಮಾಡಿದ್ದಾರೆ. ಈ ಬಗ್ಗೆ ಬಿಗ್​ ಬಾಸ್​ (Bigg Boss Kannada) ಮನೆಯಲ್ಲಿ ಸಖತ್​ ಚರ್ಚೆ ಆಗಿದೆ. ‘ಸೂಪರ್​ ಸಂಡೇ ವಿತ್​ ಸುದೀಪ’ ಎಪಿಸೋಡ್​ನಲ್ಲಿ ಕಿಚ್ಚ ಸುದೀಪ್ (Kichcha Sudeep)​ ಅವರು ಕೂಡ ಅದೇ ವಿಚಾರವನ್ನು ಪ್ರಸ್ತಾಪಿಸಿದರು. ಆಗ ಎಲ್ಲರೂ ತುಕಾಲಿ ಸಂತೋಷ್​ ಅವರನ್ನು ಫೇಕ್​ ಎಂದು ಕರೆದರು. ಇದರಿಂದ ವೀಕ್ಷಕರ ಅಭಿಪ್ರಾಯದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಈ ವಾರ ತುಕಾಲಿ ಅವರಿಗೆ ಕಡಿಮೆ ವೋಟ್​ ಬಂದರೂ ಅಚ್ಚರಿ ಏನಿಲ್ಲ.

‘ಯಾವುದೇ ಗುಂಪಿನಲ್ಲಿ ಇದ್ದರೂ ಕೂಡ ತುಕಾಲಿ ಸಂತೋಷ್​ ಅವರು ಈ ಮನೆಯಲ್ಲಿ ನಂಬಿಕೆಗೆ ಯೋಗ್ಯರಲ್ಲ. ಹೌದೋ ಅಲ್ಲವೋ’ ಎಂದು ಸುದೀಪ್​ ಕೇಳಿದ ಪ್ರಶ್ನೆಗೆ ಸಂಗೀತಾ ಶೃಂಗೇರಿ, ಸ್ನೇಹಿತ್​, ವಿನಯ್​, ನಮ್ರತಾ ಗೌಡ ಮುಂತಾದವರ ಕಡೆಯಿಂದ ಹೌದು ಎಂದು ಉತ್ತರ ಬಂತು. ‘ನನ್ನ ಜೊತೆ ಚೆನ್ನಾಗಿಯೇ ಇರುತ್ತಾರೆ. ಆಮೇಲೆ ಹೋಗಿ ಬೆನ್ನ ಹಿಂದೆ ಮಾತನಾಡುತ್ತಾರೆ. ಅದನ್ನು ನಾನು ನೇರವಾಗಿ ಕೇಳಿಸಿಕೊಂಡೆ. ಆಮೇಲೆ ನನಗೆ ಎಲ್ಲವೂ ಅರ್ಥ ಆಯಿತು’ ಎಂದು ಸಂಗೀತಾ ಶೃಂಗೇರಿ ಹೇಳಿದರು.

ಇದನ್ನೂ ಓದಿ: ‘ಹೇಸಿಗೆ ಕಾಮಿಡಿ ಇರಬಾರದು’: ತುಕಾಲಿ ಸಂತೋಷ್​ ಬಗ್ಗೆ ಪ್ರಶಾಂತ್​ ಸಂಬರ್ಗಿ ಹೀಗೆ ಹೇಳಿದ್ದೇಕೆ?

‘ತಮ್ಮ ತಂಡದವರಿಗೇ ತುಕಾಲಿ ಸಂತೋಷ್​ ಬತ್ತಿ ಇಟ್ಟಿದ್ದಾರೆ. ನೀತು, ಪ್ರತಾಪ್​, ವರ್ತೂರು ಸಂತೋಷ್​ಗೆ ಆ ರೀತಿ ಮಾಡಿದ್ದಾರೆ. ಮಾತ್ರವಲ್ಲದೇ ನಮ್ಮ ಟೀಮ್​ಗೆ ಬಂದಾಗಲೂ ತುಕಾಲಿ ಅವರಿಂದ ನಂಬಿಕೆ ದ್ರೋಹ ಆಯಿತು. ಸಿರಿ ಮತ್ತು ಭಾಗ್ಯಶ್ರೀ ಅವರನ್ನೂ ಬಿಟ್ಟಿಲ್ಲ. ಎಲ್ಲರ ಬಗ್ಗೆಯೂ ಅವರು ಬತ್ತಿ ಇಟ್ಟಿದ್ದಾರೆ. ಹಾಗಾಗಿ ಅವರು ನಂಬಿಕೆಗೆ ಯೋಗ್ಯರಲ್ಲ’ ಎಂದು ಆರೋಪಿಸಿದರು ನಮ್ರತಾ. ಈ ಎಲ್ಲ ಮಾತುಗಳಿಂದ ತುಕಾಲಿ ಸಂತೋಷ್​ ಅವರಿಗೆ ಬೇಸರ ಆಗಿದೆ. ಈ ಕುರಿತು ಅವರು ವರ್ತೂರು ಸಂತೋಷ್​ ಬಳಿ ರಾತ್ರಿ ಚರ್ಚೆ ಮಾಡಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್ ಆದೇಶ ಮೀರಿ ನಡೆದುಕೊಂಡ ತುಕಾಲಿ ಸಂತೋಷ್​; ಈ ತಪ್ಪಿನಿಂದ ಎಲ್ಲರಿಗೂ ಶಿಕ್ಷೆ

ದೊಡ್ಮನೆಯಲ್ಲಿ ಇರುವ ಕೆಲವು ಸದಸ್ಯರು ತುಕಾಲಿ ಸಂತೋಷ್​ ಪರವಾಗಿ ಮಾತನಾಡಿದ್ದಾರೆ. ತುಕಾಲಿ ಅವರು ನಂಬಿಕೆ ಅರ್ಹರು ಎಂದು ಪ್ರತಾಪ್​, ವರ್ತೂರು ಸಂತೋಷ್​, ನೀತು, ತನಿಷಾ, ಸಿರಿ, ಭಾಗ್ಯಶ್ರೀ ಹೇಳಿದ್ದಾರೆ. ‘ಅದು ಅವರ ಆಟ. ನನಗೆ ಅವರು ಫೇಕ್​ ಎನಿಸಿಲ್ಲ’ ಎಂದು ವರ್ತೂರು ಸಂತೋಷ್​ ಹೇಳಿದ್ದಾರೆ. ಬಿಗ್​ ಬಾಸ್​ ಆಟ ಈಗ 7ನೇ ವಾರಕ್ಕೆ ಕಾಲಿಟ್ಟಿದೆ. ಪ್ರತಿ ರಾತ್ರಿ 9.30ಕ್ಕೆ ಕಲರ್ಸ್​ ಕನ್ನಡ ವಾಹಿನಿಯಲ್ಲಿ ಶೋ ಪ್ರಸಾರ ಆಗುತ್ತಿದೆ. ‘ಜಿಯೋ ಸಿನಿಮಾ’ ಮೂಲಕ ಉಚಿತವಾಗಿ ಲೈವ್​ ನೋಡಬಹುದು. 6ನೇ ವಾರದಲ್ಲಿ ಈಶಾಲಿ ಮತ್ತು ಭಾಗ್ಯಶ್ರೀ ಎಲಿಮಿನೇಟ್​ ಆಗಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
ಪ್ರಿಯಕರನಿಗೆ ಬೆಂಕಿ ಇಟ್ಟ ಪ್ರೇಯಸಿ: ಸ್ಫೋಟಕ ಅಂಶ ಬಿಚ್ಚಿಟ್ಟ ಎಸ್ಪಿ
ಪ್ರಿಯಕರನಿಗೆ ಬೆಂಕಿ ಇಟ್ಟ ಪ್ರೇಯಸಿ: ಸ್ಫೋಟಕ ಅಂಶ ಬಿಚ್ಚಿಟ್ಟ ಎಸ್ಪಿ
ಸೈಕಲ್ ಸವಾರನಿಂದಲ್ಲೂ 25 ರೂ. ಟೋಲ್ ವಸೂಲಿ ಮಾಡಿದ ಸಿಬ್ಬಂದಿ
ಸೈಕಲ್ ಸವಾರನಿಂದಲ್ಲೂ 25 ರೂ. ಟೋಲ್ ವಸೂಲಿ ಮಾಡಿದ ಸಿಬ್ಬಂದಿ
ಕೋಲಾರ: ಇಟ್ಟಿಗೆ ಫ್ಯಾಕ್ಟರಿಯಲ್ಲಿ ಜೀತಕ್ಕಿದ್ದ 10 ಕಾರ್ಮಿಕರ ರಕ್ಷಣೆ
ಕೋಲಾರ: ಇಟ್ಟಿಗೆ ಫ್ಯಾಕ್ಟರಿಯಲ್ಲಿ ಜೀತಕ್ಕಿದ್ದ 10 ಕಾರ್ಮಿಕರ ರಕ್ಷಣೆ
ದಾವಣಗೆರೆ ಉಪಚುನಾವಣೆ ಫಲಿತಾಂಶ ಬಂದ್ಮೇಲೆ ಜಮೀರ್ ಭವಿಷ್ಯ ನಿರ್ಧಾರ?
ದಾವಣಗೆರೆ ಉಪಚುನಾವಣೆ ಫಲಿತಾಂಶ ಬಂದ್ಮೇಲೆ ಜಮೀರ್ ಭವಿಷ್ಯ ನಿರ್ಧಾರ?
ಈ ಆವೃತ್ತಿಯ 3ನೇ ಅರ್ಧಶತಕ ಚಚ್ಚಿದ ಅಭಿಷೇಕ್
ಈ ಆವೃತ್ತಿಯ 3ನೇ ಅರ್ಧಶತಕ ಚಚ್ಚಿದ ಅಭಿಷೇಕ್
ಸಿಎಂಗೆ ಕಾಂಪ್ರಾಮೈಸ್ ಪಾಲಿಟಿಕ್ಸ್ ಅನಿವಾರ್ಯ: ಜಾರಕಿಹೊಳಿ ಅಚ್ಚರಿ ಹೇಳಿಕೆ!
ಸಿಎಂಗೆ ಕಾಂಪ್ರಾಮೈಸ್ ಪಾಲಿಟಿಕ್ಸ್ ಅನಿವಾರ್ಯ: ಜಾರಕಿಹೊಳಿ ಅಚ್ಚರಿ ಹೇಳಿಕೆ!
ಪಹಲ್ಗಾಮ್ ಅಟ್ಯಾಕ್ ನಲ್ಲಿ ಪ್ರಾಣ ಬಿಟ್ಟಿದ್ದ ಭರತ್ ನೆನೆದು ಪೋಷಕರು ಕಣ್ಣೀರು
ಪಹಲ್ಗಾಮ್ ಅಟ್ಯಾಕ್ ನಲ್ಲಿ ಪ್ರಾಣ ಬಿಟ್ಟಿದ್ದ ಭರತ್ ನೆನೆದು ಪೋಷಕರು ಕಣ್ಣೀರು
ವರುಣ್ ಧವನ್ ಜೊತೆಗೆ ಕುಣಿದು-ಕುಪ್ಪಳಿಸಿದ ಮೃಣಾಲ್ ಠಾಕೂರ್: ವಿಡಿಯೋ
ವರುಣ್ ಧವನ್ ಜೊತೆಗೆ ಕುಣಿದು-ಕುಪ್ಪಳಿಸಿದ ಮೃಣಾಲ್ ಠಾಕೂರ್: ವಿಡಿಯೋ
ಎರಡು ಭಿನ್ನ ಆರ್ಕೆಸ್ಟ್ರಾ, ‘ರಾಮಾಯಣ’ಕ್ಕಾಗಿ ರೆಹಮಾನ್ ಸಾಹಸ ನೋಡಿ
ಎರಡು ಭಿನ್ನ ಆರ್ಕೆಸ್ಟ್ರಾ, ‘ರಾಮಾಯಣ’ಕ್ಕಾಗಿ ರೆಹಮಾನ್ ಸಾಹಸ ನೋಡಿ
ಶಾಸಕ ಎನ್.ಎ. ಹ್ಯಾರಿಸ್ ನಿವಾಸದಲ್ಲಿ 37 ಲಕ್ಷ ನಗದು ಪತ್ತೆ!
ಶಾಸಕ ಎನ್.ಎ. ಹ್ಯಾರಿಸ್ ನಿವಾಸದಲ್ಲಿ 37 ಲಕ್ಷ ನಗದು ಪತ್ತೆ!