Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್ಮುಂದೆ ಅಂದುಕೊಂಡಂತೆ ನಡೆಯಲ್ಲ ದೊಡ್ಮನೆ ಆಟ; ಎಚ್ಚೆತ್ತುಕೊಳ್ಳದಿದ್ದರೆ ಇಲ್ಲ ಉಳಿಗಾಲ

ದೊಡ್ಮನೆಯಲ್ಲಿ ಈ ಬಾರಿಯೂ ಅನೇಕ ಗುಂಪುಗಳು ಆಗಿವೆ. ಇದು ವೈಯಕ್ತಿಕ ಆಟದ ಮೇಲೆ ಎಷ್ಟು ಪ್ರಭಾವ ಬೀರುತ್ತದೆ ಎಂಬುದು ಸ್ಪರ್ಧಿಗಳಿಗೆ ಅರಿವಾದಂತೆ ಇಲ್ಲ. ಈ ಕಾರಣದಿಂದಲೇ ಸುದೀಪ್ ಅವರು ಎಚ್ಚರಿಕೆ ನೀಡಿದ್ದಾರೆ.

ಇನ್ಮುಂದೆ ಅಂದುಕೊಂಡಂತೆ ನಡೆಯಲ್ಲ ದೊಡ್ಮನೆ ಆಟ; ಎಚ್ಚೆತ್ತುಕೊಳ್ಳದಿದ್ದರೆ ಇಲ್ಲ ಉಳಿಗಾಲ
ಸುದೀಪ್
Follow us
ರಾಜೇಶ್ ದುಗ್ಗುಮನೆ
|

Updated on: Nov 19, 2023 | 6:57 PM

ಬಿಗ್ ಬಾಸ್​ನಲ್ಲಿ (Bigg Boss) ಈಗಾಗಲೇ ಆರು ವಾರ ಪೂರ್ಣಗೊಂಡಿದೆ. ಈಗಾಗಲೇ ದೊಡ್ಮನೆಯಲ್ಲಿ ಹಲವು ಹೈಡ್ರಾಮಾಗಾಳು ನಡೆದಿವೆ. ಸುದೀಪ್ ಅವರು ಎಂದಿನ ಗತ್ತಿನಲ್ಲಿ ನಿರೂಪಣೆ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ದೊಡ್ಮನೆ ಆಟ ಮತ್ತಷ್ಟು ಟಫ್ ಆಗಲಿದೆ. ಒಂದೊಮ್ಮೆ ಸ್ಪರ್ಧಿಗಳು ಎಚ್ಚೆತ್ತುಗೊಳ್ಳದೇ ಇದ್ದರೆ ಉಳಿಗಾಲ ಇಲ್ಲ ಎಂಬುದು ಅನೇಕರ ಅಭಿಪ್ರಾಯ. ಗುಂಪುಗಾರಿಕೆ ಬಿಟ್ಟು ಸ್ವಂತವಾಗಿ ಆಟಆಡಬೇಕಾದ ಅನಿವಾರ್ಯತೆ ಸ್ಪರ್ಧಿಗಳಿಗೆ ಇದೆ. ಇದನ್ನು ಯಾರೆಲ್ಲ ಅರ್ಥ ಮಾಡಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಬಿಗ್ ಬಾಸ್​ಗೆ ಬಂದಮೇಲೆ ಯಾರ ಆಟ ಹೇಗೆ ಆಗುತ್ತದೆ ಎಂಬುದನ್ನು ಹೇಳೋಕೆ ಸಾಧ್ಯವಿಲ್ಲ. ಕೆಲವರು ಗುಂಪು ಮಾಡಿಕೊಂಡು ಆಟ ಆಡಬಹುದು. ಕೆಲವರು ಸ್ವಂತ ಬಲದ ಮೇಲೆ ಮುನ್ನುಗ್ಗಬಹುದು. ದೊಡ್ಮನೆಯಲ್ಲಿ ಈ ಬಾರಿಯೂ ಅನೇಕ ಗುಂಪುಗಳು ಆಗಿವೆ. ಇದು ವೈಯಕ್ತಿಕ ಆಟದ ಮೇಲೆ ಎಷ್ಟು ಪ್ರಭಾವ ಬೀರುತ್ತದೆ ಎಂಬುದು ಸ್ಪರ್ಧಿಗಳಿಗೆ ಅರಿವಾದಂತೆ ಇಲ್ಲ. ಈ ಕಾರಣದಿಂದಲೇ ಸುದೀಪ್ ಅವರು ಎಚ್ಚರಿಕೆ ನೀಡಿದ್ದಾರೆ. ಈ ಎಚ್ಚರಿಕೆಯನ್ನು ಸ್ಪರ್ಧಿಗಳು ಗಂಭೀರವಾಗಿ ಸ್ವೀಕರಿಸಬೇಕಿದೆ.

ಈಗಾಗಲೇ ಬಿಗ್ ಬಾಸ್ ಮನೆಯಿಂದ ಸ್ನೇಕ್​ ಶ್ಯಾಮ್, ರಕ್ಷಕ್, ಗೌರೀಶ್ ಅಕ್ಕಿ, ಈಶಾನಿ ಔಟ್ ಆಗಿದ್ದಾರೆ. ಸದ್ಯ ದೊಡ್ಮನೆಯಲ್ಲಿ ಉಳಿದುಕೊಂಡಿದ್ದು ಕೇವಲ 13 ಮಂದಿ ಮಾತ್ರ. ಆ ಪೈಕಿ ಇಂದು ಒಬ್ಬರು ಔಟ್ ಆಗಲಿದ್ದಾರೆ. ಈ ಮೂಲಕ ದೊಡ್ಮನೆ ಸದಸ್ಯರ ಸಂಖ್ಯೆ 12ಕ್ಕೆ ಇಳಿಕೆ ಆಗಲಿದೆ. ಈ ಕಾರಣದಿಂದ ಸ್ಪರ್ಧೆ ಹೆಚ್ಚಲಿದೆ.

ವಿನಯ್ ಗೌಡ ಅವರು ಸಾಕಷ್ಟು ಸ್ಟ್ರಾಂಗ್ ಎಂದು ಭಾವಿಸಿದ್ದಾರೆ. ಅವರು ಗುಂಪುಗಾರಿಕೆ ಮಾಡುತ್ತಿದ್ದಾರೆ. ಅವರ ಜೊತೆ ಸ್ನೇಹಿತ್, ನಮ್ರತಾ ಸೇರಿಕೊಂಡಿದ್ದಾರೆ. ತುಕಾಲಿ ಸಂತೋಷ್, ವರ್ತೂರು ಸಂತೋಷ್ ಬದಲಾಗುವ

ಸೂಚನೆ ನೀಡಿದ್ದಾರೆ. ಡ್ರೋನ್ ಪ್ರತಾಪ್ ಎಂದಿನಂತೆ ಸ್ಟ್ರಾಂಗ್ ಎನಿಸಿಕೊಂಡಿದ್ದಾರೆ. ಕಾರ್ತಿಕ್, ಸಂಗೀತಾ, ತನಿಷಾ ತಮ್ಮದೇ ಗುಂಪು ಮಾಡಿಕೊಂಡಿದ್ದಾರೆ. ಇವರ ಮಧ್ಯೆಯೇ ಕಿತ್ತಾಟ ಶುರುವಾಗಿದೆ.

ಇದನ್ನೂ ಓದಿ: ಬಿಗ್ ಬಾಸ್​ನಲ್ಲಿರುವ ಗುಂಪುಗಾರಿಕೆ ವಿರುದ್ಧ ಮತ್ತೆ ಸಿಡಿದೆದ್ದ ಕಿಚ್ಚ ಸುದೀಪ್; ಖಡಕ್ ಎಚ್ಚರಿಕೆ

ಸಿರಿ ಹಾಗೂ ಭಾಗ್ಯಶ್ರೀ ಅವರು ಸೈಲೆಂಟ್ ಆಗಿದ್ದಾರೆ. ನೀತು ಅವರು ಈ ವಾರವೇ ಔಟ್ ಆದರೂ ಅಚ್ಚರಿ ಏನಿಲ್ಲ ಅನ್ನೋದು ವೀಕ್ಷಕರ ಅಭಿಪ್ರಾಯ. ಹೀಗಾಗಿ, ಎಲ್ಲಾ ಸ್ಪರ್ಧಿಗಳು ವೈಯಕ್ತಿಕ ಆಟವನ್ನು ತೋರಿಸಬೇಕಿದೆ. ಎಚ್ಚೆತ್ತುಕೊಳ್ಳದಿದ್ದರೆ ಉಳಿಗಾಲ ಇಲ್ಲ ಅನ್ನೋದು ಅನೇಕರ ಅಭಿಪ್ರಾಯ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ