AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

BBK 10: ಸುದೀಪ್​ ಎದುರಲ್ಲೇ ಬಿಗ್​ ಬಾಸ್ ಸ್ಪರ್ಧಿಗಳ ಆರೋಪ, ಪ್ರತ್ಯಾರೋಪ; ಹೆಚ್ಚಾಗಿದೆ ಕಾವುBBK 10: ಸುದೀಪ್​ ಎದುರಲ್ಲೇ ಬಿಗ್​ ಬಾಸ್ ಸ್ಪರ್ಧಿಗಳ ಆರೋಪ, ಪ್ರತ್ಯಾರೋಪ; ಹೆಚ್ಚಾಗಿದೆ ಕಾವು

BBK 10: ಸುದೀಪ್​ ಎದುರಲ್ಲೇ ಬಿಗ್​ ಬಾಸ್ ಸ್ಪರ್ಧಿಗಳ ಆರೋಪ, ಪ್ರತ್ಯಾರೋಪ; ಹೆಚ್ಚಾಗಿದೆ ಕಾವು

ಮದನ್​ ಕುಮಾರ್​
|

Updated on:Nov 26, 2023 | 5:55 PM

Share

ಬಿಗ್​ ಬಾಸ್​ ಆಟ 7 ವಾರಗಳನ್ನು ಪೂರೈಸಿದೆ. 8ನೇ ವಾರಕ್ಕೆ ಪೈಪೋಟಿಯ ಕಾವು ಹೆಚ್ಚಾಗಲಿದೆ. ಅದರ ಮನ್ಸೂಚನೆ ಎಂಬಂತೆ ಸುದೀಪ್​ ಎದುರಲ್ಲೇ ಸ್ಪರ್ಧಿಗಳು ಪರಸ್ಪರ ಟೀಕೆ ಮಾಡಿಕೊಂಡಿದ್ದಾರೆ. ಆ ಪ್ರೋಮೋವನ್ನು ‘ಕಲರ್ಸ್​ ಕನ್ನಡ’ ವಾಹಿನಿ ಹಂಚಿಕೊಂಡಿದೆ. ಇಂದು (ನವೆಂಬರ್​ 26) ಒಬ್ಬರ ಎಲಿಮಿನೇಷನ್​ ಆಗಲಿದೆ.

ಬಿಗ್​ ಬಾಸ್​ ಮನೆಯಲ್ಲಿ ಸ್ಪರ್ಧಿಗಳ ಸಂಖ್ಯೆ ಕಡಿಮೆ ಆದಂತೆಲ್ಲ ಪೈಪೋಟಿ ಹೆಚ್ಚಾಗುತ್ತದೆ. ಈಗ ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ (Bigg Boss Kannada) ಶೋನಲ್ಲೂ ಅದೇ ರೀತಿ ಆಗುತ್ತಿದೆ. ಸದ್ಯ ದೊಡ್ಮನೆಯಲ್ಲಿ 12 ಮಂದಿ ಇದ್ದಾರೆ. ಆ ಪೈಕಿ ಭಾನುವಾರ (ನ.26) ಒಬ್ಬರು ಮನೆಯಿಂದ ಹೊರಗೆ ಹೋಗಲಿದ್ದಾರೆ. ‘ಸೂಪರ್​ ಸಂಡೇ ವಿತ್​ ಸುದೀಪ’ ಎಪಿಸೋಡ್​ನಲ್ಲಿ ಬಿಗ್​ ಬಾಸ್​ (BBK 10) ಸ್ಪರ್ಧಿಗಳು ಪರಸ್ಪರ ಆರೋಪ, ಪ್ರತ್ಯಾರೋಪ ಮಾಡಿಕೊಂಡಿದ್ದಾರೆ. ಒಬ್ಬರ ಆಟದ ಬಗ್ಗೆ ಮತ್ತೊಬ್ಬರು ತಮಗೆ ಇರುವ ಅನಿಸಿಕೆಯನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಈಗ ಬಿಗ್​ ಬಾಸ್​ ಆಟ 7 ವಾರಗಳನ್ನು ಪೂರೈಸಿದೆ. 8ನೇ ವಾರಕ್ಕೆ ಪೈಪೋಟಿಯ ಕಾವು ಹೆಚ್ಚಾಗಲಿದೆ. ಅದರ ಮನ್ಸೂಚನೆ ಎಂಬಂತೆ ಸುದೀಪ್​ (Kichcha Sudeep) ಎದುರಲ್ಲೇ ಸ್ಪರ್ಧಿಗಳು ಟೀಕೆ ಮಾಡಿಕೊಂಡಿದ್ದಾರೆ. ಆ ಪ್ರೋಮೋವನ್ನು ‘ಕಲರ್ಸ್​ ಕನ್ನಡ’ ವಾಹಿನಿ ಹಂಚಿಕೊಂಡಿದೆ. ಜಿಯೋ ಸಿನಿಮಾದಲ್ಲಿ ಉಚಿತವಾಗಿ ಲೈವ್​ ನೋಡಲು ಅವಕಾಶ ಇದೆ.

​ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published on: Nov 26, 2023 05:50 PM

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More