AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kichcha Sudeep: ತಮ್ಮ ಡ್ರೆಸ್​ನ ಬಿಗ್ ಬಾಸ್ ಬಾಯ್ಸ್​ಗೆ ಗಿಫ್ಟ್ ನೀಡಿದ ಸುದೀಪ್; ಕಾರಣ ಏನು?

ಆರನೇ ವಾರ ಸುದೀಪ್ ಅವರು ಮನೆಯವರಿಗೆ ಒಂದು ಟಾಸ್ಕ್ ನೀಡಿದ್ದರು. ಒಂದು ಫೋಟೋ ತೋರಿಸಲಾಗುತ್ತದೆ. ಈ ಫೋಟೋ ನೋಡಿ ಸಿನಿಮಾ ಹೆಸರನ್ನು ಊಹಿಸಬೇಕು. ಈ ಗೇಮ್​ನಲ್ಲಿ ಪುರುಷರ ತಂಡ ಗೆದ್ದಿತ್ತು. ಈ ರೀತಿ ಗೆದ್ದ ಸ್ಪರ್ಧಿಗಳಿಗೆ ತಮ್ಮ ಕಡೆಯಿಂದ ಸರ್​ಪ್ರೈಸ್ ಇದೆ ಎಂದು ಸುದೀಪ್ ಹೇಳಿದ್ದರು.

Kichcha Sudeep: ತಮ್ಮ ಡ್ರೆಸ್​ನ ಬಿಗ್ ಬಾಸ್ ಬಾಯ್ಸ್​ಗೆ ಗಿಫ್ಟ್ ನೀಡಿದ ಸುದೀಪ್; ಕಾರಣ ಏನು?
ಸುದೀಪ್
TV9 Web
| Edited By: |

Updated on: Nov 27, 2023 | 10:29 AM

Share

ಕಿಚ್ಚ ಸುದೀಪ್ (Kichcha Sudeep) ಅವರು ಬಿಗ್ ಬಾಸ್ ಸ್ಪರ್ಧಿಗಳನ್ನು ಕುಟುಂಬದವರ ರೀತಿ ನೋಡುತ್ತಾರೆ. ಪ್ರತಿ ಸೀಸನ್​ನಲ್ಲಿ ಒಮ್ಮೆಯಾದರೂ ಅವರು ತಾವೇ ಅಡುಗೆ ಮಾಡಿ ಸ್ಪರ್ಧಿಗಳಿಗೆ ಕಳುಹಿಸುತ್ತಾರೆ. ಎಲ್ಲಾ ಸ್ಪರ್ಧಿಗಳನ್ನು ಒಂದೇ ರೀತಿಯಲ್ಲಿ ನೋಡುತ್ತಾರೆ. ಈ ಬಾರಿ ಬಿಗ್ ಬಾಸ್​ ಸ್ಪರ್ಧಿಗಳಿಗೆ ಸುದೀಪ್ ಅವರು ವಿಶೇಷ ಉಡುಗೊರೆ ನೀಡಿದ್ದಾರೆ. ಅದು ಕೇವಲ ಪುರಷ ಸ್ಪರ್ಧಿಗಳಿಗೆ ಮಾತ್ರ. ಉಡುಗೊರೆ ಪಡೆದ ಎಲ್ಲರೂ ಸಂಭ್ರಮಿಸಿದ್ದಾರೆ. ಮಹಿಳಾ ಸ್ಪರ್ಧಿಗಳು ಬೇಸರ ಮಾಡಿಕೊಂಡಿದ್ದಾರೆ.

ಆರನೇ ವಾರ ಸುದೀಪ್ ಅವರು ಮನೆಯವರಿಗೆ ಒಂದು ಟಾಸ್ಕ್ ನೀಡಿದ್ದರು. ಒಂದು ಫೋಟೋ ತೋರಿಸಲಾಗುತ್ತದೆ. ಈ ಫೋಟೋ ನೋಡಿ ಸಿನಿಮಾ ಹೆಸರನ್ನು ಊಹಿಸಬೇಕು. ಈ ಗೇಮ್​ನಲ್ಲಿ ಪುರುಷರ ತಂಡ ಗೆದ್ದಿತ್ತು. ಈ ರೀತಿ ಗೆದ್ದ ಸ್ಪರ್ಧಿಗಳಿಗೆ ತಮ್ಮ ಕಡೆಯಿಂದ ಸರ್​ಪ್ರೈಸ್ ಇದೆ ಎಂದು ಸುದೀಪ್ ಹೇಳಿದ್ದರು. ಆದರೆ, ಆ ಸರ್​ಪ್ರೈಸ್ ಏನು ಎಂಬುದನ್ನು ಸುದೀಪ್​ ರಿವೀಲ್ ಮಾಡಿರಲಿಲ್ಲ.

ಶನಿವಾರದ ಎಪಿಸೋಡ್​ನಲ್ಲಿ ಸುದೀಪ್ ಈ ಬಗ್ಗೆ ಮಾತನಾಡಿರಲಿಲ್ಲ. ಬಹುಶಃ ಸುದೀಪ್ ಅವರು ಹೀಗೆ ಸುಮ್ಮನೆ ಸರ್​ಪ್ರೈಸ್ ಇದೆ ಎಂದು ಹೇಳಿರಬಹುದು ಎಂದು ಎಲ್ಲರೂ ಊಹಿಸಿದ್ದರು. ಆದರೆ, ಸುದೀಪ್ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ. ಸ್ಪರ್ಧಿಗಳಿಗೆ ಅವರು ಹಾಕಿದ್ದ ಉಡುಗೆಯನ್ನು ಗಿಫ್ಟ್ ಆಗಿ ನೀಡಿದ್ದಾರೆ.

ಪ್ರತಿ ವೀಕೆಂಡ್​ನಲ್ಲಿ ಸುದೀಪ್ ಅವರು ವಿವಿಧ ರೀತಿಯ ಡ್ರೆಸ್ ಹಾಕುತ್ತಾರೆ. ಇದು ಎಲ್ಲರ ಗಮನ ಸೆಳೆಯುತ್ತದೆ. ಈ ಡ್ರೆಸ್​ನ ಸುದೀಪ್ ಅವರು ಸ್ಪರ್ಧಿಗಳಿಗೆ ನೀಡಿದ್ದಾರೆ. ‘ನಾನು ವೀಕೆಂಡ್​ನಲ್ಲಿ ಧರಿಸಿದ ಬಟ್ಟೆಗಳಿವು. ಯಾರ್ಯಾರಿಗೆ ಹೊಂದಿಕೆ ಆಗುತ್ತದೆಯೋ ಹಾಕಿಕೊಳ್ಳಿ. ಪ್ರತಾಪ್, ಸಂತೊಷ್​ಗೆ ಈ ಡ್ರೆಸ್​ನ ಅಳತೆ ಸರಿಯಾಗಿ ಹೊಂದಿಕೆ ಆಗುತ್ತದೆಯೋ ಅಥವಾ ಇಲ್ಲವೋ ಎಂಬುದು ನನಗೆ ಗೊತ್ತಿಲ್ಲ’ ಎಂದರು ಸುದೀಪ್. ಡ್ರೆಸ್ ಹೇಗಾದರೂ ಇರಲಿ, ಸುದೀಪ್ ಧರಿಸಿದ್ದ ಬಟ್ಟೆ ಸಿಕ್ತು ಎನ್ನುವ ವಿಚಾರ ಸ್ಪರ್ಧಿಗಳ ಖುಷಿ ಹೆಚ್ಚಿಸಿದೆ.

ಇದನ್ನೂ ಓದಿ: ‘ಕಾರಲ್ಲಿ ದೊಡ್ಮನೆಗೆ ಎಂಟ್ರಿ’; ವೈಲ್ಡ್ ಕಾರ್ಡ್​ಗೆ ಬಿಗ್ ಬಾಸ್​ ಮನೆಯಲ್ಲಿ ಹಲ್​ಚಲ್

ಮಹಿಳಾ ಸ್ಪರ್ಧಿಗಳಿಗೆ ಸುದೀಪ್ ಕಡೆಯಿಂದ ಏನೂ ಸಿಗಲಿಲ್ಲ. ಇದಕ್ಕೆ ಅವರು ಬೇಸರ ಮಾಡಿಕೊಂಡಿದ್ದಾರೆ. ಸಿರಿ ಅವರಂತೂ ಕಣ್ಣೀರು ಹಾಕುವ ಹಂತಕ್ಕೆ ಹೋಗಿದ್ದರು. ಸುದೀಪ್ ಬೇರೆ ಟಾಪಿಕ್ ತೆಗೆದು ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
Web contact
Web contact

TV9 Kannada

Read More
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ