‘ಸ್ನೇಹಿತ್ ಈ ವಾರ ಔಟ್’; ನಾಮಿನೇಷನ್ ಬಳಿಕ ಕಣ್ಣಲ್ಲೇ ಮಾತನಾಡಿಕೊಂಡ ಸಂತೋಷ್-ಪ್ರತಾಪ್

ಸ್ನೇಹಿತ್​ನ ಔಟ್ ಮಾಡಬೇಕು ಎಂದು ಪ್ರತಾಪ್​ಗೆ ಮೊದಲಿನಿಂದಲೂ ಇದೆ. ಆದರೆ, ಟಾರ್ಗೆಟ್ ಪ್ರತಿ ಬಾರಿಯೂ ಮಿಸ್ ಆಗುತ್ತಿತ್ತು. ಈಗ ಸ್ನೇಹಿತ್​ನ ಪ್ರತಾಪ್ ಸರಿಯಾಗಿ ಲಾಕ್ ಮಾಡಿದ್ದಾರೆ.

‘ಸ್ನೇಹಿತ್ ಈ ವಾರ ಔಟ್’; ನಾಮಿನೇಷನ್ ಬಳಿಕ ಕಣ್ಣಲ್ಲೇ ಮಾತನಾಡಿಕೊಂಡ ಸಂತೋಷ್-ಪ್ರತಾಪ್
ಸ್ನೇಹಿತ್-ವರ್ತೂರು ಸಂತೋಷ್, ಪ್ರತಾಪ್
Follow us
| Updated By: ರಾಜೇಶ್ ದುಗ್ಗುಮನೆ

Updated on: Nov 28, 2023 | 8:48 AM

‘ಬಿಗ್ ಬಾಸ್’ (Bigg Boss) ಮನೆಯಲ್ಲಿ ಸದಸ್ಯರ ಸಂಖ್ಯೆ ಕಡಿಮೆ ಆಗುತ್ತಿದೆ ಎನ್ನುವಾಗಲೇ ಇಬ್ಬರ ವೈಲ್ಡ್ ಕಾರ್ಡ್ ಎಂಟ್ರಿ ಆಗಿದೆ. ಅವಿನಾಶ್ ಶೆಟ್ಟಿ ಹಾಗೂ ಪವಿ ಪೂವಪ್ಪ ಅವರು ದೊಡ್ಮನೆಗೆ ಬಂದಿದ್ದಾರೆ. ಈ ಮೂಲಕ ಸ್ಪರ್ಧಿಗಳ ಸಂಖ್ಯೆ 13ಕ್ಕೆ ಏರಿಕೆ ಆಗಿದೆ. ಇದರ ಮಧ್ಯೆ ನಾಮಿನೇಷನ್ ಕೂಡ ನಡೆದಿದೆ. ಈ ವಾರ ಸ್ನೇಹಿತ್ ಔಟ್ ಆಗಬಹುದು ಎಂದು ಪ್ರತಾಪ್ ಲೆಕ್ಕಾಚಾರ ಹಾಕಿದ್ದಾರೆ. ಇದಕ್ಕೆ ಅವರು ತಮ್ಮದೇ ಸ್ಟ್ರೆಟಜಿ ಕೂಡ ಮಾಡಿದ್ದಾರೆ.

ಈ ವಾರ ಸ್ನೇಹಿತ್ ಅವರು ನೇರವಾಗಿ ನಾಮಿನೇಟ್ ಆದರು. ವಿನಯ್, ವರ್ತೂರು ಸಂತೋಷ್, ತನಿಷಾ, ಸಂಗೀತಾ, ಪ್ರತಾಪ್, ನಮ್ರತಾ, ಮೈಕಲ್, ಸಂತೋಷ್ ಹಾಗೂ ಸಿರಿ ನಾಮಿನೇಟ್ ಆದರು. ಈ ಪೈಕಿ ಇಬ್ಬರನ್ನು ಸೇವ್ ಮಾಡುವ ಅವಕಾಶ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದವರಿಗೆ ಇತ್ತು. ಎಲ್ಲಾ ಸ್ಪರ್ಧಿಗಳು ಹೋಗಿ ಅವರ ಬಳಿ ಕೋರಿಕೊಳ್ಳಬೇಕಿತ್ತು.

ಕಳೆದ ವಾರ ಸಿರಿ ಹಾಗೂ ನೀತು ಕೊನೆಯಲ್ಲಿ ಇದ್ದರು. ಅದಕ್ಕೂ ಮೊದಲು ಸೇವ್ ಆಗಿದ್ದು ತುಕಾಲಿ ಸಂತೋಷ್ ಹಾಗೂ ಸ್ನೇಹಿತ್ ಗೌಡ. ಹೀಗಾಗಿ, ಸ್ನೇಹಿತ್ ಅವರನ್ನು ಮನೆಯಿಂದ ಔಟ್ ಮಾಡಬೇಕು ಎಂದರೆ ಸಿರಿ ಸೇವ್ ಆಗಲೇ ಬೇಕಾದ ಅನಿವಾರ್ಯತೆ ಪ್ರತಾಪ್​ಗೆ ಇತ್ತು. ಹೀಗಾಗಿ, ಪವಿ ಹಾಗೂ ಅವಿನಾಶ್ ಬಳಿ ಹೋಗಿ ಸಿರಿನ ಉಳಿಸುವಂತೆ ಕೋರಿದ್ದಾರೆ. ವರ್ತೂರು ಸಂತೋಷ್ ಅವರು ತುಕಾಲಿ ಸಂತುನ ಸೇವ್ ಮಾಡುವಂತೆ ಕೇಳಿದ್ದಾರೆ. ವೈಲ್ಡ್ ಕಾರ್ಡ್ ಮೂಲಕ ಬಂದವರು ಮೊದಲು ತುಕಾಲಿ ಸಂತೋಷ್​ನ ಸೇವ್ ಮಾಡಿದರು.

ಇದನ್ನೂ ಓದಿ: ‘ಬೇರೆಯವರನ್ನು ಕೀಳಾಗಿ ತೋರಿಸಿದ ಪ್ರತಾಪ್​ ಇಲ್ಲಿಯವರೆಗೂ ಬಂದಿದ್ದಾರೆ’: ವಿನಯ್​ ಗೌಡ

ನಂತರ ಅವರು ಸೇವ್ ಮಾಡಿದ್ದು ಸಿರಿ ಅವರನ್ನು. ಈ ವೇಳೆ ವರ್ತೂರು ಸಂತೋಷ್ ಹಾಗೂ ಡ್ರೋನ್ ಪ್ರತಾಪ್ ಕಣ್ಣಲ್ಲೇ ಮಾತನಾಡಿಕೊಂಡರು. ‘ಈ ವಾರ ಸ್ನೇಹಿತ್ ಔಟ್’ ಎಂಬರ್ಥದಲ್ಲಿ ಇತ್ತು ಅವರ ಕಣ್ಸನ್ನೆ. ಡ್ರೋನ್ ಪ್ರತಾಪ್ ಸ್ಟ್ರಾಟಜಿ ಬಗ್ಗೆ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ. ವೋಟಿಂಗ್ ಪ್ರತಿ ವಾರ ಬದಲಾಗುತ್ತದೆ. ಹೀಗಾಗಿ, ಯಾರು ಬೇಕಾದರೂ ಎಲಿಮಿನೇಟ್ ಆಗಬಹುದು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ನೋಡಲು ಅವಕಾಶ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ