AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬೇರೆಯವರನ್ನು ಕೀಳಾಗಿ ತೋರಿಸಿದ ಪ್ರತಾಪ್​ ಇಲ್ಲಿಯವರೆಗೂ ಬಂದಿದ್ದಾರೆ’: ವಿನಯ್​ ಗೌಡ

‘ಬೇರೆಯವರನ್ನು ಕೀಳಾಗಿ ತೋರಿಸಿದ ಪ್ರತಾಪ್​ ಇಲ್ಲಿಯವರೆಗೂ ಬಂದಿದ್ದಾರೆ’: ವಿನಯ್​ ಗೌಡ

ಮದನ್​ ಕುಮಾರ್​
|

Updated on: Nov 27, 2023 | 3:02 PM

Share

ವಿನಯ್​ ಗೌಡ ಮತ್ತು ಡ್ರೋನ್​ ಪ್ರತಾಪ್​ ನಡುವಿನ ವೈಮನಸ್ಸು 8ನೇ ವಾರದ ನಾಮಿನೇಷನ್​ನಲ್ಲಿ ಮತ್ತೆ ಬಹಿರಂಗ ಆಗಿದೆ. ಸ್ಪರ್ಧಿಗಳ ಹೆಸರನ್ನು ನಾಮಿನೇಟ್​ ಮಾಡುವಾಗ ಪ್ರತಾಪ್​ ಅವರ ಹೆಸರನ್ನು ವಿನಯ್​ ಪ್ರಸ್ತಾಪಿಸಿದ್ದಾರೆ. ‘ಪ್ರತಾಪ್​ ಅವರು ಬೇರೆಯವರನ್ನು ಕೀಳಾಗಿ ತೋರಿಸಿ ಈವರೆಗೂ ಬಂದಿದ್ದಾರೆ’ ಎಂದು ವಿನಯ್​ ಆರೋಪಿಸಿದ್ದಾರೆ.

ಡ್ರೋನ್​ ಪ್ರತಾಪ್​ ಮತ್ತು ವಿನಯ್​ ಗೌಡ ನಡುವೆ ಬಿಗ್​ ಬಾಸ್ (Bigg Boss Kannada) ಮನೆಯಲ್ಲಿ ಮೊದಲಿನಿಂದಲೂ ಕಿತ್ತಾಟ ನಡೆಯುತ್ತಲೇ ಇದೆ. ಆರಂಭದಲ್ಲಿ ಕೂಗಾಡಿ, ಕಿರುಚಾಡುತ್ತಿದ್ದ ವಿನಯ್​ ಅವರು ನಂತರ ಒಂದಷ್ಟು ದಿನಗಳ ಕಾಲ ತಣ್ಣಗಾಗಿದ್ದರು. ಆದರೆ ಅವರು ಮತ್ತೆ ತಮ್ಮ ಅಸಲಿ ವರಸೆ ತೋರಿಸುವ ಸಾಧ್ಯತೆ ಇದೆ. ಅವರ ಮತ್ತು ಡ್ರೋನ್​ ಪ್ರತಾಪ್​ (Drone Prathap) ನಡುವೆ ಇರುವ ವೈಮನಸ್ಸು 8ನೇ ವಾರದ ನಾಮಿನೇಷನ್​ನಲ್ಲಿ ಮತ್ತೆ ಬಹಿರಂಗ ಆಗಿದೆ. ಎಲಿಮಿನೇಷನ್​ಗೆ ಸ್ಪರ್ಧಿಗಳ ಹೆಸರನ್ನು ನಾಮಿನೇಟ್​ ಮಾಡುವಾಗ ಪ್ರತಾಪ್​ ಅವರ ಹೆಸರನ್ನು ವಿನಯ್​ ಪ್ರಸ್ತಾಪಿಸಿದ್ದಾರೆ. ‘ಪ್ರತಾಪ್​ ಅವರು ಬೇರೆಯವರನ್ನು ಕೀಳಾಗಿ ತೋರಿಸಿ ಇಲ್ಲಿಯವರೆಗೂ ಬಂದಿದ್ದಾರೆ’ ಎಂದು ವಿನಯ್​ (Vinay Gowda) ಆರೋಪಿಸಿದ್ದಾರೆ. ಇದಕ್ಕೆ ಡ್ರೋನ್​ ಪ್ರತಾಪ್​ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕು. ‘ಕಲರ್ಸ್​ ಕನ್ನಡ’ ವಾಹಿನಿಯಲ್ಲಿ ನವೆಂಬರ್​ 27ರಂದು ಪ್ರಸಾರ ಆಗುವ ಸಂಚಿಕೆಯಲ್ಲಿ ನಾಮಿನೇಷನ್​ ಬಗ್ಗೆ ಹೆಚ್ಚಿನ ವಿವರ ಸಿಗಲಿದೆ. ‘ಜಿಯೋ ಸಿನಿಮಾ’ದಲ್ಲಿ ಉಚಿತವಾಗಿ ಲೈವ್​ ನೋಡಬಹುದು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More