ಜನತಾ ದರ್ಶನ ವೇಳೆ ಊಟಕ್ಕೆ ಹೋದ ಅಧಿಕಾರಿಗಳ ವಿರುದ್ಧ ಸಿದ್ದರಾಮಯ್ಯ ಗರಂ
Janata darshan: ಇಂದು ಬೆಳಗ್ಗೆಯಿಂದಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಜನತಾ ದರ್ಶನ ಕಾರ್ಯಕ್ರಮ ನಡೆಸಿದ್ದಾರೆ. ಈ ವೇಳೆ ಊಟಕ್ಕೆ ಹೋದ ಅಧಿಕಾರಿಗಳ ವಿರುದ್ಧ ಸಿದ್ದರಾಮಯ್ಯ ಗರಂ ಆಗಿದ್ದು, ಜನತಾ ದರ್ಶನ ಮುಗಿಯೋತನಕ ಯಾರೂ ಹೋಗಬೇಡಿ ಎಂದು ಸೂಚಿಸಿದ್ದಾರೆ.
ಬೆಂಗಳೂರು, ನವೆಂಬರ್ 27: ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಜನತಾ ದರ್ಶನ ವೇಳೆ ಅಧಿಕಾರಿಗಳ ವಿರುದ್ಧ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ. ಜನತಾದರ್ಶನ ವೇಳೆ ಇಲಾಖೆಯೊಂದರ ಮಾಹಿತಿಗೆ ಹುಡುಕಾಟ ನಡೆದಲಾಗಿದೆ. ಈ ವೇಳೆ ಎಲ್ಲಿ ಆ ಅಧಿಕಾರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಊಟಕ್ಕೆ ಹೋಗಿದ್ದಾರೆ ಎಂದಿದ್ದಕ್ಕೆ, ನಾನೇ ಇಲ್ಲಿ ಹಸಿದುಕೊಂಡು ಕೂತಿದ್ದೇನೆ ಎಂದು ಸಿಟ್ಟಾಗಿದ್ದಾರೆ. ಜನತಾ ದರ್ಶನ ಮುಗಿಯೋತನಕ ಯಾರೂ ಹೋಗಬೇಡಿ ಎಂದು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Nov 27, 2023 03:30 PM
Latest Videos