AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಂಬಿಸಿ ಮೋಸ ಮಾಡಿದ್ರಾ ಡ್ರೋನ್ ಪ್ರತಾಪ್? ಕ್ಯಾಪ್ಟನ್ಸಿ ಓಟದಿಂದ ನಮ್ರತಾ ಔಟ್

ಡ್ರೋನ್ ಪ್ರತಾಪ್ ಅವರು ವಿನಯ್ ವಿರುದ್ಧ ತೊಡೆ ತಟ್ಟಿದ್ದಾರೆ. ಅವರ ಗ್ಯಾಂಗ್​ನಿಂದ ಒಬ್ಬೊಬ್ಬರಾಗಿ ಔಟ್ ಮಾಡುವುದಾಗಿ ಪಣ ತೊಟ್ಟಿದ್ದಾರೆ. ಈ ವಾರ ಸ್ನೇಹಿತ್ ಹೊರಹೋಗಬಹುದು ಎಂದು ಹೇಳಲಾಗುತ್ತಿದೆ.

ನಂಬಿಸಿ ಮೋಸ ಮಾಡಿದ್ರಾ ಡ್ರೋನ್ ಪ್ರತಾಪ್? ಕ್ಯಾಪ್ಟನ್ಸಿ ಓಟದಿಂದ ನಮ್ರತಾ ಔಟ್
ಪ್ರತಾಪ್-ನಮ್ರತಾ
ರಾಜೇಶ್ ದುಗ್ಗುಮನೆ
|

Updated on:Nov 28, 2023 | 3:26 PM

Share

ನಮ್ರತಾ ಗೌಡ (Namratha Gowda) ಅವರು ಬಿಗ್ ಬಾಸ್ ಮನೆಯಲ್ಲಿ ಏಳು ವಾರ ಪೂರ್ಣಗೊಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಆಟ ಮತ್ತಷ್ಟು ಟಫ್ ಆಗಲಿದೆ ಎಂಬ ಸೂಚನೆ ಸಿಕ್ಕಿದೆ. ಹೀಗಾಗಿ, ಎಂಟನೇ ವಾರದಲ್ಲಿ ಅವರು ಒಂದು ಶಪಥ ಮಾಡಿದ್ದಾರೆ. ಎಲ್ಲರ ಜೊತೆಯೂ ಬೆರೆತು ತಮ್ಮನ್ನು ತಾವು ಪ್ರೂವ್ ಮಾಡಿಕೊಳ್ಳುವುದಾಗಿ ಹೇಳಿದ್ದರು. ಆದರೆ, ಅವರಿಗೆ ಈಗ ಮೊಸ ಆಗಿದೆ. ಅದೂ ಪ್ರತಾಪ್ ಕಡೆಯಿಂದಲೇ ಎನ್ನುತ್ತಿದೆ ಕಲರ್ಸ್ ಕನ್ನಡ ರಿಲೀಸ್ ಮಾಡಿರುವ ಪ್ರೋಮೋ. ಸದ್ಯ ಈ ಬಗ್ಗೆ ಸಖತ್ ಚರ್ಚೆ ಆಗುತ್ತಿದೆ.

‘ನಮ್ರತಾ ಅವರು ಸರಿಯಾಗಿ ಗೇಮ್ ಆಡುತ್ತಿಲ್ಲ, ಮತ್ತಷ್ಟು ಓಪನ್​ಅಪ್ ಆಗಬೇಕಿದೆ’ ಎಂದು ಡ್ರೋನ್ ಪ್ರತಾಪ್ ಹೇಳಿದ್ದರು. ಇದೇ ಕಾರಣಕ್ಕೆ ನಮ್ರತಾ ಅವರು ಪ್ರತಾಪ್ ಅವರ ಟೀಂ ಸೇರಿದ್ದಾರೆ. ‘ಬೇರೆ ನಮ್ರತಾ ಇದಾರೆ, ಅದನ್ನು ಹೊರ ತರುತ್ತೇನೆ ಎಂದು ಪ್ರಾಮಿಸ್ ಮಾಡಿದ್ದಾನೆ’ ಎಂದು ಕಾರಣ ನೀಡಿ ನಮ್ರತಾ ಡ್ರೋನ್ ಪ್ರತಾಪ್ ಟೀಂ ಸೇರಿದ್ದರು! ಆದರೆ, ಅಲ್ಲಾಗಿದ್ದೇ ಬೇರೆ.

‘ನೀವು ಕ್ಯಾಪ್ಟನ್ಸಿ ಟಾಸ್ಕ್​ನಿಂದ ಯಾರನ್ನು ಹೊರಗೆ ಇಡಲು ಬಯಸುತ್ತೀರಿ’ ಎಂದು ಡ್ರೋನ್ ಪ್ರತಾಪ್​ಗೆ ಬಿಗ್ ಬಾಸ್ ಕೇಳಿದರು. ಇದಕ್ಕೆ ಅವರು ನಮ್ರತಾ ಹೆಸರನ್ನು ತೆಗೆದುಕೊಂಡಿದ್ದಾರೆ. ತಮ್ಮನ್ನು ನಂಬಿ ಬಂದ ನಮ್ರತಾರನ್ನೇ ಅವರಿಗೆ ಹಿನ್ನಡೆ ಮಾಡಿದ್ದಾರೆ. ಇದು ನಮ್ರತಾ ಬೇಸರಕ್ಕೆ ಕಾರಣ ಆಗಿದೆ. ‘ನನಗೆ ಆಡಬೇಕು. ಇಷ್ಟ ಇಲ್ಲ ಅದಕ್ಕೆ ಅವರನ್ನು ತಂಡಕ್ಕೆ ಸೇರಿಸಿಕೊಂಡು ಹೊಡೆದು ಹಾಕಿದೆ ಅಂತ ಅವನು ಹೇಳಬಹುದಿತ್ತು’ ಎಂದು ಕಣ್ಣೀರು ಹಾಕಿದ್ದಾರೆ ನಮ್ರತಾ.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ತುಕಾಲಿ ಸಂತೋಷ್​ಗೆ ವಾರದ ಆರಂಭದಲ್ಲೇ ಜೈಲು ಶಿಕ್ಷೆ; ಯಾಕೀ ನಿರ್ಧಾರ?

ಕೆಲವರು ಪ್ರತಾಪ್ ಅವರನ್ನು ದೂಷಿಸಿದ್ದಾರೆ. ಅವರು ಈ ರೀತಿ ಮಾಡಬಾರದಿತ್ತು ಎಂದಿದ್ದಾರೆ. ಇನ್ನೂ ಕೆಲವರು ಪ್ರತಾಪ್ ನಿರ್ಧಾರವನ್ನು ಬೆಂಬಲಿಸಿದ್ದಾರೆ. ‘ಇಷ್ಟು ವಾರ ಅವರು ಆಡಲಿಲ್ಲ. ಈಗ ಅವರಿಗೆ ಎಚ್ಚರ ಆಗಿದೆ. ಅವರು ಕ್ಯಾಪ್ಟನ್ಸಿ ಟಾಸ್ಕ್​ಗೆ ಅರ್ಹರಲ್ಲ’ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ನಿಜಕ್ಕೂ ಆಗಿದ್ದೇನು? ಡ್ರೋನ್ ಪ್ರತಾಪ್ ಈ ರೀತಿ ಹೆಸರನ್ನು ತೆಗೆದುಕೊಳ್ಳೋಕೆ ಬೇರೆ ಏನಾದರೂ ಕಾರಣ ಇದೆಯೇ ಎಂಬುದಕ್ಕೆ ಜಿಯೋ ಸಿನಿಮಾ ಹಾಗೂ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುವ ಎಪಿಸೋಡ್ ನೋಡಬೇಕು. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ವೀಕ್ಷಿಬಹುದಾಗಿದೆ.

Published On - 3:04 pm, Tue, 28 November 23

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು