‘ನೀನು, ನಮ್ರತಾ ಸುತ್ತಾಡಿಕೊಂಡಿದ್ದೀರಿ ಅಷ್ಟೇ’; ಸ್ನೇಹಿತ್​ಗೆ ನೇರವಾಗಿ ಹೇಳಿದ ಮೈಕಲ್

ಸ್ನೇಹಿತ್ ಗೌಡ ಹಾಗೂ ನಮ್ರತಾ ಸದಾ ಸುತ್ತಾಡುತ್ತಾ ಇರುತ್ತಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಮೈಕಲ್ ಅಜಯ್ ಕೂಡ ಇದೇ ಮಾತನ್ನು ಹೇಳಿದ್ದಾರೆ. ಸ್ನೇಹಿತ್ ಬಳಿ ಆಗಮಿಸಿದ ಮೈಕಲ್, ‘ನೀನು ಹಾಗೂ ನಮ್ರತಾ ಇಡೀ ಮನೆಯಲ್ಲಿ ಸುತ್ತಾಡಿಕೊಂಡು ಇರ್ತೀರಿ. ಅದನ್ನು ಬಿಟ್ಟು ಬೇರೆ ಏನನ್ನೂ ಮಾಡುತ್ತಿಲ್ಲ’ ಎಂದು ನೇರವಾಗಿ ಹೇಳಿದ್ದಾರೆ.

‘ನೀನು, ನಮ್ರತಾ ಸುತ್ತಾಡಿಕೊಂಡಿದ್ದೀರಿ ಅಷ್ಟೇ’; ಸ್ನೇಹಿತ್​ಗೆ ನೇರವಾಗಿ ಹೇಳಿದ ಮೈಕಲ್
ಮೈಕಲ್, ನಮ್ರತಾ, ಸ್ನೇಹಿತ್
Follow us
|

Updated on:Nov 29, 2023 | 7:34 AM

ಸ್ನೇಹಿತ್ ಗೌಡ ಹಾಗೂ ನಮ್ರತಾ ಗೌಡ (Namratha Gowda) ಬಿಗ್ ಬಾಸ್​ ಮನೆಯಲ್ಲಿ ಅನೇಕ ಬಾರಿ ಒಟ್ಟಾಗಿ ಕಾಣಿಸಿಕೊಂಡಿದ್ದಿದೆ. ಆದರೆ, ಇದುವೇ ಅವರಿಗೆ ಹಿನ್ನಡೆ ಆಗುತ್ತಿದೆ. ಅದು ಅವರಿಗೆ ತಿಳಿಯುತ್ತಿಲ್ಲ. ಈ ವಾರ ನಾಮಿನೇಷನ್​ ಲಿಸ್ಟ್​ನಲ್ಲಿ ನಮ್ರತಾ ಹಾಗೂ ಸ್ನೇಹಿತ್ ಇಬ್ಬರೂ ಇದ್ದಾರೆ. ಇವರ ಪೈಕಿ ಒಬ್ಬರು ಹೋದರೂ ಅಚ್ಚರಿ ಏನಿಲ್ಲ. ಹೀಗಾಗಿ, ಇವರಲ್ಲಿ ಭಯ ಶುರುವಾಗಿದೆ. ಹೀಗಿರುವಾಗಲೇ ಮೈಕಲ್ ಅವರು ಸ್ನೇಹಿತ್​ಗೆ ನೇರ ಮಾತುಗಳಲ್ಲಿ ಕೆಲವು ವಿಚಾರಗಳನ್ನು ಹೇಳಿದ್ದಾರೆ.

ನಮ್ರತಾ ಜೊತೆ ಸ್ನೇಹಿತ್ ಫ್ಲರ್ಟ್ ಮಾಡೋಕೆ ಪ್ರಯತ್ನಿಸಿದರು. ಅವರ ಎದುರು ಪ್ರೇಮ ನಿವೇದನೆ ಮಾಡಿಕೊಂಡರು. ಆದರೆ, ಅವರು ಇದಕ್ಕೆ ಒಪ್ಪಲಿಲ್ಲ. ಆದಾಗ್ಯೂ ಇಬ್ಬರೂ ಒಟ್ಟಿಗೆ ಅನೇಕ ಕಡೆಗಳಲ್ಲಿ ಕಾಣಿಸಿಕೊಂಡಿದ್ದಿದೆ. ಇದರಿಂದ ಸ್ನೇಹಿತ್ ಹಿನ್ನಡೆ ಅನುಭವಿಸುತ್ತಿದ್ದಾರೆ. ಈ ವಿಚಾರದ ಬಗ್ಗೆ ಮೈಕಲ್ ಮಾತನಾಡಿದ್ದಾರೆ.

ಸ್ನೇಹಿತ್ ಬಳಿ ಆಗಮಿಸಿದ ಮೈಕಲ್, ‘ನೀನು ಹಾಗೂ ನಮ್ರತಾ ಇಡೀ ಮನೆಯಲ್ಲಿ ಸುತ್ತಾಡಿಕೊಂಡು ಇರ್ತೀರಿ. ಅದನ್ನು ಬಿಟ್ಟು ಬೇರೆ ಏನನ್ನೂ ಮಾಡುತ್ತಿಲ್ಲ’ ಎಂದು ನೇರವಾಗಿ ಹೇಳಿದ್ದಾರೆ. ಇದಕ್ಕೆ ಉತ್ತರಿಸಿದ ಸ್ನೇಹಿತ್, ‘ಈ ವಾರ ನನಗೆ ಆಡಲೇಬೇಕಾದ ಅನಿವಾರ್ಯತೆ ಇದೆ’ ಎಂದಿದ್ದಾರೆ.

ಈ ಘಟನೆ ನಡೆಯುವುದಕ್ಕೂ ಮೊದಲೇ ಸ್ನೇಹಿತ್ ಕಣ್ಣೀರು ಹಾಕಿದ್ದರು. ಬಿಗ್ ಬಾಸ್​ನಿಂದ ನಾನೇ ಔಟ್ ಆಗೋದು ಎಂದು ಅವರಿಗೆ ಅನಿಸಿದೆ. ಕಳೆದ ವಾರ ಅವರು ಬಾಟಮ್ ಲೈನ್​ನಲ್ಲಿ ಇದ್ದರು. ಅತಿ ಕಡಿಮೆ ವೋಟ್ ಪಡೆದು ಅವರು ಕೊನೆಯಲ್ಲಿ ಸೇವ್ ಆದರು. ಈ ವಾರ ಅವರು ನಾಮಿನೇಟ್ ಆಗಿದ್ದಾರೆ. ಹೀಗಾಗಿ, ತಾವೇ ಔಟ್ ಆಗಬಹುದು ಎಂದು ಅವರಿಗೆ ಅನಿಸಿದೆ. ಈ ವಿಚಾರ ಹೇಳಿಕೊಂಡು ಅವರು ಕಣ್ಣೀರು ಹಾಕಿದ್ದಾರೆ. ಈ ಸಂದರ್ಭದಲ್ಲಿ ನಮ್ರತಾ ಅವರು ಸ್ನೇಹಿತ್​ನ ಸಮಾಧಾನ ಮಾಡಲು ಪ್ರಯತ್ನಿಸಿದ್ದಾರೆ.

ಇದನ್ನೂ ಓದಿ: ‘ಸ್ನೇಹಿತ್ ಈ ವಾರ ಔಟ್’; ನಾಮಿನೇಷನ್ ಬಳಿಕ ಕಣ್ಣಲ್ಲೇ ಮಾತನಾಡಿಕೊಂಡ ಸಂತೋಷ್-ಪ್ರತಾಪ್

ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್​ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾ ಒಟಿಟಿಯಲ್ಲಿ ಬಿಗ್ ಬಾಸ್ ಪ್ರಸಾರ ಕಾಣುತ್ತಿದೆ. 24 ಗಂಟೆ ಲೈವ್ ನೋಡಲು ಅವಕಾಶ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:29 am, Wed, 29 November 23

ದೀಪಾವಳಿಯಂದೇ ಆಂಧ್ರದಲ್ಲಿ ಭಾರೀ ದುರಂತ; ಪಟಾಕಿ ಸ್ಫೋಟವಾಗಿ ಓರ್ವ ಸಾವು
ದೀಪಾವಳಿಯಂದೇ ಆಂಧ್ರದಲ್ಲಿ ಭಾರೀ ದುರಂತ; ಪಟಾಕಿ ಸ್ಫೋಟವಾಗಿ ಓರ್ವ ಸಾವು
ಯೋಜನೆಗಳನ್ನು ಘೋಷಿಸಿದ್ದು ಕಾಂಗ್ರೆಸ್, ಯಾವ ಕಾರಣಕ್ಕೂ ನಿಲ್ಲಿಸಲಾಗದು: ಮಂಜು
ಯೋಜನೆಗಳನ್ನು ಘೋಷಿಸಿದ್ದು ಕಾಂಗ್ರೆಸ್, ಯಾವ ಕಾರಣಕ್ಕೂ ನಿಲ್ಲಿಸಲಾಗದು: ಮಂಜು
ಶಕ್ತಿ ಯೋಜನೆ ಪರಿಷ್ಕರಣೆ ಮಾಡುವ ಉದ್ದೇಶ ಸರ್ಕಾರಕ್ಕಿಲ್ಲ: ಸಿದ್ದರಾಮಯ್ಯ
ಶಕ್ತಿ ಯೋಜನೆ ಪರಿಷ್ಕರಣೆ ಮಾಡುವ ಉದ್ದೇಶ ಸರ್ಕಾರಕ್ಕಿಲ್ಲ: ಸಿದ್ದರಾಮಯ್ಯ
ದೇವಿಯ ದೃಷ್ಟಿಯಲ್ಲಿ ಎಲ್ಲರೂ ಒಂದೇ ವಿಐಪಿ ವ್ಯವಸ್ಥೆ ಯಾಕೆ? ಭಕ್ತರು
ದೇವಿಯ ದೃಷ್ಟಿಯಲ್ಲಿ ಎಲ್ಲರೂ ಒಂದೇ ವಿಐಪಿ ವ್ಯವಸ್ಥೆ ಯಾಕೆ? ಭಕ್ತರು
ಪಕ್ಷ ಬಿಡದಿದ್ದರೆ ಅರಸು ಇನ್ನೈದು ವರ್ಷ ಸಿಎಂ ಆಗಿರುತ್ತಿದ್ದರು: ಖರ್ಗೆ
ಪಕ್ಷ ಬಿಡದಿದ್ದರೆ ಅರಸು ಇನ್ನೈದು ವರ್ಷ ಸಿಎಂ ಆಗಿರುತ್ತಿದ್ದರು: ಖರ್ಗೆ
ವೋಟು ಕೇಳುವಾಗ ಸರ್ಕಾರ 5-ವರ್ಷದ ಯೋಜನೆ ಎಂದಿತ್ತು ಅನ್ನುತ್ತಾರೆ ಮಹಿಳೆಯರು!
ವೋಟು ಕೇಳುವಾಗ ಸರ್ಕಾರ 5-ವರ್ಷದ ಯೋಜನೆ ಎಂದಿತ್ತು ಅನ್ನುತ್ತಾರೆ ಮಹಿಳೆಯರು!
ಕಚ್​ನಲ್ಲಿ ಸೈನಿಕರಿಗೆ ಸ್ವೀಟ್ ತಿನ್ನಿಸಿ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ
ಕಚ್​ನಲ್ಲಿ ಸೈನಿಕರಿಗೆ ಸ್ವೀಟ್ ತಿನ್ನಿಸಿ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ
ಬಸ್ಸಲ್ಲಿ ಪ್ರಯಾಣಿಸುತ್ತಿದ್ದವರಿಗೂ ಕೈಮುಗಿದು ಮತ ಯಾಚಿಸಿದ ಕುಮಾರಸ್ವಾಮಿ!
ಬಸ್ಸಲ್ಲಿ ಪ್ರಯಾಣಿಸುತ್ತಿದ್ದವರಿಗೂ ಕೈಮುಗಿದು ಮತ ಯಾಚಿಸಿದ ಕುಮಾರಸ್ವಾಮಿ!
ಜನರೊಂದಿಗಿನ ಸಂಪರ್ಕ ನನಗೆ ಮತಗಳಲ್ಲಿ ಪರಿವರ್ತನೆಯಾಗುತ್ತದೆ: ಯೋಗೇಶ್ವರ್
ಜನರೊಂದಿಗಿನ ಸಂಪರ್ಕ ನನಗೆ ಮತಗಳಲ್ಲಿ ಪರಿವರ್ತನೆಯಾಗುತ್ತದೆ: ಯೋಗೇಶ್ವರ್
ಹಾಸನಾಂಬ ಸನ್ನಿಧಿಯಲ್ಲಿ ಕಂದಾಯ ಇಲಾಖೆ ಸಿಬ್ಬಂದಿ ಮಧ್ಯೆ ಮಾರಾಮಾರಿ
ಹಾಸನಾಂಬ ಸನ್ನಿಧಿಯಲ್ಲಿ ಕಂದಾಯ ಇಲಾಖೆ ಸಿಬ್ಬಂದಿ ಮಧ್ಯೆ ಮಾರಾಮಾರಿ