ಪ್ರತಾಪ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ: ಡಾ ಪ್ರಯಾಗ್

Drone Prathap: ಡ್ರೋನ್ ಪ್ರತಾಪ್ ಗುರುವಾರದ ಎಪಿಸೋಡ್​ನಲ್ಲಿ ತಮ್ಮ ಮೇಲೆ ಅಧಿಕಾರಿಗಳು, ಪೊಲೀಸರು ದೌರ್ಜನ್ಯ ನಡೆಸಿದರು ಎಂದು ಕಣ್ಣೀರು ಹಾಕಿದ್ದರು. ಆದರೆ ಡ್ರೋನ್ ಅಂದು ಮಾಡಿದ ಆರೋಪವೆಲ್ಲ ಸುಳ್ಳು ಎಂದಿದ್ದರು.

ಪ್ರತಾಪ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ: ಡಾ ಪ್ರಯಾಗ್
ಡ್ರೋನ್ ಪ್ರತಾಪ್
Follow us
ಮಂಜುನಾಥ ಸಿ.
|

Updated on: Dec 03, 2023 | 3:36 PM

ಡ್ರೋನ್ ಪ್ರತಾಪ್ (Drone Prathap) ಬಿಗ್​ಬಾಸ್ (BiggBoss) ಮನೆಯಲ್ಲಿ ಕಳೆದ ವಾರ ಆಡಿದ್ದ ಮಾತುಗಳು ಹೊರಗೆ ಸಣ್ಣ ಮಟ್ಟಿಗಿನ ವಿವಾದಕ್ಕೆ ಕಾರಣವಾಗಿದೆ. ಗುರುವಾರದ ಎಪಿಸೋಡ್​ನಲ್ಲಿ ಮಾತನಾಡಿದ್ದ ಡ್ರೋನ್ ಪ್ರತಾಪ್, ಕೋವಿಡ್ ನಿಯಮ ಉಲ್ಲಂಘಿಸಿದ್ದಾರೆ ಎಂದು ತಮ್ಮ ಮೇಲೆ ಪ್ರಕರಣ ದಾಖಲಿಸಿದ ಸಮಯದಲ್ಲಿ ತಮಗೆ ಚಿತ್ರಹಿಂಸೆ ಕೊಡಲಾಯ್ತು, ತಲೆ-ತಲೆಗೆ ಹೊಡೆದರು, ಕೆಟ್ಟದಾಗಿ ಮಾತನಾಡಿದರು ಎಂದಿದ್ದ ಪ್ರತಾಪ್, ಅದೇ ಸಮಯದಲ್ಲಿ ಅಪ್ಪ-ಅಮ್ಮನ ಬಳಿ ನನ್ನ ಬಗ್ಗೆ ಇಲ್ಲ-ಸಲ್ಲದ ದೂರುಗಳನ್ನು ಹೇಳಿದರು. ವಿಷವಿಟ್ಟು ಸಾಯಿಸಿ ಎಂದೆಲ್ಲ ಐಡಿಯಾ ಕೊಟ್ಟರು ಎಂದು ಹೇಳಿ ಕಣ್ಣೀರು ಹಾಕಿದ್ದರು ಡ್ರೋನ್ ಪ್ರತಾಪ್.

ಡ್ರೋನ್ ಪ್ರತಾಪ್ ಕೆಲವು ಅಧಿಕಾರಿಗಳ ಮುಂದೆ ಕೂತು ಇದೇ ವಿಷಯಗಳನ್ನು ಪ್ರಶ್ನೆ ಮಾಡುತ್ತಿರುವ ವಿಡಿಯೋ ಸಹ ಇತ್ತೀಚೆಗೆ ವೈರಲ್ ಆಗಿದೆ. ಇದರ ಬೆನ್ನಲ್ಲೆ ಪ್ರತಾಪ್ ವಿರುದ್ಧ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಿದ್ದ ನೋಡಲ್ ಅಧಿಕಾರಿ, ಪ್ರತಾಪ್ ಮಾಡಿರುವ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಪ್ರತಾಪ್ ಹೇಳುತ್ತಿರುವದೆಲ್ಲ ಸುಳ್ಳು, ಪ್ರತಾಪ್ ವಿರುದ್ಧ ಮಾನನಷ್ಟ ಹೂಡುತ್ತೇನೆ ಎಂದಿದ್ದಾರೆ.

ಪ್ರತಾಪ್ ವಿರುದ್ಧ ಕೋವಿಡ್ ನಿಯಮ ಉಲ್ಲಂಘನೆ ಪ್ರಕರಣ ದಾಖಲಿಸಿದ್ದ ವಿಚಾರಣೆಯನ್ನೂ ನಡೆಸಿದ್ದ ಆಗಿನ ಬಿಬಿಎಂಪಿ ನೋಡಲ್ ಅಧಿಕಾರಿ ಡಾ ಪ್ರಯಾಗ್, ಥರ್ಡ್ ಐ ಹೆಸರಿನ ಯೂಟ್ಯೂಬ್ ಚಾನೆಲ್​ನಲ್ಲಿ, ಪ್ರತಾಪ್ ಇತ್ತೀಚೆಗೆ ಬಿಗ್​ಬಾಸ್ ಮನೆಯಲ್ಲಿ ಮಾಡಿರುವ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ್ದು, ‘‘ಬಿಗ್​ಬಾಸ್ ಮನೆಯಲ್ಲಿ ಪ್ರತಾಪ್ ಹೇಳಿದ್ದೆಲ್ಲವೂ ಸುಳ್ಳು, ನಾವು ಆತನಿಗೆ ಯಾವುದೇ ರೀತಿಯ ಹಿಂಸೆ ಕೊಟ್ಟಿಲ್ಲ. ಹಾಗೊಮ್ಮೆ ನಾವು ಹಿಂಸೆ ಕೊಟ್ಟಿದ್ದಿದ್ದರೆ ಆಗಲೇ ನಮ್ಮ ವಿರುದ್ಧ ದೂರು ನೀಡಬಹುದಿತ್ತು, ಈಗ ಬಿಗ್​ಬಾಸ್ ವೇದಿಕೆ ಸಿಕ್ಕಿದೆ ಎಂಬ ಕಾರಣಕ್ಕೆ ಆರೋಪ ಮಾಡಿದ್ದಾರೆ’’ ಎಂದಿದ್ದಾರೆ.

ಇದನ್ನೂ ಓದಿ:ಕಿವಿ ಹಿಡಿದು ಮಂಡಿ ಬಗ್ಗಿಸಿ ಬಿಗ್​ಬಾಸ್​ಗೆ ಕ್ಷಮೆ ಕೇಳಿದ ಡ್ರೋನ್ ಪ್ರತಾಪ್: ಮಾಡಿದ ತಪ್ಪೇನು?

‘‘ನಾನು ಅವರ ತಲೆಗೆ ಹೊಡೆಯುವುದಾಗಲಿ, ಆತ ಹೇಳಿದಂತೆ ಇತರೆ ಹಿಂಸೆಗಳನ್ನು ನೀಡಿಲ್ಲ. ಅವರ ತಂದೆಯ ಬಳಿಯೂ ಸೌಜನ್ಯದಿಂದಲೇ ವರ್ತಿಸಿದ್ದೆವು. ಆತ ಟಿವಿ ಚಾನೆಲ್ ಒಂದರಲ್ಲಿ ಕುಳಿತುಕೊಂಡು, ಕ್ವಾರಂಟೈನ್ ಇದ್ದರೂ ಸಹ ಇಲ್ಲಿಗೆ ಬಂದು ಸಂದರ್ಶನ ನೀಡುತ್ತಿದ್ದೀನಿ ಎಂದಿದ್ದ, ಹಾಗಾಗಿ ಆತನ ವಿರುದ್ಧ ಎಫ್​ಐಆರ್ ದಾಖಲು ಮಾಡಿಕೊಂಡಿದ್ದೆವು. ಆತ ಹೇಳಿದಂತೆ ಪೊಲೀಸರೆಲ್ಲ ಅವನನ್ನು ಸುತ್ತುವರೆದಿರಲಿಲ್ಲ’’ ಎಂದಿದ್ದಾರೆ ಡಾ ಪ್ರಯಾಗ್.

‘‘ಸರ್ಕಾರಿ ಅಧಿಕಾರಿಗಳಾಗಿದ್ದ ನಾವು ನಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡರೆ ಶಿಕ್ಷೆಯಾಗುತ್ತದೆ. ಕೆಲಸವೇ ಹೋಗುತ್ತದೆ. ಸಾರ್ವಜನಿಕರು ಸರ್ಕಾರಿ ಅಧಿಕಾರಿಗಳ ವಿರುದ್ಧ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಬಹುದು. ಆದರೆ ಘಟನೆ ನಡೆದು 3 ವರ್ಷಗಳ ನಂತರ ಪ್ರತಾಪ್ ಸುಳ್ಳು ಆರೋಪ ಮಾಡುತ್ತಿದ್ದಾನೆ, ಆತ ಮಾಡಿರುವ ಆರೋಪಗಳು ನಿರಾಧಾರ. ಆತ ಬೇಕಿದ್ದರೆ ಸಾಬೀತು ಮಾಡಲಿ’’ ಎಂದು ಸವಾಲು ಹಾಕಿರುವ ಪ್ರಯಾಗ್, ‘‘ಸುಳ್ಳು ಆರೋಪ ಮಾಡಿರುವ ಡ್ರೋನ್ ಪ್ರತಾಪ್ ವಿರುದ್ಧ ಮಾನ ನಷ್ಟ ಮೊಕದ್ದಮೆ ದಾಖಲಿಸಿದ್ದೇನೆ’’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್