AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಗೀತಾ ಅಥವಾ ವಿನಯ್, ಮನೆಯ ದುರಹಂಕಾರಿ ಯಾರು?

Bigg Boss: ಸಂಗೀತಾ ಹಾಗೂ ವಿನಯ್ ಬಿಗ್​ಬಾಸ್ ಕನ್ನಡ ಸೀಸನ್​ನ ಪ್ರಮುಖ ಸ್ಪರ್ಧಿಗಳಲ್ಲಿ ಪ್ರಮುಖರು. ಈ ಇಬ್ಬರಲ್ಲಿ ಹೆಚ್ಚು ದುರಹಂಕಾರಿಗಳು ಯಾರು ಎಂಬುದು ಭಾನುವಾರದ ಎಪಿಸೋಡ್​ನಲ್ಲಿ ಪ್ರೇಕ್ಷಕರಿಗೆ ತಿಳಿಯಿತು.

ಸಂಗೀತಾ ಅಥವಾ ವಿನಯ್, ಮನೆಯ ದುರಹಂಕಾರಿ ಯಾರು?
ಮಂಜುನಾಥ ಸಿ.
|

Updated on:Dec 03, 2023 | 11:57 PM

Share

ಬಿಗ್​ಬಾಸ್ (BiggBoss) ಕನ್ನಡ ಸೀಸನ್ 10ರ ಕೆಲವು ಸ್ಪರ್ಧಿಗಳು ಸಖತ್ ಕುತೂಹಲ ಕೆರಳಿಸಿದ್ದಾರೆ. ಮನೆಯ ಒಳಗಿರುವ ಕೆಲವು ಸ್ಪರ್ಧಿಗಳನ್ನು ಪ್ರೇಕ್ಷಕರು ಬಹಳ ಇಷ್ಟಪಟ್ಟರೆ, ಕೆಲವರನ್ನು ಸಖತ್ ದ್ವೇಷಿಸುತ್ತಿದ್ದಾರೆ. ಎರಡೂ ರೀತಿಯ ಪ್ರೇಕ್ಷಕರನ್ನು ಹೊಂದಿರುವ ಸ್ಪರ್ಧಿಗಳೆಂದರೆ ಅದು ಸಂಗೀತಾ ಹಾಗೂ ವಿನಯ್. ಮನೆಯಲ್ಲಿ ಇವರಿಬ್ಬರ ವರ್ತನೆಯೂ ಸಖತ್ ಭಿನ್ನ. ಆರಂಭದಿಂದಲೂ ಪರಸ್ಪರ ದ್ವೇಷಿಸಿಕೊಂಡು, ಪರಸ್ಪರ ವೈರತ್ವ ತೋರಿಸಿದ್ದ ಸಂಗೀತಾ ಹಾಗೂ ವಿನಯ್, ಕಳೆದೆರಡು ವಾರ ಸ್ನೇಹಿತರಂತೆ ಇದ್ದರು, ಈಗ ಮತ್ತೆ ಇಬ್ಬರೂ ವೈರಿಗಳಾಗಿದ್ದಾರೆ. ಭಾನುವಾರದ ಎಪಿಸೋಡ್​ನಲ್ಲಿ ಕಿಚ್ಚ ಟಾಸ್ಕ್ ಒಂದನ್ನು ಮಾಡಿಸಿದರು. ಆ ಟಾಸ್ಕ್​ನಲ್ಲಿ ಮನೆಯ ಅತ್ಯಂತ ಹೆಚ್ಚು ದುರಹಂಕಾರಿ ಎಂಬುದು ಪ್ರೇಕ್ಷಕರಿಗೆ ಗೊತ್ತಾಯ್ತು.

ದುರಂಹಕಾರಕ್ಕೆ ಔಷಧ, ನಾಲಗೆ ಬಿಗಿ ಹಿಡಿಯಲು ಔಷಧ, ನಂಬಿಕೆ ದ್ರೋಹ ಮಾಡದಿರಲು ಔಷಧ, ನಾಲಿಗೆಗೆ ಲಗಾಮು ಹಾಕುವ ಔಷಧ ಹೆಸರಿನಲ್ಲಿ ಕಹಿಯಾದ ಔಷಧಗಳನ್ನು ತರಿಸಲಾಯ್ತು. ಮನೆಯ ಪ್ರತಿಯೊಬ್ಬ ಸದಸ್ಯನೂ ಎರಡು ಟಾನಿಕ್ ಅನ್ನು ಯಾರಾದರೂ ಇಬ್ಬರಿಗೆ ಕೊಡಬೇಕಿತ್ತು. ಈ ಟಾಸ್ಕ್​ನಲ್ಲಿ ಅತಿ ಹೆಚ್ಚು ಟಾನಿಕ್ ಬಂದಿದ್ದು ಸಂಗೀತಾಗೆ, ಎರಡನೇ ಸ್ಥಾನ ವಿನಯ್ ಗೌಡಗೆ.

ಸಂಗೀತಾಗೆ ಬರೋಬ್ಬರಿ ಏಳು ಟಾನಿಕ್​ ದೊರಕಿತು. ಇದರಲ್ಲಿ ಐದು ಟಾಕಿನ್ ದುರಹಂಕಾರವನ್ನು ನಿಯಂತ್ರಿಸಿಕೊಳ್ಳಬೇಕು ಎಂಬುದೇ ಆಗಿತ್ತು. ನಂಬಿಕೆ ದ್ರೋಹ ಹಾಗೂ ನಾಲಿಗೆಗೆ ಲಗಾಮು ಔಷಧ ತಲಾ ಒಂದೊಂದು ಬಂತು. ವಿನಯ್ ಅಂತೂ ಸಂಗೀತಾಗೆ ಎರಡು ಟಾನಿಕ್ ನೀಡಿದ್ದರಿಂದ ಸಂಖ್ಯೆ ತುಸು ಹೆಚ್ಚಾಯ್ತು ಎಂಬುದನ್ನೂ ಗಮನಿಸಬೇಕು. ಎರಡನೇ ಸ್ಥಾನ ಪಡೆದ ವಿನಯ್​ಗೆ ಬರೋಬ್ಬರಿ ಐದು ಟಾನಿಕ್​ಗಳು ಬಂದವು. ಅದರಲ್ಲಿ ಎರಡು ದುರಹಂಕಾರ, ಇನ್ನುಳಿದವೆಲ್ಲ ನಾಲಿಗೆ ಬಿಗಿ ಹಿಡಿದುಕೊಳ್ಳಬೇಕು ಎಂಬ ಟಾನಿಕ್ ಆಗಿತ್ತು.

ಇದನ್ನೂ ಓದಿ: ಈ ವಾರ ಬಿಗ್​ಬಾಸ್ ಮನೆಯಲ್ಲಿ ಅತಿ ಹೆಚ್ಚು ಮತ ಗಳಿಸಿರುವುದು ಯಾರು? ಡ್ರೋನ್ ಪ್ರತಾಪ್​ಗೆ ಎಷ್ಟನೆ ಸ್ಥಾನ?

ಇನ್ನು ತುಕಾಲಿಗೆ ಸಹ ನಾಲಿಗೆ ಬಿಗಿ ಹಿಡಿದುಕೊಳ್ಳಬೇಕು ಎಂಬ ಕೆಲವು ಟಾನಿಕ್​ಗಳು ಬಂದವು, ಸಿರಿ ಅವರಿಗೆ ಹೇಡಿತನ ನಿವಾರಣೆ ಟಾನಿಕ್ ಅನ್ನು ತುಕಾಲಿ ನೀಡಿದರು. ಡ್ರೋನ್ ಪ್ರತಾಪ್​ಗೆ ನಂಬಿಕೆ ದ್ರೋಹ ಟಾನಿಕ್ ಅನ್ನು ನಮ್ರತಾ ನೀಡಿದರು. ಸ್ನೇಹಿತ್​ಗೂ ಕೆಲವು ನಾಲಿಗೆ ಬಿಗಿ ಹಿಡಿತದ ಟಾನಿಕ್ ಸಿಕ್ಕವು, ಮೈಖಲ್​ಗೆ ದುರಹಂಕಾರದ ಟಾನಿಕ್, ಅವಿ, ಕಾರ್ತಿಕ್​ಗೆ ತಲಾ ಒಂದು ನಾಲಿಗೆ ಬಿಗಿ ಹಿಡಿತದ ಟಾನಿಕ್ ಗಳು ಸಹ ದೊರೆತವು. ವರ್ತೂರು ಸಂತೋಷ್​ಗೆ, ತನಿಷಾಗೆ ಹಾಗೂ ನಮ್ರತಾಗೆ ಯಾವುದೇ ಟಾನಿಕ್​ ಸಿಗಲಿಲ್ಲ.

ಈ ಟಾನಿಕ್ ನೀಡುವ ಟಾಸ್ಕ್ ನಡೆವಾಗ ಕಿಚ್ಚನ ಎದುರೇ ಸಂಗೀತಾ ಹಾಗೂ ವಿನಯ್ ನಡುವೆ ಸಣ್ಣ ಮಟ್ಟಿಗಿನ ಮಾತಿನ ವಾರ್ ಸಹ ನಡೆಯಿತು. ಪರಸ್ಪರರನ್ನು ಇವರು ಮೂದಲಿಸಿದ್ದು ಸಹ ನಡೆಯಿತು. ಎಲಿಬಿಲ್ಲದ ನಾಲಗೆ, ಯಾರ ಬಗ್ಗೆ ಏನಾದರೂ ಮಾತನಾಡುತ್ತಾನೆ ಎಂದು ವಿನಯ್ ಬಗ್ಗೆ ಸಂಗೀತಾ ಹೇಳಿದರೆ, ಸಂಗೀತಾ ಜೊತೆ ಫ್ರೆಂಡ್​ಶಿಫ್ ಮಾಡಿದರೆ ನನಗಾಗಿ ಎಲ್ಲವನ್ನೂ ತ್ಯಾಗ ಮಾಡಬೇಕು ಎಂದು ಆಕೆ ನಿರೀಕ್ಷೆ ಮಾಡುತ್ತಾಳೆ, ತಾನು ಸ್ವತಃ ಇತರರ ಬಗ್ಗೆ ಮಾತನಾಡಿ, ನನ್ನ ವಿರುದ್ಧ ಹೇಳುತ್ತಾಳೆ ಎಂದರು ವಿನಯ್. ಇವರಿಬ್ಬರ ಜಗಳ ಎಲ್ಲಿಗೆ ಹೋಗಿ ಮುಟ್ಟುತ್ತದೆಯೋ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:50 pm, Sun, 3 December 23

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್