‘ಬಿಗ್ ಬಾಸ್’ (Bigg Boss) ಶೋ ಒಂದಲ್ಲಾ ಒಂದು ವಿಚಾರಕ್ಕೆ ಟ್ರೋಲ್ ಆಗುತ್ತಲೇ ಇರುತ್ತದೆ. ಈ ಶೋನ ಇಷ್ಟಪಡುವವರು ಎಷ್ಟಿದ್ದಾರೋ ಹೇಟ್ ಮಾಡುವವರೂ ಅಷ್ಟೇ ಇದ್ದಾರೆ. ಹೀಗಾಗಿ, ಬಿಗ್ ಬಾಸ್ನಲ್ಲಿ ನಡೆಯುವ ಹಲವು ವಿಚಾರ ಟ್ರೋಲ್ ಆಗುತ್ತದೆ. ಈಗ ಸುದೀಪ್ ಅವರು ಬಿಗ್ ಬಾಸ್ ವೇದಿಕೆಯಲ್ಲಿ ಒಂದು ಗಟ್ಟಿ ನಿರ್ಧಾರ ಮಾಡಿದ್ದಾರೆ. ಇದನ್ನು ಅನೇಕರು ಟೀಕೆ ಮಾಡಿದ್ದಾರೆ. ಸುದೀಪ್ ಮಾಡಿರೋ ನಿರ್ಧಾರ ಸರಿ ಅಲ್ಲ ಎಂದು ಅನೇಕರು ಹೇಳಿದ್ದಾರೆ. ಈ ವಿಚಾರದಲ್ಲಿ ತಮ್ಮನ್ನು ಟ್ರೋಲ್ ಮಾಡಲಾಗುತ್ತದೆ ಎಂಬುದು ಸುದೀಪ್ ಅವರಿಗೆ ಮೊದಲೇ ಗೊತ್ತಾಗಿದೆ.
ಕಳೆದ ವೀಕೆಂಡ್ನಲ್ಲಿ ಎಲಿಮಿನೇಷನ್ ನಡೆದಿಲ್ಲ. ನಾಮಿನೇಟ್ ಆದವರ ಪೈಕಿ ಮೈಕಲ್ ಹಾಗೂ ಸ್ನೇಹಿತ್ ಕೊನೆಯಲ್ಲಿ ಉಳಿದುಕೊಂಡಿದ್ದರು. ಇಬ್ಬರೂ ಸ್ಟ್ರಾಂಗ್ ಕಂಟೆಸ್ಟಂಟ್ಗಳು. ಹೀಗಾಗಿ, ಯಾರನ್ನೇ ಕಳುಹಿಸಲು ಸುದೀಪ್ಗೆ ಇಷ್ಟ ಇರಲಿಲ್ಲ. ಈ ಕಾರಣಕ್ಕೆ ಸುದೀಪ್ ಒಂದು ಗಟ್ಟಿ ನಿರ್ಧಾರ ಮಾಡಿದರು. ವಿಶೇಷ ಅಧಿಕಾರ ಬಳಸಿ ಮೈಕಲ್ ಹಾಗೂ ಸ್ನೇಹಿತ್ ಇಬ್ಬರನ್ನೂ ಸೇವ್ ಮಾಡಿದರು.
‘ನನಗೆ ಈ ವಿಶೇಷ ಅಧಿಕಾರ ಇತ್ತು. ಆದರೆ ಇದನ್ನು ಬಳಸಿರಲಿಲ್ಲ. ಇದನ್ನು ಬಳಸೋದು ಯಾವಾಗಲೂ ಸರಿ ಎನಿಸಿರಲಿಲ್ಲ. ಆದರೆ, ಈಗ ಸೂಕ್ತ ಎನಿಸುತ್ತಿದೆ. ನಿಮ್ಮಲ್ಲಿ ಒಬ್ಬರು ಎಲಿಮಿನೇಟ್ ಆಗಲೇಬೇಕಿತ್ತು. ಇದು ಮನೆಯವರಿಗೆ ಅನ್ಯಾಯ ಎಂದೆನಿಸಿರಬಹುದು. ಆದರೆ, ನನಗೆ ಸರಿ ಅನಿಸಿದ್ದನ್ನು ಮಾಡಿದ್ದೇನೆ. ನನ್ನ ಈ ನಿರ್ಧಾರಕ್ಕೆ ಜನರು ಟ್ರೋಲ್ ಮಾಡುತ್ತಾರೆ’ ಎಂದರು ಸುದೀಪ್.
ಇದನ್ನೂ ಓದಿ: Snehith Gowda: ‘ನನ್ನ ಗುಂಡಿನಾ ನಾನೇ ತೋಡಿಕೊಂಡೆನಾ?’; ಸುದೀಪ್ಗೆ ಸ್ನೇಹಿತ್ ಪ್ರಶ್ನೆ
ಸುದೀಪ್ ಅವರು ಟ್ರೋಲ್ ವಿಚಾರದ ಬಗ್ಗೆ ಮಾತನಾಡುವುದಕ್ಕೂ ಒಂದು ಕಾರಣ ಇದೆ. ಹೊರ ಜಗತ್ತಿನಲ್ಲಿ ವಿನಯ್ ವಿಚಾರ ಸಾಕಷ್ಟು ಟ್ರೋಲ್ ಆಗಿದೆ ಎಂದು ಪವಿ ಹೇಳಿದ್ದರು. ಈ ವಿಚಾರವನ್ನು ಸುದೀಪ್ ನೆನಪಿಟ್ಟುಕೊಂಡಿದ್ದಾರೆ. ತಮ್ಮ ನಿರ್ಧಾರಕ್ಕೆ ಬರುವ ನೆಗೆಟಿವ್ ಕಮೆಂಟ್ಗಳು ನಿಜವಾದ ಟ್ರೋಲ್ ಅನ್ನೋದು ಸುದೀಪ್ ಅಭಿಪ್ರಾಯ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಬಿಗ್ ಬಾಸ್ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ ಹಳೆಯ ಎಪಿಸೋಡ್ಗಳ ಜೊತೆ 24 ಗಂಟೆ ಲೈವ್ ಕೂಡ ವೀಕ್ಷಿಸಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ