AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾವು ಮಾನವೀಯತೆ ಅಂತ ಹೋದರೆ ನಮ್ಮ ಮುಂದೆಯೇ ಹಳ್ಳ ತೋಡುತ್ತಾರೆ’: ವರ್ತೂರು ಸಂತೋಷ್​

ಇಷ್ಟು ದಿನಗಳ ಕಾಲ ತನಿಷಾ ಕುಪ್ಪಂಡ ಮತ್ತು ವರ್ತೂರು ಸಂತೋಷ್​ ಅವರ ನಡುವೆ ಆಪ್ತತೆ ಬೆಳೆದಿತ್ತು. ಆದರೆ ಈಗ ಅವರಿಬ್ಬರ ನಡುವೆ ಬಿರುಕು ಮೂಡಿದೆ. ತನಿಷಾಗೆ ತಾವು ಮಾನವೀಯತೆ ತೋರಿಸಲು ಸಾಧ್ಯವಿಲ್ಲ ಎಂದು ವರ್ತೂರು ಸಂತೋಷ್​ ಅವರು ಮುಖಕ್ಕೆ ಹೊಡೆದಂತೆ ಹೇಳಿದ್ದಾರೆ. ಆ ವಿಡಿಯೋ ಇಲ್ಲಿದೆ..

‘ನಾವು ಮಾನವೀಯತೆ ಅಂತ ಹೋದರೆ ನಮ್ಮ ಮುಂದೆಯೇ ಹಳ್ಳ ತೋಡುತ್ತಾರೆ’: ವರ್ತೂರು ಸಂತೋಷ್​
ವರ್ತೂರು ಸಂತೋಷ್​, ತನಿಷಾ ಕುಪ್ಪಂಡ
ಮದನ್​ ಕುಮಾರ್​
|

Updated on: Dec 04, 2023 | 2:43 PM

Share

ಬಿಗ್​ ಬಾಸ್​ ಮನೆಯಲ್ಲಿ ವರ್ತೂರು ಸಂತೋಷ್​ (Varthur Santhosh) ಅವರ ಆಟದ ವೈಖರಿ ಈಗ ಬದಲಾಗಿದೆ. ಆರಂಭದಲ್ಲಿ ಸುಮ್ಮನೆ ಇರುತ್ತಿದ್ದ ಅವರು ಈಗ ಸಖತ್​ ಜೋರಾಗಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ‘ಕಲರ್ಸ್ ಕನ್ನಡ’ ವಾಹಿನಿ ಹೊಸ ಪ್ರೋಮೋ ಹಂಚಿಕೊಂಡಿದೆ. ಡಿಸೆಂಬರ್​ 4ರ ಸಂಚಿಕೆಯಲ್ಲಿ ವರ್ತೂರು ಸಂತೋಷ್​ ಅವರು ಸಿಕ್ಕಾಪಟ್ಟೆ ನೇರವಾಗಿ ಮಾತನಾಡುತ್ತಾರೆ. ನಾಮಿನೇಷನ್​ ವಿಚಾರ ಬಂದಾಗ ತನಿಷಾ ಕುಪ್ಪಂಡ (Tanisha Kuppanda) ಅವರಿಗೂ ವರ್ತೂರು ಸಂತೋಷ್​ ಮುಲಾಜು ತೋರಿಸಿಲ್ಲ. ಅವರ ಈ ವರ್ತನೆ ನೋಡಿ ತನಿಷಾಗೆ ಶಾಕ್​ ಆಗಿದೆ. ಅಷ್ಟೇ ಅಲ್ಲ, ಬಿಗ್​ ಬಾಸ್​ (Bigg Boss Kannada) ಮನೆಯಲ್ಲಿ ಇರುವ ಇತರೆ ಸ್ಪರ್ಧಿಗಳೂ ಅಚ್ಚರಿಪಟ್ಟಿದ್ದಾರೆ. ಅಷ್ಟಕ್ಕೂ ವರ್ತೂರು ಸಂತೋಷ್​ ಹೇಳಿದ್ದೇನು? ಇಲ್ಲಿದೆ ವಿವರ..

ಸೋಮವಾರ ಬಂತೆಂದರೆ ನಾಮಿಷನ್​ ಪ್ರಕ್ರಿಯೆ ಶುರುವಾಗುತ್ತದೆ. ಯಾರು ಎಲಿಮಿನೇಟ್​ ಆಗಬೇಕು ಎಂಬುದಕ್ಕೆ ಸ್ಪರ್ಧಿಗಳ ಹೆಸರನ್ನು ನಾಮಿನೇಟ್​ ಮಾಡುವ ಸಂದರ್ಭ ಬಂದಾಗ ಎಲ್ಲರೂ ನಿಷ್ಠುರವಾಗಿ ನಡೆದುಕೊಳ್ಳುತ್ತಾರೆ. 9ನೇ ವಾರದಲ್ಲೂ ಹಾಗೆಯೇ ಆಗಿದೆ. ಅದರಲ್ಲೂ ವರ್ತೂರು ಸಂತೋಷ್​ ಅವರು ತನಿಷಾ ಕುಪ್ಪಂಡ ವಿರುದ್ಧವೇ ತಿರುಗಿ ಬಿದ್ದಿರುವುದು ಅಚ್ಚರಿಗೆ ಕಾರಣ ಆಗಿದೆ. 8ನೇ ವಾರದಲ್ಲಿ ತನಿಷಾಗೆ ಪೆಟ್ಟಾಗಿತ್ತು. ಆದರೂ ಕೂಡ ನಾಮಿನೇಷನ್​ ವಿಚಾರದಲ್ಲಿ ತಾವು ಮಾನವೀಯತೆ ತೋರಿಸಲು ಸಾಧ್ಯವಿಲ್ಲ ಎಂದು ವರ್ತೂರು ಸಂತೋಷ್​ ಅವರು ಹೇಳಿದ್ದಾರೆ.

‘ತನಿಷಾಗೆ ಇನ್ನೂ ಕಾಲು ನೋವು ಇದೆ. ಹಾಗಾಗಿ ಅವಳನ್ನೇ ಸೇವ್​ ಮಾಡಿ’ ಎಂದು ಕಾರ್ತಿಕ್ ಮಹೇಶ್​ ಅವರು ಕ್ಯಾಪ್ಟನ್​ ಆದ ಸ್ನೇಹಿತ್​ ಬಳಿ ಕೇಳಿಕೊಂಡರು. ಅದಕ್ಕೆ ವರ್ತೂರು ಸಂತೋಷ್​ ಒಪ್ಪಿಕೊಳ್ಳಲಿಲ್ಲ. ‘ತ್ಯಾಗಮೂರ್ತಿಗಳಾಗಲು ನಾವು ಇಲ್ಲಿಗೆ ಬಂದಿಲ್ಲ. ತನಿಷಾ ಅವರನ್ನು ನಾನು ಬೇಕಂತಲೇ ಹೋಗಿ ತಳ್ಳಿಲ್ಲ. ಅದಕ್ಕಾಗಿ ತನಿಷಾಗೆ ಇನ್ನೊಂದು ಚಾನ್ಸ್​ ಸಿಗಲಿ ಅಂತ ನಾನು ಕೇಳಲ್ಲ. ನಾವು ಮಾನವೀಯತೆ ಅಂತ ಹೋದರೆ ನಮ್ಮ ಹಿಂದೆ ಅಲ್ಲ.. ಮುಂದೆಯೇ ಹಳ್ಳ ತೋಡಿರುತ್ತಾರೆ’ ಎಂದು ವರ್ತೂರು ಸಂತೋಷ್​ ಹೇಳಿದ್ದಾರೆ.

ಇದನ್ನೂ ಓದಿ: ವರ್ತೂರು ಸಂತೋಷ್​ ಜೈಲಿನಿಂದ ಎಸ್ಕೇಪ್​ ಆಗಿದ್ದು ಹೇಗೆ? ಇಲ್ಲಿದೆ ವಿಡಿಯೋ

ವರ್ತೂರು ಸಂತೋಷ್​ ಅವರ ಈ ಮಾತಿನಿಂದ ನಮ್ರತಾ ಗೌಡ ಅವರಿಗೆ ಸಖತ್​ ಖುಷಿ ಆಗಿದೆ. ಅವರು ಚಪ್ಪಾಳೆ ಹೊಡೆದು ಬೆಂಬಲ ಸೂಚಿಸಿದ್ದಾರೆ. ಆದರೆ ತನಿಷಾ ಕುಪ್ಪಂಡ ಅವರಿಗೆ ತೀವ್ರ ಅಸಮಾಧಾನ ಆಗಿದೆ. ಅದಕ್ಕೆ ಅವರು ಕೂಡಲೇ ತಿರುಗೇಟು ನೀಡಿದ್ದಾರೆ. ‘ಈಗ ಒಂದು ವಾರದಿಂದ ಮಾತನಾಡುತ್ತಿರುವ ವರ್ತೂರು ಸಂತೋಷ್​ ಅವರು ಮೊದಲ ದಿನದಿಂದಲೇ ಮಾತನಾಡಿದ್ದರೆ ನಾನು ಈ ಮಾತನ್ನು ಮೆಚ್ಚಿಕೊಳ್ಳುತ್ತಿದ್ದೆ’ ಎಂದು ತನಿಷಾ ಹೇಳಿದ್ದಾರೆ. ‘ಕಲರ್ಸ್​ ಕನ್ನಡ’ ವಾಹಿನಿಯಲ್ಲಿ ಡಿಸೆಂಬರ್​ 4ರಂದು ರಾತ್ರಿ 9.30ಕ್ಕೆ ಈ ಸಂಚಿಕೆ ಪ್ರಸಾರ ಆಗಲಿದೆ. ‘ಜಿಯೋ’ ಸಿನಿಮಾದಲ್ಲಿ ಫ್ರೀ ಆಗಿ ಲೈವ್​ ನೋಡಲು ಅವಕಾಶ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಅಮೆರಿಕದಿಂದ ಇರಾನ್​ಗೆ 300 ಡಾಲರ್ ಆರ್ಥಿಕ ನೆರವು
ಅಮೆರಿಕದಿಂದ ಇರಾನ್​ಗೆ 300 ಡಾಲರ್ ಆರ್ಥಿಕ ನೆರವು
ಬೆಂಗಳೂರಿನಲ್ಲಿ ನಕಲಿ ನಾಗಸಾಧುಗಳಿಂದ ಉಂಗುರ ಕಳ್ಳತನ
ಬೆಂಗಳೂರಿನಲ್ಲಿ ನಕಲಿ ನಾಗಸಾಧುಗಳಿಂದ ಉಂಗುರ ಕಳ್ಳತನ
ಕೋಲಾರದಲ್ಲಿ ವಾಹನಗಳನ್ನು ತಡೆದು ಮಾವು ಬೆಳೆಗಾರರ ಪ್ರತಿಭಟನೆ!
ಕೋಲಾರದಲ್ಲಿ ವಾಹನಗಳನ್ನು ತಡೆದು ಮಾವು ಬೆಳೆಗಾರರ ಪ್ರತಿಭಟನೆ!