‘ಒಂದು ಮುತ್ತು ಕೊಡಿ’; ತನಿಷಾ ಎದುರು ವಿನಯ್ ಹೊಸ ಬೇಡಿಕೆ
ವಿನಯ್ ಹಾಗೂ ತನಿಷಾ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆದಿಲ್ಲ. ಇಬ್ಬರೂ ಅನೇಕ ಬಾರಿ ಕಿತ್ತಾಡಿಕೊಂಡಿದ್ದಾರೆ. ಕಳೆದ ವಾರ ಇವರ ಮಧ್ಯೆ ದೊಡ್ಡ ಜಗಳವೇ ನಡೆದಿತ್ತು. ಆದರೂ, ಈಗ ಕೊಟ್ಟಿರುವ ಫನ್ ಟಾಸ್ಕ್ ಎಲ್ಲಾ ದ್ವೇಷವನ್ನು ಮರೆಸಿದೆ.
ಕಳೆದವಾರ ಬಿಗ್ ಬಾಸ್ (Bigg Boss) ಮನೆಯ ವಾತಾವರಣ ಸರಿ ಇರಲಿಲ್ಲ. ಸ್ಪರ್ಧಿಗಳ ಮಧ್ಯೆ ದ್ವೇಷದ ಬೆಂಕಿ ಹತ್ತಿತ್ತು. ಈ ಕಾರಣಕ್ಕೆ ಈ ವಾರ ಬಿಗ್ ಬಾಸ್ ಫನ್ ಟಾಸ್ಕ್ ನೀಡಿದ್ದಾರೆ. ಇಡೀ ಮನೆ ಶಾಲೆಯಾಗಿ ಬದಲಾಗಿದೆ. ವಿನಯ್, ಕಾರ್ತಿಕ್, ತುಕಾಲಿ ಸಂತೋಷ್, ನಮ್ರತಾ (Namratha) ಮೊದಲಾದವರು ವಿದ್ಯಾರ್ಥಿಗಳಾದರೆ, ತನಿಷಾ, ಮೈಕಲ್ ಮೊದಲಾದವರು ಟೀಚರ್ ಆಗಿದ್ದಾರೆ. ಈ ಫನ್ ಟಾಸ್ಕ್ನಲ್ಲಿ ವಿನಯ್ ಅವರು ತನಿಷಾ ಬಳಿ ಒಂದು ಮುತ್ತಾ (ಮುತ್ತು) ಕೊಡುವಂತೆ ಕೇಳಿದ್ದಾರೆ!
ವಿನಯ್ ಅವರು ಸ್ಕೂಲ್ ಡ್ರೆಸ್ ಧರಿಸಿ ಕಾಣಿಸಿಕೊಂಡಿದ್ದಾರೆ. ವಿನಯ್ ಅವರು ನಡೆದುಕೊಳ್ಳುತ್ತಿದ್ದ ರೀತಿ ಅನೇಕರಿಗೆ ಇಷ್ಟ ಆಗಿದೆ. ದ್ವೇಷ ಮರೆತು ಅವರು ಬಾಲ್ಯದ ದಿನಕ್ಕೆ ಹೋಗಿದ್ದಾರೆ. ತನಿಷಾ ಅವರು ಪೌಡರ್ ರೂಂನಲ್ಲಿ ರೆಡಿ ಆಗುತ್ತಿದ್ದರು. ಅಲ್ಲಿಗೆ ತೆರಳಿದ ವಿನಯ್ ತನಿಷಾ ಜೊತೆ ಮಾತನಾಡಿದ್ದಾರೆ.
‘ಊಟ ತಂದಿದ್ದೀನಿ ಮಿಸ್. ಕೇಕ್ ತಂದಿದ್ದೀನಿ ಮಿಸ್. ನಾನು ಗುಡ್ ಬಾಯ್. ನಂಗೆ ಒಂದು ಮುತ್ತಾ ಕೊಡಲ್ವ’ ಎಂದು ವಿನಯ್ ಸಣ್ಣ ಮಕ್ಕಳಂತೆ ಮುಗ್ಧ ಮುಖ ಮಾಡಿ ಕೇಳಿದ್ದಾರೆ. ‘ನೀವು ಸ್ಟಾರ್ ಕೇಳ್ತೀರಿ ಅಂದ್ಕೊಂಡಿದ್ದೆ’ ಎಂದರು ತನಿಷಾ. ‘ಆ ಸ್ಟಾರ್ನ ಕಾರ್ತಿಕ್ಗೆ ಕೊಡಿ. ನಂಗೆ ಮುತ್ತಾ ಬೇಕು’ ಎಂದರು ವಿನಯ್. ‘ಯಾರೋ ಅಡ್ವಾಂಟೇಜ್ ತೆಗೆದುಕೊಳ್ಳುವಂತೆ ಕಾಣುತ್ತಿದೆಯಲ್ಲ’ ಎಂದು ನಗುತ್ತಲೇ ಹೇಳಿದರು ತನಿಷಾ. ಆ ಬಳಿಕ ವಿನಯ್ ಅವರು ಪತ್ನಿಯನ್ನು ನೆನಪು ಮಾಡಿಕೊಂಡರು. ‘ನಮ್ಮವ್ವ ಮನೆಯಲ್ಲಿ ನೋಡ್ತಾ ಇರ್ತಾರೆ. ಮನೆಗೆ ಹೋದ ತಕ್ಷಣ ಕೆರ ತೆಗೆದುಕೊಂಡು ಹೊಡೀತಾರೆ’ ಎಂದು ವಿನಯ್ ಅಲ್ಲಿಂದ ತೆರಳಿದರು.
ಇದನ್ನೂ ಓದಿ: ‘ಯಾರೇ ಮಧ್ಯೆ ಬಂದ್ರೂ ನಾನು ಯಾವತ್ತಿದ್ದರೂ ನಿನ್ನ ಫ್ರೆಂಡ್’: ಕೈ ಜೋಡಿಸಿದ ವಿನಯ್-ಕಾರ್ತಿಕ್
ವಿನಯ್ ಹಾಗೂ ತನಿಷಾ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆದಿಲ್ಲ. ಇಬ್ಬರೂ ಅನೇಕ ಬಾರಿ ಕಿತ್ತಾಡಿಕೊಂಡಿದ್ದಾರೆ. ಕಳೆದ ವಾರ ಇವರ ಮಧ್ಯೆ ದೊಡ್ಡ ಜಗಳವೇ ನಡೆದಿತ್ತು. ಆದರೂ, ಈಗ ಕೊಟ್ಟಿರುವ ಫನ್ ಟಾಸ್ಕ್ ಎಲ್ಲಾ ದ್ವೇಷವನ್ನು ಮರೆಸಿದೆ. ಎಲ್ಲರೂ ಒಟ್ಟಾಗಿ ಆಟ ಆಡುತ್ತಿದ್ದಾರೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಬಿಗ್ ಬಾಸ್ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಉಚಿತ ಲೈವ್ ವೀಕ್ಷಿಸಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ