‘ಎಲಿಮಿನೇಟ್ ಆದವರೆಲ್ಲ ನಮ್ಮ ಗುಂಪಿನವರೇ’; ನಮ್ರತಾಗೆ ಕೊನೆಗೂ ಆಯ್ತು ಜ್ಞಾನೋದಯ
Bigg Boss Kannada: ವಿನಯ್ ಟೀಂನಲ್ಲಿದ್ದವರ ಪೈಕಿ ರಕ್ಷಕ್, ಸ್ನೇಹಿತ್, ನೀತು ಮೊದಲಾದವರು ಎಲಿಮಿನೇಟ್ ಆಗಿದ್ದಾರೆ. ಈಗ ಅವರ ಟೀಂನಲ್ಲಿ ಉಳಿದಿರೋದು ವಿನಯ್, ನಮ್ರತಾ ಹಾಗೂ ಮೈಕಲ್ ಮಾತ್ರ. ಈ ಬಗ್ಗೆ ಚರ್ಚೆ ನಡೆದಿದೆ.
‘ಬಿಗ್ ಬಾಸ್’ ಮನೆಯಲ್ಲಿ ಈ ಸೀಸನ್ನಲ್ಲಿ ಗ್ರೂಪಿಸಂ ಜೋರಾಗಿಯೇ ಇದೆ. ಅದು ಎಲ್ಲರಿಗೂ ಎದ್ದು ಕಾಣಿಸಿದೆ. ವಿನಯ್ ಅವರು ಗುಂಪುಗಾರಿಕೆಯನ್ನು ದೊಡ್ಡ ಮಟ್ಟದಲ್ಲಿ ಮಾಡುತ್ತಿದ್ದಾರೆ. ವಿನಯ್ (Vinay) ಅವರು ಇದರ ರುವಾರಿ. ಕೆಲವರಂತೂ ಅವರನ್ನೇ ಗೆಲ್ಲಿಸಬೇಕು ಎಂದೇ ಆಡುತ್ತಿದ್ದಾರೆ. ಇದು ಹೊರ ಜಗತ್ತಿಗೆ ಎದ್ದು ಕಾಣುತ್ತಿದೆ. ಈ ಕಾರಣದಿಂದಲೇ ಅವರ ಟೀಂನವರೇ ಕಡಿಮೆ ವೋಟ್ ಪಡೆದು ಎಲಿಮಿನೇಟ್ ಆಗುತ್ತಿದ್ದಾರೆ. ಈ ವಿಚಾರದಲ್ಲಿ ನಮ್ರತಾಗೆ ಜ್ಞಾನೋದಯ ಆಗಿದೆ. ಈ ಕುರಿತು ಅವರು ಚರ್ಚೆ ಮಾಡಿದ್ದಾರೆ.
ಟಾಸ್ಕ್ ಆಡುವ ಸಂದರ್ಭದಲ್ಲಿ ಒಂದು ಗ್ರೂಪ್ ನಿರ್ಮಾಣ ಆಗಿತ್ತು. ವಿನಯ್ ಅವರು ಇದರ ಲೀಡರ್ ಆಗಿದ್ದರು. ‘ಫಿನಾಲೆವರೆಗೆ ಈ ಟೀಂನಲ್ಲೇ ಆಡೋಣ’ ಎಂದಿದ್ದರು ವಿನಯ್. ಈ ಟೀಂನಲ್ಲಿದ್ದವರ ಪೈಕಿ ರಕ್ಷಕ್, ಸ್ನೇಹಿತ್, ನೀತು ಮೊದಲಾದವರು ಎಲಿಮಿನೇಟ್ ಆಗಿದ್ದಾರೆ. ಈಗ ಅವರ ಟೀಂನಲ್ಲಿ ಉಳಿದಿರೋದು ವಿನಯ್, ನಮ್ರತಾ ಹಾಗೂ ಮೈಕಲ್ ಮಾತ್ರ. ಈ ಬಗ್ಗೆ ಚರ್ಚೆ ನಡೆದಿದೆ.
‘ಈ ವಾರ ಯಾರು ಹೋಗ್ತಾರೆ’ ಎಂದು ನಮ್ರತಾಗೆ ತುಕಾಲಿ ಸಂತೋಷ್ ಪ್ರಶ್ನೆ ಮಾಡಿದರು. ‘ಸಿರಿ ಮ್ಯಾಮ್, ಮೈಕಲ್ ಅಥವಾ ಪವಿ ಔಟ್ ಆಗಬಹುದು’ ಎಂದರು ನಮ್ರತಾ. ‘ಮತ್ತೆ ನಿಮ್ಮ ಟೀಂಗೆ ಬಂತಲ್ಲ. ಹಾಗಿದ್ರೆ ಮತ್ತೊಂದು ಎಲಿಮಿನೇಷನ್ ನಿಮ್ಮ ಟೀಂನಿಂದಲೇ’ ಎಂದರು ಸಂತು. ಪವಿ, ಮೈಕಲ್ ಹಾಗೂ ಸಿರಿ ವಿನಯ್ ಟೀಂನಲ್ಲೇ ಹೆಚ್ಚು ಗುರುತಿಸಿಕೊಂಡಿದ್ದಾರೆ. ಹೀಗಾಗಿ, ಸಂತೋಷ್ ಈ ಮಾತನ್ನು ಹೇಳಿದ್ದಾರೆ.
‘ಹೌದು ನಮ್ಮ ಟೀಂನಿಂದ ಎಲ್ಲ ಹೋಗಿ ಬಿಡ್ತಾರೇನೋ ಅನಿಸುತ್ತಿದೆ. ಹೋದವರೆಲ್ಲ ನಮ್ಮ ಟೀಂನವರೇ’ ಎಂದು ನಮ್ರತಾ ಬೇಸರ ಮಾಡಿಕೊಂಡರು. ‘ನಿಮ್ಮ ಗುಂಪಿಗೆ ಯಾರೋ ಮಾಟ ಮಾಡಿಸಿದಾರೆ’ ಎಂದರು ಸಂತೋಷ್. ಈ ವಾರ ಪ್ರಮುಖರೇ ನಾಮಿನೇಟ್ ಆಗಿದ್ದಾರೆ. ಹೀಗಾಗಿ, ಯಾರು ಎಲಿಮಿನೇಟ್ ಆಗುತ್ತಾರೆ ಅನ್ನೋ ಪ್ರಶ್ನೆ ಮೂಡಿದೆ.
ಇದನ್ನೂ ಓದಿ: ‘ಐ ಡೋಂಟ್ ಗಿವ್ ಎ ಡ್ಯಾಮ್’: ಬಿಗ್ಬಾಸ್ ಮನೆಯಲ್ಲೀಗ ಇಬ್ಬರು ವಿನಯ್?
ಮೈಕಲ್ ಈ ವಾರ ತುಂಬಾನೇ ಅಗ್ರೆಸ್ಸಿವ್ ಆಗಿ ನಡೆದುಕೊಳ್ಳುತ್ತಿದ್ದಾರೆ. ವಿನಯ್ ಜೊತೆ ಸೇರಿ ಅವರು ಕೂಡ ಆಟವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ತಮ್ಮ ಆಟವನ್ನು ಅವರು ಪ್ರದರ್ಶನ ಮಾಡುತ್ತಿಲ್ಲ. ಈ ವಾರ ಅವರೇ ಎಲಿಮಿನೇಟ್ ಆದರೂ ಅಚ್ಚರಿ ಏನಿಲ್ಲ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಕಾಣುತ್ತದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ 24 ಗಂಟೆ ಲೈವ್ ನೋಡಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ