‘ಈ ರೀತಿ ಬದುಕಿರೋಕಾಗಲ್ಲ, ಮನೆಗೆ ಕಳುಹಿಸಿ’; ಬಿಗ್ ಬಾಸ್ ಎದುರು ವಿನಯ್ ಹೊಸ ಬೇಡಿಕೆ
ಈ ಬಾರಿ ಅನೇಕ ಸ್ಪರ್ಧಿಗಳು ಮನೆಯಿಂದ ಹೊರ ಹೋಗುವ ಮಾತನ್ನು ಆಡುತ್ತಿದ್ದಾರೆ. ಆರಂಭದಲ್ಲಿ ಸಂಗೀತಾ ಶೃಂಗೇರಿ ಅವರು ಈ ಮನೆ ಸೆಟ್ ಆಗುತ್ತಿಲ್ಲ ಎಂದಿದ್ದರು. ವರ್ತೂರು ಸಂತೋಷ್ ವಿಚಾರದಲ್ಲಂತೂ ದೊಡ್ಡ ಡ್ರಾಮಾ ನಡೆಯಿತು. ವಿನಯ್ ಮತ್ತೆ ಮನೆಯಿಂದ ಹೊರಹೋಗುವುದಾಗಿ ಹೇಳಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 10’ ಈಗಾಗಲೇ 69 ದಿನಗಳನ್ನು ಪೂರೈಸಿದೆ. ಇನ್ನು ಉಳಿದಿರೋದು ಒಂದು ತಿಂಗಳು ಮಾತ್ರ. ಸದ್ಯ ಬಿಗ್ ಬಾಸ್ (Bigg Boss) ಮನೆಯಲ್ಲಿ 12 ಮಂದಿ ಇದ್ದಾರೆ. ಈ ಪೈಕಿ ಒಬ್ಬರು ಈ ವಾರ ಎಲಿಮಿನೇಟ್ ಆಗಲಿದ್ದಾರೆ. ಈ ಮಧ್ಯೆ ವಿನಯ್ ಅವರು ದೊಡ್ಮನೆಯಿಂದ ಹೊರ ಹೋಗುವುದಾಗಿ ಹೇಳಿದ್ದಾರೆ. ಅವರು ಈ ರೀತಿ ಹೇಳುತ್ತಿರುವುದು ಇದು ಎರಡನೇ ಬಾರಿ.
ಈ ಬಾರಿ ಅನೇಕ ಸ್ಪರ್ಧಿಗಳು ಮನೆಯಿಂದ ಹೊರ ಹೋಗುವ ಮಾತನ್ನು ಆಡುತ್ತಿದ್ದಾರೆ. ಆರಂಭದಲ್ಲಿ ಸಂಗೀತಾ ಶೃಂಗೇರಿ ಅವರು ಈ ಮನೆ ಸೆಟ್ ಆಗುತ್ತಿಲ್ಲ ಎಂದಿದ್ದರು. ಹೊರ ಹೋಗುವ ನಿರ್ಧಾರವನ್ನೂ ಮಾಡಿದ್ದರು. ವರ್ತೂರು ಸಂತೋಷ್ ವಿಚಾರದಲ್ಲಂತೂ ದೊಡ್ಡ ಡ್ರಾಮಾ ನಡೆಯಿತು. ಆ ಬಳಿಕ ನಮ್ರತಾ ಕೂಡ ಮನೆಯಿಂದ ಹೊರ ಹೋಗುತ್ತೇನೆ ಎಂದರು. ವಿನಯ್ ಕೂಡ ಈ ಮಾತನ್ನು ಹೇಳಿದ್ದರು. ಈಗ ಅವರು ಮತ್ತೆ ಮನೆಯಿಂದ ಹೊರಹೋಗುವುದಾಗಿ ಹೇಳಿದ್ದಾರೆ.
ಕಳಪೆ ಪಡೆದು ಜೈಲು ಸೇರಿದ ಸ್ಪರ್ಧಿಗಳಿಗಾಗಿ ರಾಗಿ ಹಿಟ್ಟನ್ನು ಬಿಗ್ ಬಾಸ್ ನೀಡುತ್ತಾರೆ. ಈ ರಾಗಿ ಹಿಟ್ಟು ಜಾಸ್ತಿ ಉಳಿದಿತ್ತು. ಇದನ್ನು ಡ್ರೋನ್ ಪ್ರತಾಪ್ ಮುದ್ದೆ ಮಾಡಿದರು. ಇದು ಸರಿ ಅಲ್ಲ ಎಂದು ಮನೆ ಮಂದಿ ಎಚ್ಚರಿಕೆ ನೀಡಿದರು. ಆದಾಗ್ಯೂ ತಾವೇ ಜವಾಬ್ದಾರಿ ತೆಗೆದುಕೊಳ್ಳುವುದಾಗಿ ಹೇಳಿ ಅವರು ಮುದ್ದೆ ಮಾಡಿದರು. ಮುದ್ದೆ ಮಾಡುವಾಗ ವಿನಯ್ ಸಾಕಷ್ಟು ಬಾರಿ ಎಚ್ಚರಿಕೆ ನೀಡಿದ್ದರು. ಆ ಬಳಿಕ ರಾತ್ರಿ ಅಡುಗೆ ಮಾಡೋಕೆ ಗ್ಯಾಸ್ ಬರಲೇ ಇಲ್ಲ. ಇದು ವಿನಯ್ ಕೋಪಕ್ಕೆ ಕಾರಣ ಆಗಿದೆ.
ಇದನ್ನೂ ಓದಿ: ಬಿಗ್ ಬಾಸ್ ಸ್ಪರ್ಧಿ ಕಾರ್ತಿಕ್ಗೆ ಕಿಚ್ಚನ ಕಿವಿಮಾತು ಏನು?
‘ಇನ್ನುಮುಂದೆ ಬಿಗ್ ಬಾಸ್ ಮನೆಯಲ್ಲಿ ಏನು ಮಾಡಬಾರದು ಎಂದಿರುತ್ತದೆಯೋ ಅದನ್ನೆಲ್ಲ ನಾನು ಮಾಡ್ತೀನಿ. ಆಗ ಇಡೀ ಮನೆಗೆ ಶಿಕ್ಷೆ ಸಿಗುತ್ತದೆ’ ಎಂದರು ವಿನಯ್. ಆ ಬಳಿಕ ಕ್ಯಾಮೆರಾ ಎದುರು ಬಂದು ಮನೆಯಿಂದ ಹೊರ ಹೋಗುವುದಾಗಿ ಹೇಳಿದ್ದಾರೆ. ‘ಈ ವಾರ ನಾನು ನಾಮಿನೇಟ್ ಆಗಿದ್ದೇನೆ. ಇಲ್ಲಿ ಈ ರೀತಿ ಬದುಕೋಕೆ ಆಗಲ್ಲ. ನನ್ನನ್ನು ಈ ವಾರ ಮನೆಗೆ ಕಳುಹಿಸಿ’ ಎಂದು ಅವರು ಮನವಿ ಮಾಡಿದ್ದಾರೆ. ಆ ಬಳಿಕ ಕಿಚ್ಚ ಸುದೀಪ್ ಅವರು ಅಡುಗೆ ಮಾಡಿ ಮನೆ ಮಂದಿಗೆ ಕಳುಹಿಸಿದ್ದಾರೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ‘ಬಿಗ್ ಬಾಸ್’ ಶೋ ಪ್ರಸಾರ ಕಾಣುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ