‘ಸಲಾರ್’ ಬುಕಿಂಗ್ಗೆ ಭರ್ಜರಿ ರೆಸ್ಪಾನ್ಸ್; ಮುಂಜಾನೆ 5 ಗಂಟೆ ಶೋಗಳು ಸೋಲ್ಡ್ಔಟ್
ಬೆಂಗಳೂರಿನಲ್ಲಿ ತೆಲುಗು ಹಾಗೂ ಕನ್ನಡ ಭಾಷೆಯಲ್ಲಿ ಅಡ್ವಾನ್ಸ್ ಬುಕಿಂಗ್ ಆರಂಭಿಸಲಾಗಿದೆ. ಕನ್ನಡಕ್ಕೆ ಕೇವಲ ಒಂದು ಶೋ ನೀಡಲಾಗಿದೆ. ಸದ್ಯ ತೆಲುಗು ವರ್ಷನ್ಗೆ 100 ಶೋ ಸಿಕ್ಕಿದೆ.
‘ಸಲಾರ್’ ಸಿನಿಮಾ (Salaar Movie) ರಿಲೀಸ್ಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಸಿನಿಮಾಗೆ ಭರ್ಜರಿ ಹೈಪ್ ಸೃಷ್ಟಿ ಆಗಿದೆ. ಸಿನಿಮಾದ ಟ್ರೇಲರ್ ಹಾಗೂ ಪೋಸ್ಟರ್ಗಳು ಗಮನ ಸೆಳೆದಿವೆ. ‘ಸಲಾರ್’ ಮೊದಲ ದಿನ ಎಷ್ಟು ಕೋಟಿ ರೂಪಾಯಿ ಗಳಿಕೆ ಮಾಡಬಹುದು ಎಂಬ ಕುತೂಹಲ ಅಭಿಮಾನಿಗಳಿಗೆ ಮೂಡಿದೆ. ಈ ಚಿತ್ರದ ಅಡ್ವಾನ್ಸ್ ಬುಕಿಂಗ್ ಶುಕ್ರವಾರ (ಡಿಸೆಂಬರ್ 15) ಸಂಜೆ ಓಪನ್ ಆಗಿದೆ. ಹಲವು ಶೋಗಳ ಟಿಕೆಟ್ಗಳು ಈಗಾಲೇ ಬಿಕರಿ ಆಗಿವೆ. ಮುಂಜಾನೆ ಶೋಗಳು ಹೌಸ್ಫುಲ್ ಕಂಡಿವೆ. ಇಷ್ಟು ದೊಡ್ಡ ರೆಸ್ಪಾನ್ಸ್ ಸಿಗುತ್ತಿರುವುದು ನೋಡಿದರೆ ಸಿನಿಮಾ ಅನಾಯಾಸವಾಗಿ ಹಲವು ದಾಖಲೆಗಳನ್ನು ಬರೆಯಲಿದೆ ಎಂದು ಫ್ಯಾನ್ಸ್ ಊಹಿಸುತ್ತಿದ್ದಾರೆ.
‘ಸಲಾರ್’ ಸಿನಿಮಾ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಲು ಹಲವು ಕಾರಣಗಳು ಇವೆ. ಪ್ರಭಾಸ್ ಅವರು ಇತ್ತೀಚೆಗೆ ಸಾಲು ಸಾಲು ಸೋಲು ಕಂಡಿದ್ದಾರೆ. ಅವರಿಗೆ ದೊಡ್ಡ ಗೆಲುವು ಬೇಕಿದೆ. ‘ಸಲಾರ್’ ಸಿನಿಮಾ ಮೂಲಕ ಅವರು ಭರ್ಜರಿ ಗೆಲುವು ಕಾಣುವ ನಿರೀಕ್ಷೆಯಲ್ಲಿದ್ದಾರೆ. ‘ಕೆಜಿಎಫ್ 2’ ಸೂಪರ್ ಹಿಟ್ ಆದ ಬಳಿಕ ಪ್ರಶಾಂತ್ ನೀಲ್ ಅವರು ನಿರ್ದೇಶನ ಮಾಡಿದ ಸಿನಿಮಾ ‘ಸಲಾರ್’ ಎನ್ನುವ ಕಾರಣಕ್ಕೂ ಸಾಕಷ್ಟು ಕುತೂಹಲ ಮೂಡಿದೆ. ಈ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್ ಹಾಗೂ ವೈಲೆನ್ಸ್ ಇದೆ ಎಂದು ತಂಡ ಈಗಾಗಲೇ ಮಾಹಿತಿ ನೀಡಿದೆ. ಈ ಕಾರಣಕ್ಕೆ ಸೆನ್ಸಾರ್ ಮಂಡಳಿಯಿಂದ ‘ಸಲಾರ್’ ಚಿತ್ರಕ್ಕೆ ‘ಎ’ ಸರ್ಟಿಫಿಕೇಟ್ ಸಿಕ್ಕಿದೆ. ಹೀಗಾಗಿ, ಆ್ಯಕ್ಷನ್ ಪ್ರಿಯರು ಮುಗಿಬಿದ್ದು ‘ಸಲಾರ್’ ಟಿಕೆಟ್ ಬುಕ್ ಮಾಡುತ್ತಿದ್ದಾರೆ.
ಬೆಂಗಳೂರಿನಲ್ಲಿ ತೆಲುಗು ಹಾಗೂ ಕನ್ನಡ ಭಾಷೆಯಲ್ಲಿ ಅಡ್ವಾನ್ಸ್ ಬುಕಿಂಗ್ ಆರಂಭಿಸಲಾಗಿದೆ. ಕನ್ನಡಕ್ಕೆ ಕೇವಲ ಒಂದು ಶೋ ನೀಡಲಾಗಿದೆ. ಸದ್ಯ (ಡಿಸೆಂಬರ್ 16, ಮಧ್ಯಾಹ್ನ 12 ಗಂಟೆ) ತೆಲುಗು ವರ್ಷನ್ಗೆ 100 ಶೋ ಸಿಕ್ಕಿದೆ. ಮುಂಜಾನೆ 5 ಗಂಟೆ ಶೋಗಳು ಅನೇಕ ಕಡೆಗಳಲ್ಲಿ ಹೌಸ್ಫುಲ್ ಆಗಿವೆ. ಹಂತ ಹಂತವಾಗಿ ಇನ್ನೂ ಹಲವು ಶೋಗಳು ಸೇರ್ಪಡೆ ಆಗಲಿವೆ.
ಅಭಿಮಾನಿಗಳು ‘ಸಲಾರ್’ ರಿಲೀಸ್ಗಾಗಿ ಕಾದು ಕುಳಿತಿದ್ದಾರೆ. ಬೆಂಗಳೂರಿನ ಹಲವು ಕಡೆಗಳಲ್ಲಿ ಪ್ರಭಾಸ್ ಕಟೌಟ್ ತಲೆ ಎತ್ತಲಿದೆ. ಸಿಂಗಲ್ ಸ್ಕ್ರೀನ್ ಮಾತ್ರವಲ್ಲದೆ ಪಿವಿಆರ್ಗಳಲ್ಲೂ ಮುಂಜಾನೇ ಶೋಗಳನ್ನು ಆಯೋಜನೆ ಮಾಡಲು ನಿರ್ಧರಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಅಪ್ಡೇಟ್ ಸಿಗಲಿದೆ.
#Salaar Mania is spreading like wildfire, with over a massive 1 Million Interests on @bookmyshow 💥#SalaarCeaseFire #Prabhas #PrashanthNeel @PrithviOfficial @shrutihaasan @VKiragandur @hombalefilms #HombaleMusic @IamJagguBhai @sriyareddy @RaviBasrur @bhuvangowda84… pic.twitter.com/wodYPaAU0h
— Hombale Films (@hombalefilms) December 15, 2023
ಇದನ್ನೂ ಓದಿ:‘ಗೇಮ್ ಆಫ್ ಥ್ರೋನ್ಸ್‘ ರೀತಿಯಲ್ಲೇ ಇರಲಿದೆ ‘ಸಲಾರ್’ ಸಿನಿಮಾ; ಪೃಥ್ವಿರಾಜ್ ಹೇಳಿದ್ರು ಸೀಕ್ರೆಟ್
‘ಸಲಾರ್’ ಸಿನಿಮಾಗೆ ಪ್ರಶಾಂತ್ ನೀಲ್ ನಿರ್ದೇಶನ ಇದೆ. ಪ್ರಭಾಸ್, ಪೃಥ್ವಿರಾಜ್ ಸುಕುಮಾರ್, ಶ್ರುತಿ ಹಾಸನ್, ಜಗಪತಿ ಬಾಬು ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಟ್ರೇಲರ್ ಕೋಟ್ಯಂತರ ಬಾರಿ ವೀಕ್ಣೆ ಕಂಡಿದೆ. ಹೊಂಬಾಳೆ ಫಿಲ್ಮ್ಸ್ ಮೂಲಕ ವಿಜಯ್ ಕಿರಗಂದೂರು ಅವರು ‘ಸಲಾರ್’ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಬಹುತೇಕ ಕನ್ನಡದ ತಂತ್ರಜ್ಞರೇ ಕೆಲಸ ಮಾಡಿದ್ದಾರೆ. ತೆಲುಗು, ಕನ್ನಡ, ಹಿಂದಿ, ಮಲಯಾಳಂ ಹಾಗೂ ತಮಿಳು ಭಾಷೆಯಲ್ಲಿ ಈ ಸಿನಿಮಾ ನಿರ್ಮಾಣ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:16 pm, Sat, 16 December 23