‘ಗೇಮ್ ಆಫ್​ ಥ್ರೋನ್ಸ್‘ ರೀತಿಯಲ್ಲೇ ಇರಲಿದೆ ‘ಸಲಾರ್’ ಸಿನಿಮಾ; ಪೃಥ್ವಿರಾಜ್​ ಹೇಳಿದ್ರು ಸೀಕ್ರೆಟ್​

‘ಗೇಮ್ ಆಫ್ ಥ್ರೋನ್ಸ್’ ಇಂಗ್ಲಿಷ್ ಸೀರಿಸ್ ಸಾಕಷ್ಟು ಗಮನ ಸೆಳೆದಿದೆ. ಈ ಸೀರಿಸ್​ ಹಲವು ಸೀಸನ್​ಗಳಲ್ಲಿ ಪ್ರಸಾರ ಕಂಡಿದೆ. ಸಿಂಹಾಸನಕ್ಕಾಗಿ ನಡೆಯುವ ಯುದ್ಧವನ್ನು ಈ ಸಿರೀಸ್​ ಒಳಗೊಂಡಿತ್ತು. ‘ಸಲಾರ್’ ಸಿನಿಮಾ ಕೂಡ ಅದೇ ರೀತಿಯಲ್ಲಿ ಇದೆಯಂತೆ.

‘ಗೇಮ್ ಆಫ್​ ಥ್ರೋನ್ಸ್‘ ರೀತಿಯಲ್ಲೇ ಇರಲಿದೆ ‘ಸಲಾರ್’ ಸಿನಿಮಾ; ಪೃಥ್ವಿರಾಜ್​ ಹೇಳಿದ್ರು ಸೀಕ್ರೆಟ್​
ಸಲಾರ್ ಸಿನಿಮಾದಲ್ಲಿ ಪ್ರಭಾಸ್
Follow us
ರಾಜೇಶ್ ದುಗ್ಗುಮನೆ
|

Updated on: Dec 16, 2023 | 10:41 AM

‘ಸಲಾರ್’ ಸಿನಿಮಾ (Salaar Movie) ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರ ರಿಲೀಸ್​ ಆಗೋಕೆ ಇರೋದು ಇನ್ನು ಕೆಲವೇ ದಿನಗಳು ಮಾತ್ರ. ಈ ಚಿತ್ರಕ್ಕೆ ಭರ್ಜರಿ ಪ್ರಚಾರ ನೀಡಲಾಗುತ್ತಿದೆ. ಸಿನಿಮಾ ಕಲಾವಿದರು, ನಿರ್ದೇಶಕರು ಈ ಸಿನಿಮಾ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ. ಈಗ ನಟ ಪೃಥ್ವಿರಾಜ್​ ಸುಕುಮಾರನ್ ಅವರು ಸಿನಿಮಾ ಬಗ್ಗೆ ದೊಡ್ಡ ಗುಟ್ಟು ಬಿಟ್ಟುಕೊಟ್ಟಿದ್ದಾರೆ. ಈ ವಿಚಾರ ಕೇಳಿ ಫ್ಯಾನ್ಸ್ ಸಖತ್ ಖುಷಿಪಟ್ಟಿದ್ದಾರೆ.

‘ಗೇಮ್ ಆಫ್ ಥ್ರೋನ್ಸ್’ ಇಂಗ್ಲಿಷ್ ಸೀರಿಸ್ ಸಾಕಷ್ಟು ಗಮನ ಸೆಳೆದಿದೆ. ಈ ಸೀರಿಸ್​ ಹಲವು ಸೀಸನ್​ಗಳಲ್ಲಿ ಪ್ರಸಾರ ಕಂಡಿದೆ. ಸಿಂಹಾಸನಕ್ಕಾಗಿ ನಡೆಯುವ ಯುದ್ಧವನ್ನು ಈ ಸಿರೀಸ್​ ಒಳಗೊಂಡಿತ್ತು. ‘ಸಲಾರ್’ ಸಿನಿಮಾ ಕೂಡ ಅದೇ ರೀತಿಯಲ್ಲಿ ಇದೆಯಂತೆ. ಈ ಬಗ್ಗೆ ಪೃಥ್ವಿರಾಜ್ ಮಾಹಿತಿ ನೀಡಿದ್ದಾರೆ.

‘ಸಲಾರ್ ಸಿನಿಮಾ ಇಂಗ್ಲಿಷ್​ನ ಗೇಮ್ ಆಫ್ ಥ್ರೋನ್ಸ್‌ನಂತಿದೆ. ಸಿನಿಮಾದಲ್ಲಿ ಸಖತ್ ಡ್ರಾಮಾ ಇದೆ. ನನ್ನ ಪಾತ್ರ ಅದ್ಭುತವಾಗಿದೆ ಅನ್ನೋದು ನನ್ನ ಭಾವನೆ. ಪ್ರಶಾಂತ್ ನೀಲ್ ಸಿನಿಮಾ ಎಂದರೆ ಯಾರು ತಾನೇ ಕೆಲಸ ಮಾಡೋಕೆ ಇಷ್ಟಪಡಲ್ಲ ಹೇಳಿ’ ಎಂದಿದ್ದಾರೆ ಪೃಥ್ವಿರಾಜ್​ ಸುಕುಮಾರನ್​.

ಇದನ್ನೂ ಓದಿ: ‘ಸಲಾರ್’ ಸಿನಿಮಾದ ಕತೆ ಏನು? ಕ್ಲೈಮ್ಯಾಕ್ಸ್​ನಲ್ಲಿ ಇರಲಿದೆ ಸಖತ್ ಟ್ವಿಸ್ಟ್

‘ಸಲಾರ್’ ಸಿನಿಮಾ ಡಿಸೆಂಬರ್ 22ರಂದು ತೆಲುಗು, ಕನ್ನಡ, ಹಿಂದಿ, ಮಲಯಾಳಂ ಹಾಗೂ ತಮಿಳು ಭಾಷೆಯಲ್ಲಿ ರಿಲೀಸ್ ಆಗಲಿದೆ. ಪ್ರಭಾಸ್, ಶ್ರುತಿ ಹಾಸನ್, ಪೃಥ್ವಿರಾಜ್ ಸುಕುಮಾರನ್ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಪ್ರಶಾಂತ್ ನೀಲ್ ಅವರ ನಿರ್ದೇಶನ ಇದೆ. ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡಿದೆ. ‘ಕೆಜಿಎಫ್ 2’ ಸೂಪರ್ ಹಿಟ್ ಆದ ಬಳಿಕ ವಿಜಯ್ ಕಿರಗಂದೂರು ಹಾಗೂ ಪ್ರಶಾಂತ್ ನೀಲ್ ಒಟ್ಟಾಗಿ ಕೆಲಸ ಮಾಡಿದ ಸಿನಿಮಾ ಇದು ಎನ್ನುವ ಕಾರಣಕ್ಕೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈಗಾಗಲೇ ಸಿನಿಮಾ ಚರ್ಚೆ ಹುಟ್ಟುಹಾಕಿದೆ. ಅಡ್ವಾನ್ಸ್ ಬುಕಿಂಗ್ ಕೂಡ ಓಪನ್ ಆಗಿದ್ದು ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ