AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮೂರೇ ದಿನದಲ್ಲಿ ಹಳೆಯ ಪಿಕ್ಚರ್ ಬರುತ್ತೆ’; ಕಾರ್ತಿಕ್-ಸಂಗೀತಾ ಜಗಳದ ಬಗ್ಗೆ ವರ್ತೂರು ಸಂತೋಷ್ ಮಾತು

ಸಂಗೀತಾ ಬಗ್ಗೆ ಕಾರ್ತಿಕ್ ಅಸಮಾಧಾನಗೊಂಡಿದ್ದಾರೆ. ಇಬ್ಬರ ಮಧ್ಯೆ ಮುನಿಸು ಉಂಟಾಗಿದೆ. ಈ ಬಗ್ಗೆ ವರ್ತೂರು ಸಂತೋಷ್ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.

‘ಮೂರೇ ದಿನದಲ್ಲಿ ಹಳೆಯ ಪಿಕ್ಚರ್ ಬರುತ್ತೆ’; ಕಾರ್ತಿಕ್-ಸಂಗೀತಾ ಜಗಳದ ಬಗ್ಗೆ ವರ್ತೂರು ಸಂತೋಷ್ ಮಾತು
ಸಂಗೀತಾ-ಕಾರ್ತಿಕ್
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Dec 19, 2023 | 7:47 AM

Share

ಬಿಗ್ ಬಾಸ್ ಮನೆಯಲ್ಲಿ ಕಾರ್ತಿಕ್ ಮಹೇಶ್ (Karthik Mahesh) ಹಾಗೂ ಸಂಗೀತಾ ಶೃಂಗೇರಿ ಕ್ಲೋಸ್ ಆಗಿದ್ದರು. ಇಬ್ಬರ ಮಧ್ಯೆ ಆಪ್ತತೆ ಬೆಳೆದಿತ್ತು. ಆದರೆ, ಇಬ್ಬರ ಮಧ್ಯೆ ಉಂಟಾದ ಜಗಳದಿಂದ ದೂರ ಆದರು. ಸಂಗೀತಾ ವಿನಯ್​ನ ಟೀಂ ಸೇರಿದರು. ಆ ಬಳಿಕ ಅವರು ಮರಳಿ ಕಾರ್ತಿಕ್​ ಜೊತೆಯೇ ಬಂದರು. ಈಗ ಇಬ್ಬರೂ ಬೇರೆ ಆಗಿದ್ದಾರೆ. ಸಂಗೀತಾ ಅವರಲ್ಲಿ ಮೂಡಿದ ಒಂದು ಅನುಮಾನದಿಂದ ದೊಡ್ಡ ಸಮಸ್ಯೆ ಆಗಿದೆ. ಇಬ್ಬರೂ ಒಂದೊಂದು ದಿಕ್ಕಿಗೆ ಹೋಗಿದ್ದಾರೆ. ಈ ಜಗಳ ಕೆಲವೇ ದಿನದಲ್ಲಿ ಪರಿಹಾರ ಆಗಲಿದೆ ಎಂಬುದು ವರ್ತೂರು ಸಂತೋಷ್ ಅಭಿಪ್ರಾಯ.

ವಿನಯ್ ಹಾಗೂ ಕಾರ್ತಿಕ್ ಸಂತೋಷ್ ಮಧ್ಯೆ ಮೊದಲಿನಿಂದಲೂ ಒಳ್ಳೆಯ ಫ್ರೆಂಡ್​ಶಿಪ್ ಇದೆ. ಆದರೆ, ಬಿಗ್ ಬಾಸ್​ಗೆ ಬಂದ ಬಳಿಕ ಇದು ಹಾಳಾಗಿತ್ತು. ಇತ್ತೀಚೆಗೆ ಅವರು ವಿನಯ್​ ಜೊತೆ ಮತ್ತೆ ಕ್ಲೋಸ್ ಆಗೋಕೆ ಪ್ರಯತ್ನಿಸಿದ್ದರು. ಇದನ್ನು ಸಂಗೀತಾ ಅವರು ಬಕೇಟ್ ಹಿಡಿಯೋದು ಎಂದು ಕರೆದಿದ್ದರು. ‘ಯೆಸ್ ಆರ್ ನೋ’ ರೌಂಡ್​ನಲ್ಲಿ ಕೇಳಿದ ಪ್ರಶ್ನೆಯಿಂದ ಈ ವಿಚಾರ ಮನೆ ಮಂದಿಗೆಲ್ಲ ಗೊತ್ತಾಗಿದೆ. ಇದರಿಂದ ಕಾರ್ತಿಕ್ ಅಸಮಾಧಾನಗೊಂಡಿದ್ದಾರೆ. ಇಬ್ಬರ ಮಧ್ಯೆ ಮುನಿಸು ಉಂಟಾಗಿದೆ. ಈ ಬಗ್ಗೆ ವರ್ತೂರು ಸಂತೋಷ್ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.

‘ಸಂಗೀತಾ ಹಾಗೂ ಕಾರ್ತಿಕ್ ಈಗ ದೂರ ಆಗಿದ್ದಾರೆ. ಅವಳ ಬಲ ಈಗ ಕಡಿಮೆ ಆಗಿದೆ. ಅವಳು ಮತ್ತೆ ಅವನ ಜೊತೆ ಸೇರೋದು ಹೇಗೆ ಎಂದು ಪ್ಲಾನ್ ಹಾಕುತ್ತಾ ಇರುತ್ತಾಳೆ. ಇನ್ನು ಮೂರು ದಿನ. ಮತ್ತೆ ಹಳೇ ಪಿಕ್ಚರ್​ ಬರುತ್ತದೆ’ ಎಂದರು ವರ್ತೂರು ಸಂತೋಷ್. ಅನೇಕರು ಈ ಮಾತನ್ನು ಒಪ್ಪಿದ್ದಾರೆ. ಸಂಗೀತಾ ಹಾಗೂ ಕಾರ್ತಿಕ್ ಮಧ್ಯೆ ಒಳ್ಳೆಯ ಗೆಳೆತನ ಬೆಳೆದಿದೆ. ಈ ಗೆಳೆತನದ ಬಂಧವನ್ನು ಬಿಡಿಸಿಕೊಂಡು ಹೊರ ಬರಲು ಇವರ ಬಳಿ ಸಾಧ್ಯವಾಗುತ್ತಿಲ್ಲ.

ಇದನ್ನೂ ಓದಿ: ಗೆಲುವಿನ ಹತ್ತಿರದಲ್ಲಿ ಡ್ರೋನ್​ ಪ್ರತಾಪ್​; ಬಿಗ್ ಬಾಸ್​ ಮನೆಯಲ್ಲಿ ಭರವಸೆಯ ಸ್ಪರ್ಧಿ

‘ಬಿಗ್ ಬಾಸ್’ನಲ್ಲಿ ಸಂಗೀತಾ ಹಲವು ಚಾಲೆಂಜ್​​ಗಳನ್ನು ಎದುರಿಸಿದ್ದಾರೆ. ಎಲ್ಲಾ ಚಾಲೆಂಜ್​ಗಳನ್ನು ಯಶಸ್ವಿಯಾಗಿ ಎದುರಿಸಿ ಮೇಲಕ್ಕೆ ಬಂದಿದ್ದಾರೆ. ಅವರ ಅಭಿಮಾನಿ ಬಳಗ ಹಿರಿದಾಗುತ್ತಿದೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ‘ಬಿಗ್ ಬಾಸ್’ ಪ್ರಸಾರ ಕಾಣುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ