ಬಿಗ್​ ಬಾಸ್​ ಮನೆಯಲ್ಲಿ ಡಿವೋರ್ಸ್​ ನಿರ್ಧಾರ; ದಂಪತಿ ಜಗಳಕ್ಕೆ ಪ್ರೇಕ್ಷಕರು ಶಾಕ್​

ಬಿಗ್​ ಬಾಸ್​ಗೆ ಬಂದ ಬಳಿಕ ಪರಿಚಯವಾಗಿ, ನಂತರ ಮದುವೆಯಾದವರು ಇದ್ದಾರೆ. ಅದೇ ರೀತಿ ದೊಡ್ಮನೆಗೆ ಜೋಡಿಯಾಗಿ ಬಂದು, ನಂತರ ಸಂಬಂಧ ಕೆಡಿಸಿಕೊಂಡ ಮಂದಿಯೂ ಇದ್ದಾರೆ. ವಿಕ್ಕಿ ಜೈನ್​ ಮತ್ತು ಅಂಕಿತಾ ಲೋಖಂಡೆ ನಡುವಿನ ಕಿರಿಕ್​ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಬ್ಬರ ಅಸಲಿ ಮುಖ ಬಯಲಾಗುತ್ತಿದೆ.

ಬಿಗ್​ ಬಾಸ್​ ಮನೆಯಲ್ಲಿ ಡಿವೋರ್ಸ್​ ನಿರ್ಧಾರ; ದಂಪತಿ ಜಗಳಕ್ಕೆ ಪ್ರೇಕ್ಷಕರು ಶಾಕ್​
ಅಂಕಿತಾ ಲೋಖಂಡೆ, ವಿಕ್ಕಿ ಜೈನ್​
Follow us
ಮದನ್​ ಕುಮಾರ್​
|

Updated on: Dec 21, 2023 | 6:30 PM

ಬಾಲಿವುಡ್​ ನಟಿ ಅಂಕಿತಾ ಲೋಖಂಡೆ (Ankita Lokhande) ಅವರು ‘ಬಿಗ್​ ಬಾಸ್​ ಹಿಂದಿ ಸೀಸನ್​ 17’ (Bigg Boss 17) ಶೋನಲ್ಲಿ ಸ್ಪರ್ಧಿಸುತ್ತಿದ್ದಾರೆ. ಅವರ ಜೊತೆ ಪತಿ ವಿಕ್ಕಿ ಜೈನ್​ ಕೂಡ ಬಿಗ್​ ಬಾಸ್​ ಮನೆಯಲ್ಲಿ ಸ್ಪರ್ಧಿ ಆಗಿದ್ದಾರೆ. ಹೊರ ಜಗತ್ತಿನಲ್ಲಿ ಬಹಳ ಪ್ರೀತಿಯಿಂದ ಸಂಸಾರ ಮಾಡುತ್ತಿದ್ದ ಇವರಿಬ್ಬರು ಈ ರಿಯಾಲಿಟಿ ಶೋಗೆ ಬಂದ ಬಳಿಕ ಕಿತ್ತಾಡಲು ಆರಂಭಿಸಿದ್ದಾರೆ. ಅವರಿಬ್ಬರ ಜಗಳದಲ್ಲಿ ವಿಚ್ಛೇದನದ ವಿಚಾರ ಪ್ರಸ್ತಾಪ ಆಗಿದೆ. ಅಷ್ಟರಮಟ್ಟಿಗೆ ಮನಸ್ತಾಪ ಬೆಳೆದಿದೆ. ಬಿಗ್​ ಬಾಸ್​ ಮುಗಿದ ನಂತರ ಅಂಕಿತಾ ಲೋಖಂಡೆ ಮತ್ತು ವಿಕ್ಕಿ ಜೈನ್​ (Vicky Jain) ಅವರು ಡಿವೋರ್ಸ್​ ಪಡೆಯುವುದು ಖಚಿತ ಎಂದು ವೀಕ್ಷಕರು ಮಾತನಾಡಿಕೊಳ್ಳುತ್ತಿದ್ದಾರೆ.

ಹಿಂದಿ ಕಿರುತೆರೆಯ ಧಾರಾವಾಹಿಗಳ ಮೂಲಕ ಫೇಮಸ್​ ಆದವರು ಅಂಕಿತಾ ಲೋಖಂಡೆ. ‘ಪವಿತ್ರ ರಿಷ್ತಾ’ ಸೀರಿಯಲ್​ನಲ್ಲಿ ನಟಿಸುವಾಗ ಅವರಿಗೆ ಸುಶಾಂತ್​ ಸಿಂಗ್​ ರಜಪೂತ್​ ಜೊತೆ ಪ್ರೀತಿ ಚಿಗುರಿತ್ತು. ನಂತರ ಅವರಿಬ್ಬರು ಬ್ರೇಕಪ್​ ಮಾಡಿಕೊಂಡರು. ಆ ಬಳಿಕ ಅಂಕಿತಾ ಅವರ ಬದುಕಿನಲ್ಲಿ ಬಂದಿದ್ದೇ ವಿಕ್ಕಿ ಜೈನ್​. ಈಗ ಈ ದಂಪತಿ ಬಿಗ್​ ಬಾಸ್​ ಮನೆಯೊಳಗೆ ಕಿತ್ತಾಡಿಕೊಂಡಿದ್ದಾರೆ.

ಇದನ್ನೂ ಓದಿ: ಸುಶಾಂತ್ ಸಿಂಗ್ ಅಂತಿಮ ದರ್ಶನಕ್ಕೆ ಹೋಗಲಿಲ್ಲವೇಕೆ? ಮಾಜಿ ಗರ್ಲ್​ಫ್ರೆಂಡ್ ಅಂಕಿತಾ ಕೊಟ್ಟರು ಕಾರಣ

ಬಿಗ್​ ಬಾಸ್​ಗೆ ಬಂದ ಬಳಿಕ ಪರಿಚಯವಾಗಿ, ನಂತರ ಮದುವೆಯಾದವರು ಇದ್ದಾರೆ. ಅದೇ ರೀತಿ ದೊಡ್ಮನೆಗೆ ಜೋಡಿಯಾಗಿ ಬಂದು, ನಂತರ ಸಂಬಂಧ ಕೆಡಿಸಿಕೊಂಡ ಮಂದಿಯೂ ಇದ್ದಾರೆ. ವಿಕ್ಕಿ ಜೈನ್​ ಮತ್ತು ಅಂಕಿತಾ ಲೋಖಂಡೆ ನಡುವಿನ ಕಿರಿಕ್​ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಬ್ಬರ ಅಸಲಿ ಮುಖ ಬಯಲಾಗುತ್ತಿದೆ. ಹಾಗಾಗಿ ಡಿವೋರ್ಸ್​ ಬಗ್ಗೆ ಅಂಕಿತಾ ಆಲೋಚನೆ ಮಾಡಿದ್ದಾರೆ.

ಇದನ್ನೂ ಓದಿ: Ankita Lokhande: ಬಿಗ್​ ಬಾಸ್​ ಮನೆಯಲ್ಲಿ ಗಂಡನಿಗೆ ಚಪ್ಪಲಿಯಲ್ಲಿ ಹೊಡೆದ ಪತ್ನಿ; ತಾರಕಕ್ಕೇರಿತು ಕಿತ್ತಾಟ

ಇತ್ತೀಚಿನ ಸಂಚಿಕೆಯಲ್ಲಿ ವಿಕ್ಕಿ ಜೈನ್​ ಅವರು ವಿವಾಹಿತ ಪುರುಷರ ಕಷ್ಟಗಳ ಬಗ್ಗೆ ಮಾತನಾಡುತ್ತಿದ್ದರು. ಮದುವೆ ಬಳಿಕ ಗಂಡಸಿಗೆ ಅಷ್ಟೆಲ್ಲ ಕಷ್ಟ ಆಗುತ್ತೆ ಎಂಬುದಾದರೆ ವಿಚ್ಛೇದನ ಪಡೆಯೋಣ ಎಂದು ಅಂಕಿತಾ ಲೋಖಂಡೆ ಹೇಳಿದ್ದಾರೆ. ಇವರ ಮಾತುಗಳನ್ನು ಕೇಳಿಸಿಕೊಂಡ ಇನ್ನುಳಿದ ಸ್ಪರ್ಧಿಗಳಿಗೆ ಮತ್ತು ಪ್ರೇಕ್ಷಕರಿಗೆ ಶಾಕ್​ ಆಗಿದೆ. ಈ ಕಾರ್ಯಕ್ರಮನ್ನು ಸಲ್ಮಾನ್​ ಖಾನ್​ ನಡೆಸಿಕೊಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?