AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಎರಡನೇ ಮದುವೆ ಆಗೋದು ವ್ಯರ್ಥ, ಮತ್ತೆ ಡಿವೋರ್ಸ್​ ಆಗಬಹುದು’; ಅಭಿಪ್ರಾಯ ತಿಳಿಸಿದ ಸಮಂತಾ

ಸಮಂತಾ ಯಾಕೋ ಎರಡನೇ ಮದುವೆ ಕುರಿತು ಅಷ್ಟಾಗಿ ಆಸಕ್ತಿ ತೋರಿಸುತ್ತಿಲ್ಲ. ಅವರು ಈ ಬಗ್ಗೆ ನೇರವಾಗಿಯೇ ಹೇಳಿದ್ದಾರೆ. ಇದಕ್ಕೆ ಕಾರಣ ಕೂಡ ವಿವರಿಸಿದ್ದಾರೆ.  

‘ಎರಡನೇ ಮದುವೆ ಆಗೋದು ವ್ಯರ್ಥ, ಮತ್ತೆ ಡಿವೋರ್ಸ್​ ಆಗಬಹುದು’; ಅಭಿಪ್ರಾಯ ತಿಳಿಸಿದ ಸಮಂತಾ
ಸಮಂತಾ
ರಾಜೇಶ್ ದುಗ್ಗುಮನೆ
|

Updated on: Dec 18, 2023 | 7:01 AM

Share

ನಟಿ ಸಮಂತಾ (Samantha Ruth Prabhu) ಹಾಗೂ ನಾಗ ಚೈತನ್ಯ ವಿಚ್ಛೇದನ ಘೋಷಿಸಿದ್ದು ಅವರ ಅಭಿಮಾನಿಗಳಿಗೆ ಶಾಕ್ ತಂದಿತ್ತು. ಎಲ್ಲರೂ ಈ ನಿರ್ಧಾರದಿಂದ ಅಚ್ಚರಿಗೊಂಡರು. ಸಮಂತಾ ಈ ರೀತಿಯ ಗಟ್ಟಿ ನಿರ್ಧಾರ ಮಾಡುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಸಮಂತಾ ಅವರು ವಿಚ್ಛೇದನ ಪಡೆಯಲು ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಮಧ್ಯೆ ಸಮಂತಾ ಎರಡನೇ ಮದುವೆ ಆಗುತ್ತಾರೆ ಎನ್ನುವ ಸುದ್ದಿ ಹರಿದಾಡಿತು. ಇದಕ್ಕೆ ಸಮಂತಾ ಉತ್ತರ ನೀಡಿದ್ದಾರೆ. ಎರಡನೇ ಮದುವೆ ಆಗೋದು ವ್ಯರ್ಥ ಎಂದಿದ್ದಾರೆ.

ನಟ ನಾಗ ಚೈತನ್ಯ ಜೊತೆಗಿನ ವಿಚ್ಛೇದನದ ಬಳಿಕ ಸಮಂತಾ ಹಲವು ಕಡೆ ತೆರಳಿದರು. ಅನೇಕ ಮಂದಿರಗಳಿಗೆ ಅವರು ಭೇಟಿ ನೀಡಿದರು. ಸಮಂತಾ ಮನಸ್ಸಿನಲ್ಲಿ ಇರುವ ನೋವು ಕಡಿಮೆ ಆಗುವಂಥದ್ದಲ್ಲ. ಈ ಮಧ್ಯೆ ಅನೇಕರು ಸಮಂತಾಗೆ ಎರಡನೇ ಮದುವೆ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ಆದರೆ, ಸಮಂತಾ ಯಾಕೋ ಎರಡನೇ ಮದುವೆ ಕುರಿತು ಅಷ್ಟಾಗಿ ಆಸಕ್ತಿ ತೋರಿಸುತ್ತಿಲ್ಲ. ಅವರು ಈ ಬಗ್ಗೆ ನೇರವಾಗಿಯೇ ಹೇಳಿದ್ದಾರೆ. ಇದಕ್ಕೆ ಕಾರಣ ಕೂಡ ವಿವರಿಸಿದ್ದಾರೆ.

ಇತ್ತೀಚೆಗೆ ಸಮಂತಾ ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೋತ್ತರ ನಡೆಸಿದ್ದರು. ‘ನೀವು ಎರಡನೇ ಮದುವೆ ಆಗುವುದಿಲ್ಲವೇ’ ಎನ್ನುವ ಪ್ರಶ್ನೆ ಎದುರಾಯಿತು. ಇದಕ್ಕೆ ಅವರು ಲಾಜಿಕ್​ ಆಗಿ ಉತ್ತರ ನೀಡಿದ್ದಾರೆ. ‘ಅಂಕಿ ಅಂಶಗಳ ಪ್ರಕಾರ ಇದೊಂದು ಕೆಟ್ಟ ಹೂಡಿಕೆ’ ಎಂದಿದ್ದಾರೆ ಸಮಂತಾ. ಹೀಗೆ ಹೇಳಲು ಅವರು ಕಾರಣವನ್ನೂ ನೀಡಿದ್ದಾರೆ. ‘ಮೊದಲ ಮದುವೆಯಲ್ಲಿ ವಿಚ್ಛೇದನದ ಸಾಧ್ಯತೆ ಶೇ.50 ಇರುತ್ತದೆ. ಎರಡು ಹಾಗೂ ಮೂರನೇ ಮದುವೆಯಲ್ಲಿ ಈ ಪ್ರಮಾಣ ಅನುಕ್ರಮವಾಗಿ ಶೇ. 67 ಹಾಗೂ ಶೇ.73 ಇರುತ್ತದೆ’ ಎಂದಿದ್ದಾರೆ ಅವರು. ಈ ಮೂಲಕ ಮತ್ತೆ ಮದುವೆ ಆಗುವುದಿಲ್ಲ ಎಂದು ನೇರವಾಗಿ ಹೇಳಿದ್ದಾರೆ.

ಇದನ್ನೂ ಓದಿ: ನಿರ್ಮಾಣ ಸಂಸ್ಥೆ ಆರಂಭಿಸಿದ ಸಮಂತಾ, ನಿರ್ಮಿಸುತ್ತಿರುವುದು ಸಿನಿಮಾ ಅಲ್ಲ, ಮತ್ತೇನು?

ಸಮಂತಾ ಅವರು ಇತ್ತೀಚೆಗೆ ಸಾಕಷ್ಟು ಏಳುಬೀಳು ಕಂಡಿದ್ದಾರೆ. ಎಲ್ಲವನ್ನೂ ಎದುರಿಸಿ ಅವರು ಮುನ್ನುಗ್ಗುತ್ತಿದ್ದಾರೆ. ಅವರು ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುವಲ್ಲಿ ವಿಳಂಬ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ