AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿರ್ಮಾಣ ಸಂಸ್ಥೆ ಆರಂಭಿಸಿದ ಸಮಂತಾ, ನಿರ್ಮಿಸುತ್ತಿರುವುದು ಸಿನಿಮಾ ಅಲ್ಲ, ಮತ್ತೇನು?

Samantha: ನಟಿ ಸಮಂತಾ ಸಿನಿಮಾಗಳಿಂದ ಬ್ರೇಕ್ ಪಡೆದು ತಮ್ಮದೇ ನಿರ್ಮಾಣ ಸಂಸ್ಥೆ ಪ್ರಾರಂಭಿಸಿದ್ದಾರೆ. ಆದರೆ ನಿರ್ಮಾಣ ಸಂಸ್ಥೆಯ ಮೊದಲ ನಿರ್ಮಾಣ ಸಿನಿಮಾ ಅಲ್ಲ ಬದಲಿಗೆ ಬೇರೇನೋ! ಏನದು?

ನಿರ್ಮಾಣ ಸಂಸ್ಥೆ ಆರಂಭಿಸಿದ ಸಮಂತಾ, ನಿರ್ಮಿಸುತ್ತಿರುವುದು ಸಿನಿಮಾ ಅಲ್ಲ, ಮತ್ತೇನು?
ಸಮಂತಾ
ಮಂಜುನಾಥ ಸಿ.
|

Updated on: Dec 12, 2023 | 6:01 PM

Share

ಹಲವು ಹೊಸ, ಗ್ಲಾಮರಸ್ ನಟಿಯರು ಇತ್ತೀಚಿನ ಕೆಲವು ವರ್ಷಗಳಲ್ಲಿ ಚಿತ್ರರಂಗಕ್ಕೆ ಬಂದಿದ್ದಾರೆ. ಆದರೆ ಈಗಲೂ ನಟಿ ಸಮಂತಾ (Samantha) ಟಾಪ್ ನಟಿಯರಲ್ಲಿ ಒಬ್ಬರಾಗಿ ಗುರುತಿಸಿಕೊಳ್ಳುತ್ತಾರೆ. ಒಂದರ ಹಿಂದೊಂದು ಭಿನ್ನ ಸಿನಿಮಾಗಳ ಅವಕಾಶಗಳನ್ನು ಬಾಚಿಕೊಳ್ಳುತ್ತಿರುವ ಹೊತ್ತಿನಲ್ಲಿಯೇ ಸಿನಿಮಾದಿಂದ ಬ್ರೇಕ್ ಪಡೆದುಕೊಂಡಿದ್ದಾರೆ. ಈಗ ಸಿನಿಮಾದಿಂದ ದೂರಾಗಿ, ಪ್ರವಾಸ, ಆರೋಗ್ಯ ಸುಧಾರಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಆದರೆ ಸಮಂತಾ ಸಂಪೂರ್ಣವಾಗಿ ಸಿನಿಮಾಗಳಿಂದ ದೂರವಾಗಿಲ್ಲ, ಸಮಂತಾ ಸ್ವಂತ ನಿರ್ಮಾಣ ಸಂಸ್ಥೆಯೊಂದನ್ನು ಪ್ರಾರಂಭಿಸಿದ್ದಾರೆ. ನಿರ್ಮಾಣ ಸಂಸ್ಥೆಯಿಂದ ಸಿನಿಮಾ ನಿರ್ಮಿಸುವ ಬದಲಿಗೆ ಬೇರೆ ಒಂದು ವಿಭಾಗಕ್ಕೆ ಕೈ ಇಟ್ಟಿದ್ದಾರೆ.

ಸಮಂತಾ, ರಿಯಾಲಿಟಿ ಶೋ ಒಂದನ್ನು ಪ್ರಾರಂಭಿಸುತ್ತಿದ್ದಾರೆ. ಅವರ ನಿರ್ಮಾಣ ಸಂಸ್ಥೆಯ ಮೊದಲ ಪ್ರಾಜೆಕ್ಟ್ ಈ ರಿಯಾಲಿಟಿ ಶೋ ಆಗಿರಲಿದೆ. ‘ಎಂಟಿವಿ ಹಸಲ್’ ಹೆಸರಿನ ಹಿಂದಿ ರಿಯಾಲಿಟಿ ಶೋ ಈಗಾಗಲೇ ಪ್ರಸಾರವಾಗುತ್ತಿದೆ. ಈ ಶೋನಲ್ಲಿ ಸ್ಪರ್ಧಿಗಳು ರ್ಯಾಪ್ ಸಂಗೀತವನ್ನು ಪ್ರಸ್ತುತ ಪಡಿಸುತ್ತಾರೆ. ಹೊಸ ತಲೆಮಾರಿನವರನ್ನು ಈ ಸಂಗೀತಾ ಸಖತ್ ಸೆಳೆಯುತ್ತಿದೆ. ಸಾಮಾನ್ಯ ಹಾಡುಗಳಿಗಿಂತಲೂ ಎಲ್ಲ ವಿಧದಲ್ಲಿಯೂ ಈ ಸಂಗೀತ ಮಾದರಿ ಭಿನ್ನವಾಗಿದೆ. ಹಾಗಾಗಿ ಈ ರಿಯಾಲಿಟಿ ಶೋ ಅನ್ನೇ ಸಮಂತಾ ಮೊದಲಿಗೆ ನಿರ್ಮಾಣ ಮಾಡುತ್ತಿದ್ದಾರೆ.

ಇತ್ತೀಚೆಗಷ್ಟೆ ‘ಎಂಟಿವಿ ಹಸಲ್’ ಹಿಂದಿ ರಿಯಾಲಿಟಿ ಶೋಗೆ ಜಡ್ಜ್ ಆಗಿ ಹೋಗಿದ್ದರು ಸಮಂತಾ. ಸ್ಪರ್ಧಿಗಳ ರ್ಯಾಪ್ ಹಾಡುಗಳನ್ನು ಸಖತ್ ಎಂಜಾಯ್ ಮಾಡಿದ ಸಮಂತಾ, ಅದೇ ಶೋನಲ್ಲಿ ತಾವು ಪ್ರಾರಂಭಿಸುತ್ತಿರುವ ರಿಯಾಲಿಟಿ ಶೋನ ಘೋಷಣೆ ಮಾಡಿ ಅದರ ಲೋಗೋವನ್ನು ಸಹ ಬಿಡುಗಡೆ ಮಾಡಿದರು.

ಇದನ್ನೂ ಓದಿ:ನಿರ್ಮಾಪಕಿ ಆದ ಸಮಂತಾ; ನಿರ್ಮಾಣ ಸಂಸ್ಥೆಗೆ ಹೆಸರು ಸಿಕ್ಕಿದ್ದು ಇಂಗ್ಲಿಷ್ ಹಾಡಿನಿಂದಿಂದ

ಶೋನಲ್ಲಿ ಮಾತನಾಡಿದ ಸಮಂತಾ, ‘‘ದಕ್ಷಿಣ ಭಾರತದಲ್ಲಿ ಬಹಳ ಜನ ಪ್ರತಿಭಾವಂತರಿದ್ದಾರೆ. ಅದ್ಭುತವಾದ ಸಂಗೀತ ಅಲ್ಲಿದೆ. ಆದರೆ ಆ ಪ್ರತಿಭಾವಂತರಿಗೆ ಒಂದು ವೇದಿಕೆಯ ಅಗತ್ಯವಿದೆ. ಅವರ ಸಂಗೀತ ಪ್ರಪಂಚದ ಮೂಲೆಗಳಿಗೆ ತಲುಪಬೇಕಿದೆ. ಬೇರೆ ಎಲ್ಲವೂ ತೋರಿಕೆಗಾಗಿಯೇ ನಾಜೂಕಾಗಿ ಜೋಡಿಸಿದಂತೆ ಕಾಣುತ್ತಿರುವಾಗ ‘ಹಸಲ್’ ನಿಜದಂತೆ ಕಾಣುತ್ತದೆ. ಎಲ್ಲ ತಲೆಮಾರುಗಳಿಗೂ ಅದರದ್ದೇ ಆದ ಸಂಗೀತವಿದೆ. ನನಗೆ ಅನ್ನಿಸುತ್ತದೆ. ಈ ತಲೆಮಾರಿನ ಸಂಗೀತ ಈ ರ್ಯಾಪ್’’ ಎಂದಿದ್ದಾರೆ ಸಮಂತಾ.

‘‘ಈ ಅದ್ಭುತ ಸಂಗೀತ ಪರಂಪರೆಯ ಭಾಗವಾಗಲು ನನಗೆ ಖುಷಿ ಇದೆ. ಈ ಅದ್ಭುತವಾದ ಪ್ರಕಾರವನ್ನು ನಮ್ಮ ಊರಿಗೆ (ಹೋಮ್) ಪರಿಚಯಿಸಲು ನಾನು ಬಯಸುತ್ತೇನೆ. ಹಾಗಾಗಿಯೇ ಎಂಟಿವಿ ಹಸಲ್ ತಮಿಳು ಆವೃತ್ತಿಯನ್ನು ಪ್ರಾರಂಭಿಸುತ್ತಿದ್ದೇನೆ’’ ಎಂದ ಸಮಂತಾ ಅದರ ಲೋಗೋ ಅನಾವರಣ ಮಾಡಿದರು. ‘‘ಎಂಟಿವಿ ಹಸಲ್ ನಮ್ಮ ಪೇಟೈ’ ಎಂದು ಈ ಶೋನ ಹೆಸರು, ಇದು ನನ್ನ ನಿರ್ಮಾಣ ಸಂಸ್ಥೆಯ ಮೊದಲ ಪ್ರಯತ್ನ. ಈ ಶೋನ ಆಡಿಷನ್ ಓಪನ್ ಆಗಿದೆ, ಎಲ್ಲರೂ ಅಪ್ಲೈ ಮಾಡಿ’’ ಎಂದು ಸಮಂತಾ ಕರೆ ನೀಡಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
17 ವರ್ಷ ಸೇವೆ ಸಲ್ಲಿಸಿ ಹುಟ್ಟೂರಿಗೆ ಮರಳಿದ ಯೋಧನಿಗೆ ಅದ್ಧೂರಿ ಸ್ವಾಗತ!
17 ವರ್ಷ ಸೇವೆ ಸಲ್ಲಿಸಿ ಹುಟ್ಟೂರಿಗೆ ಮರಳಿದ ಯೋಧನಿಗೆ ಅದ್ಧೂರಿ ಸ್ವಾಗತ!
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್