ಕನ್ನಡದ ಪಂಡಿತನಾಗಲು ಮುಂದಾದ ಮೈಕಲ್; ಹೇಗಿದೆ ನೋಡಿ ಸಿದ್ಧತೆ
ಮೈಕಲ್ಗೆ ಶುದ್ಧವಾಗಿ ಕನ್ನಡ ಮಾತನಾಡಲು ಬರದೇ ಇದ್ದರೂ ಅವರು ಇಲ್ಲಿನ ಭಾಷೆ ಕಲಿಯುವ ಪ್ರಯತ್ನವನ್ನಂತೂ ಮಾಡುತ್ತಿದ್ದಾರೆ. ಈಗ ಅವರು ಬಿಗ್ ಬಾಸ್ ಶಾಲೆಯಲ್ಲಿ ಕನ್ನಡ ಕಲಿಸುವ ಮೇಷ್ಟ್ರಾಗಿದ್ದಾರೆ.
ಮೈಕಲ್ ಅಜಯ್ (Michael Ajay) ಅವರು ನೈಜೀರಿಯಾದವರು. ಅವರ ತಾಯಿ ಕರ್ನಾಟಕದವರು. ಹೀಗಾಗಿ ಅವರಿಗೆ ಕನ್ನಡದ ಟಚ್ ಇದೆ. ಶುದ್ಧವಾಗಿ ಕನ್ನಡ ಮಾತನಾಡಲು ಬರದೇ ಇದ್ದರೂ ಅವರು ಇಲ್ಲಿನ ಭಾಷೆ ಕಲಿಯುವ ಪ್ರಯತ್ನವನ್ನಂತೂ ಮಾಡುತ್ತಿದ್ದಾರೆ. ಈಗ ಅವರು ಬಿಗ್ ಬಾಸ್ ಶಾಲೆಯಲ್ಲಿ ಕನ್ನಡ ಕಲಿಸುವ ಮೇಷ್ಟ್ರಾಗಿದ್ದಾರೆ. ಈ ಪ್ರೋಮೋನ ಕಲರ್ಸ್ ಕನ್ನಡ ಹಂಚಿಕೊಂಡಿದೆ. ‘ವಿದೇಶದಿಂದ ಬಂದಿದ್ದೀನಿ. ಕನ್ನಡದ ಮೇಲೆ ಪ್ರೀತಿ ಆಯ್ತು. ಈಗ ಪಂಡಿತ ಆಗೋಕೆ ಪ್ರಯತ್ನ ಮಾಡುತ್ತಿದ್ದೇನೆ’ ಎಂದಿದ್ದಾರೆ ಮೈಕಲ್. ಇಂಗ್ಲಿಷ್ ಮಾತನಾಡಿದರೆ ಪನಿಶ್ಮೆಂಟ್ ಕೊಡೋ ಎಚ್ಚರಿಕೆಯನ್ನೂ ಅವರು ನೀಡಿದ್ದಾರೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಬಿಗ್ ಬಾಸ್ ನೋಡಬಹುದಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Dec 12, 2023 03:01 PM
Latest Videos