ಯತ್ನಾಳ್​ರಲ್ಲಿ ಯಾವ ಸಾಮರ್ಥ್ಯ ಇದೆಯಂತ ಪಕ್ಷದ ರಾಜ್ಯಾಧ್ಯಕ್ಷ ಮಾಡುತ್ತಾರೆ? ಮುರುಗೇಶ್ ನಿರಾಣಿ, ಬಿಜೆಪಿ ನಾಯಕ

ಯತ್ನಾಳ್​ರಲ್ಲಿ ಯಾವ ಸಾಮರ್ಥ್ಯ ಇದೆಯಂತ ಪಕ್ಷದ ರಾಜ್ಯಾಧ್ಯಕ್ಷ ಮಾಡುತ್ತಾರೆ? ಮುರುಗೇಶ್ ನಿರಾಣಿ, ಬಿಜೆಪಿ ನಾಯಕ

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 12, 2023 | 4:46 PM

ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಯತ್ನಾಳ್ ಸಲುವಾಗಿಯೇ ಒಂದು ಹೆಲಿಕಾಪ್ಟರ್ ಗೊತ್ತು ಮಾಡಿ 40 ಕ್ಷೇತ್ರಗಳಲ್ಲಿ ಪ್ರಚಾರಕ್ಕೆ ಕಳಿಸಿತ್ತು. ಒಂದು ಸ್ಥಾನದಲ್ಲೂ ಬಿಜೆಪಿ ಅಭ್ಯರ್ಥಿ ಗೆಲ್ಲಲಿಲ್ಲ ಎಂದು ನಿರಾಣಿ ಹೇಳಿದರು. ಆದು ಹೋಗಲಿ, ಅವರದ್ದೇ ಜಿಲ್ಲೆ ವಿಜಯಪುರದಲ್ಲಿ ಎಷ್ಟು ಸೀಟುಗಳನ್ನು ಅವರು ಪಕ್ಷಕ್ಕೆ ಗೆಲ್ಲಿಸಿಕೊಟ್ಟರು? ಎಂದು ಅವರು ಕೇಳಿದರು.

ದೆಹಲಿ: ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಬದ್ಧವೈರಿ ಮುರಗೇಶ್ ಆರ್ ನಿರಾಣಿ (Murugesh R Nirani) ಇಂದು ನಗರದಲ್ಲಿ ಮಾಧ್ಯ ಪ್ರತಿನಿಧಿಗಳೊಂದಿಗೆ ಮಾತಾಡುವಾಗ ರಾಜ್ಯದಲ್ಲಿ ಯತ್ನಾಳ್ ಮಾಡುತ್ತಿರೋದು ಅರಣ್ಯರೋದನೆ ಅಂತ ಹೇಳಿದರು. ಯತ್ನಾಳ್ ಮಾಡಿರುವ ಸಾಧನೆಯಾದರೂ ಏನು ಅಂತ ಅವರನ್ನು ರಾಜ್ಯಾಧ್ಯಕ್ಷ ಮಾಡುತ್ತಾರೆ? ಬಿವೈ ವಿಜಯೇಂದ್ರ (BY Vijayendra) ತಮ್ಮ ಸಾಮರ್ಥ್ಯವನ್ನು ಪ್ರೂವ್ ಬೇರೆ ಬೇರೆ ಹಂತಗಳಲ್ಲಿ ಸಾಬೀತು ಮಾಡಿದ್ದಾರೆ. ಅವರ ಕೆಲಸ, ಸಂಘಟನಾ ಚಾತುರ್ಯ ಮತ್ತು ಸಮೀಕ್ಷೆಗಳನ್ನು ಆಧರಿಸಿ ಅವರನ್ನು ವರಿಷ್ಠರು ಆಯ್ಕೆ ಮಾಡಿದ್ದಾರೆ, ಬಾಯಿ ಇದೆ ಅಂತ ಮನಸ್ಸಿಗೆ ಬಂದಂತೆ ಮಾತಾಡುತ್ತಿರುವ ಯತ್ನಾಳ್ ಮೊದಲು ತನ್ನ ಸಾಮರ್ಥ್ಯ ಏನು ಅನ್ನೋದನ್ನು ಮೊದಲು ತೋರಿಸಲಿ ಎಂದು ನಿರಾಣಿ ಹೇಳಿದರು. ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಯತ್ನಾಳ್ ಸಲುವಾಗಿಯೇ ಒಂದು ಹೆಲಿಕಾಪ್ಟರ್ ಗೊತ್ತು ಮಾಡಿ 40 ಕ್ಷೇತ್ರಗಳಲ್ಲಿ ಪ್ರಚಾರಕ್ಕೆ ಕಳಿಸಿತ್ತು. ಒಂದು ಸ್ಥಾನದಲ್ಲೂ ಬಿಜೆಪಿ ಅಭ್ಯರ್ಥಿ ಗೆಲ್ಲಲಿಲ್ಲ ಎಂದು ನಿರಾಣಿ ಹೇಳಿದರು.

ಆದು ಹೋಗಲಿ, ಅವರದ್ದೇ ಜಿಲ್ಲೆ ವಿಜಯಪುರದಲ್ಲಿ ಎಷ್ಟು ಸೀಟುಗಳನ್ನು ಅವರು ಪಕ್ಷಕ್ಕೆ ಗೆಲ್ಲಿಸಿಕೊಟ್ಟರು? ವಿಜಯಪುರ ನಗರದಲ್ಲಿ ಬಿಜೆಪಿಯಿಂದ ಗೆಲ್ಲಲು ಯತ್ನಾಳ್ ಅವರೇ ಆಗಬೇಕು ಅಂತೇನಿಲ್ಲ, ಯಾರು ಬೇಕಾದರೂ ಗೆಲ್ಲಬಹುದು ಎಂದು ನಿರಾಣಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ