ಸೋಮಣ್ಣಗಿರುವ ಅಸಮಾಧಾನವನ್ನು ಪಕ್ಷದ ವರಿಷ್ಠರು ಡಿಸೆಂಬರ್ 15ರೊಳಗೆ ದೂರ ಮಾಡಲಿದ್ದಾರೆ: ಮುರಗೇಶ್ ಆರ್ ನಿರಾಣಿ
ಒಂದೇ ತಾಯಿಯ ಮಕ್ಕಳಲ್ಲೇ ಬೇರೆ ಬೇರೆ ಗುಣಗಳಿರುತ್ತವೆ. ಇನ್ನು ಬಿಜೆಪಿಯಾದರೋ 10 ಕೋಟಿ ಸದಸ್ಯರನ್ನೊಳಗೊಂಡ ಬೃಹತ್ ಪಕ್ಷ, ಬೇರೆ ಬೇರೆ ಅಭಿಪ್ರಾಯಗಳಿರೋದು ಅಸಹಜ, ಅಸ್ವಭಾವಿಕವೇನೂ ಅಲ್ಲ, ಅದನ್ನೆಲ್ಲ ಸರಿಪಡಿಸಲು ಹಿರಿಯ ನಾಯಕರಿದ್ದಾರೆ ಎಂದು ಮಾಜಿ ಶಾಸಕ ಹೇಳಿದರು.
ಬಾಗಲಕೋಟೆ: ತಾನಿನ್ನೂ ರಾಜಕಾರಣದಲ್ಲಿ ಸಕ್ರಿಯ ಅಂತ ಜನತೆ ಮತ್ತು ತಮ್ಮ ಪಕ್ಷದ ನಾಯಕರಿಗೆ ತೋರಿಸಲು ಕೆಲ ಧುರೀಣರು ಆಗಾಗ್ಗೆ ಸುದ್ದಿಗೋಷ್ಟಿ ನಡೆಸುತ್ತಿರುತ್ತಾರೆ. ಮಾಜಿ ಸಚಿವ ಮುರುಗೇಶ್ ಆರ್ ನಿರಾಣಿ (Murugesh R Nirani) ಅಂಥವರ ಪೈಕಿ ಒಬ್ಬರಿರಬಹುದು. ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿದ ಅವರು ಹಿರಿಯ ನಾಯಕ ವಿ ಸೋಮಣ್ಣ (V Somanna) ಬಗ್ಗೆ ಮಾತಾಡಿದರು. ರಾಜಕಾರಣದಲ್ಲಿ ಅಪಾರ ಅನುಭವವಿರುವ ಸೋಮಣ್ಣ ತಮಗಾಗಿರುವ ನೋವು ಮತ್ತು ಅಸಮಾಧಾನವನ್ನು ಸುತ್ತೂರು ಮತ್ತು ಸಿದ್ದಗಂಗಾ ಮಠದಲ್ಲಿ ತೋಡಿಕೊಂಡಿದ್ದಾರೆ. ಆದರೆ ಅವರ ಅಸಮಾಧಾನವನ್ನು ರಾಜ್ಯದ ಹಿರಿಯ ನಾಯಕರಾದ ಬಿಎಸ್ ಯಡಿಯೂರಪ್ಪ (BS Yediyurappa) ಮತ್ತು ದೆಹಲಿಯ ವರಿಷ್ಠರು ಡಿಸೆಂಬರ್ 15 ರೊಳಗಾಗಿ ದೂರಮಾಡಲಿದ್ದಾರೆ ಎಂದು ನಿರಾಣಿ ಹೇಳಿದರು. ಒಂದೇ ತಾಯಿಯ ಮಕ್ಕಳಲ್ಲೇ ಬೇರೆ ಬೇರೆ ಗುಣಗಳಿರುತ್ತವೆ. ಇನ್ನು ಬಿಜೆಪಿಯಾದರೋ 10 ಕೋಟಿ ಸದಸ್ಯರನ್ನೊಳಗೊಂಡ ಬೃಹತ್ ಪಕ್ಷ, ಬೇರೆ ಬೇರೆ ಅಭಿಪ್ರಾಯಗಳಿರೋದು ಅಸಹಜ, ಅಸ್ವಭಾವಿಕವೇನೂ ಅಲ್ಲ, ಅದನ್ನೆಲ್ಲ ಸರಿಪಡಿಸಲು ಹಿರಿಯ ನಾಯಕರಿದ್ದಾರೆ ಎಂದು ಮಾಜಿ ಶಾಸಕ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ