ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಹೇಳಿ ಬಿಜೆಪಿ ವಿ ಸೋಮಣ್ಣರನ್ನು ಬಲಿಪಶು ಮಾಡಿತು: ಎಂಬಿ ಪಾಟೀಲ್, ಸಚಿವ
ಗೋವಿಂದರಾಜ ನಗರದಲ್ಲಿ ಸ್ಪರ್ಧಿಸಿದ್ದರೂ ಸೋಮಣ್ಣ ಗೆಲ್ಲುತ್ತಿರಲಿಲ್ಲ ಆದರೆ ಸೋಲು ಅಷ್ಟು ಹೀನಾಯವಾಗುತ್ತಿರಲಿಲ್ಲ ಎಂದು ಪಾಟೀಲ್ ಹೇಳಿದರು. ಸೋಮಣ್ಣ ಕಾಂಗ್ರೆಸ್ ಪಕ್ಷ ಸೇರಬಯಸಿದರೆ ಅವರನ್ನು ಬರಮಾಡಿಕೊಳ್ಳುವುದು ಹೈಕಮಾಂಡ್ ಗೆ ಬಿಟ್ಟ ವಿಷಯ ಎಂದು ಅವರು ಹೇಳಿದರು
ವಿಜಯಪುರ: ಹಿರಿಯ ಬಿಜೆಪಿ ನಾಯಕ ವಿ ಸೋಮಣ್ಣ (V Somanna) ಅವರು ಅಸಮಾಧಾನಗೊಂಡಿರುವುದು ಸ್ವಾಭಾವಿಕ ಎಂದು ಕೈಗಾರಿಕಾ ಸಚಿವ ಎಂಬಿ ಪಾಟೀಲ್ (MB Patil) ಹೇಳಿದರು. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರುಮ ಸೋಮಣ್ಣ ಅವರನ್ನು ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವಂತೆ ಮಾಡಿ ಬಲಿಪಶು ಮಾಡಲಾಯಿತು, ಎರಡು ಕಡೆಗಳಲ್ಲೂ ಅವರು ಹೀನಾಯ ಸೋಲು ಅನುಭವಿಸಿದರು ಎಂದು ಹೇಳಿದರು. ಗೋವಿಂದರಾಜ ನಗರದಲ್ಲಿ (Govindarajanagar) ಅವರು ಸ್ಪರ್ಧಿಸಿದ್ದರೂ ಗೆಲ್ಲುತ್ತಿರಲಿಲ್ಲ ಆದರೆ ಸೋಲು ಅಷ್ಟು ಹೀನಾಯವಾಗುತ್ತಿರಲಿಲ್ಲ ಎಂದು ಪಾಟೀಲ್ ಹೇಳಿದರು. ಸೋಮಣ್ಣ ಕಾಂಗ್ರೆಸ್ ಪಕ್ಷ ಸೇರಬಯಸಿದರೆ ಅವರನ್ನು ಬರಮಾಡಿಕೊಳ್ಳುವುದು ಹೈಕಮಾಂಡ್ ಗೆ ಬಿಟ್ಟ ವಿಷಯ ಎಂದು ಹೇಳಿದ ಅವರು; ತಮ್ಮೊಂದಿಗೆ, ಕೆಪಿಸಿಸಿ ಅಧ್ಯಕ್ಷರೊಂದಿಗೆ, ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಬೇರೆ ಪಕ್ಷಗಳ ಹಲವಾರು ನಾಯಕರು ಸಂಪರ್ಕದಲ್ಲಿದ್ದಾರೆ, ಲೋಕ ಸಭಾ ಚುನಾವಣೆಗೆ ಮೊದಲು ಅಥವಾ ನಂತರ ರಾಜ್ಯ ಮತ್ತು ರಾಷ್ಟ್ರ ರಾಜಕಾರಣ ಚಿತ್ರಣದಲ್ಲಿ ಭಾರೀ ಬದಲಾವಣೆಯಾಗಲಿದೆ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ