Bengaluru Kambala: ಕಾಂತಾರ ಸಿನಿಮಾ ಖ್ಯಾತಿಯ ಕಿಟ್ಟು-ಅಪ್ಪು ಕೋಣಗಳಿಗೆ ರಣಹಲಗೆ ವಿಭಾಗದಲ್ಲಿ ಚಿನ್ನ!
ಕಿಟ್ಟು-ಅಪ್ಪು ಕೋಣಗಳ ಮಾಲೀಕ ಪರಮೇಶ್ವರ್ ಭಟ್ ಅವರಂತೂ ಖುಷಿಯಿಂದ ಬೀಗುತ್ತಿದ್ದಾರೆ. ಕರಾವಳಿ ಭಾಗದ ಅತ್ಯಂತ ಜನಪ್ರಿಯ ಕ್ರೀಡೆಯಾಗಿರುವ ಕಂಬಳ ಮೊದಲ ಬಾರಿಗೆ ಬೆಂಗಳೂರಲ್ಲಿ ಆಯೋಜನೆಗೊಂಡಿದೆ. ಅರಮನೆ ಮೈದಾನದಲ್ಲಿ ನಿರ್ಮಿಸಿರುವ ಟ್ರ್ಯಾಕ್ ಗಳಲ್ಲಿ ಕೋಣಗಳು ಮೈನವಿರೇಳಿಸುವಂತೆ ಓಡುವುದನ್ನು ವೀಕ್ಷಿಸಲು ಲಕ್ಷಗಟ್ಟಲೆ ಜನ ಸೇರಿದ್ದಾರೆ.
ಬೆಂಗಳೂರು: ಇಲ್ಲಿ ಓಡೋಡಿ ಬರುತ್ತಿರುವ ಕೋಣಗಳನ್ನು ಎಲ್ಲೋ ನೋಡಿದಂತಿದೆಯಲ್ಲ ಅಂತ ನಿಮಗನ್ನಿಸಿದ್ದರೆ, ನಿಮ್ಮ ಅನಿಸಿಕೆ ತಪ್ಪಲ್ಲ, ಸರಿ. ಕರುನಾಡಿನಲ್ಲಿ ರಿಷಬ್ ಶೆಟ್ಟಿಯ (Rishab Shetty) ಕಾಂತಾರ (Kantara) ಸಿನಿಮಾ ನೋಡದವರು ಬಹಳ ವಿರಳ ಅಂತ್ಲೇ ಹೇಳಬೇಕು. ಸಿನಿಮಾದಲ್ಲಿ ಕಂಬಳದ ದೃಶ್ಯವಿದೆ ಮತ್ತು ಚಿತ್ರದ ನಾಯಕ ಶೆಟ್ಟಿ ಕೋಣಗಳನ್ನು ಓಡಿಸುತ್ತಾರೆ. ಅವರು ಓಡಿಸಿದ ಕೋಣಗಳು ಸ್ಮೃತಿಪಟಲದಲ್ಲಿ ಅಚ್ಚಾಗಿದ್ದರೆ ಇಲ್ಲಿ ಓಡಿ ಬರುತ್ತಿರುವ ಕೋಣಗಳನ್ನು ಗುರುತಿಸುವುದು ಕಷ್ಟವಾಗದು. ಶೆಟ್ರು ಓಡಿಸಿದ ಕೋಣಗಳೇ ಇವು! ಅಂದಹಾಗೆ, ಬೆಂಗಳೂರು ಕಂಬಳದ ರಣಹಲಗೆ ವಿಭಾಗದಲ್ಲಿ ಕಿಟ್ಟು-ಅಪ್ಪು ಹೆಸರಿನ ಈ ಕೋಣಗಳು ಚಿನ್ನದ ಪದಕ (gold medal) ಗೆದ್ದು ಕಾಂತಾರ ಸಿನಿಮಾದಿಂದ ತಮಗೆ ದಕ್ಕಿದ ಖ್ಯಾತಿ ಆಕಸ್ಮಿಕ ಅಲ್ಲವೆನ್ನುವುದನ್ನು ಸಾಬೀತು ಮಾಡಿವೆ. ಕಿಟ್ಟು-ಅಪ್ಪು ಕೋಣಗಳ ಮಾಲೀಕ ಪರಮೇಶ್ವರ್ ಭಟ್ ಅವರಂತೂ ಖುಷಿಯಿಂದ ಬೀಗುತ್ತಿದ್ದಾರೆ. ಕರಾವಳಿ ಭಾಗದ ಅತ್ಯಂತ ಜನಪ್ರಿಯ ಕ್ರೀಡೆಯಾಗಿರುವ ಕಂಬಳ ಮೊದಲ ಬಾರಿಗೆ ಬೆಂಗಳೂರಲ್ಲಿ ಆಯೋಜನೆಗೊಂಡಿದೆ. ಅರಮನೆ ಮೈದಾನದಲ್ಲಿ ನಿರ್ಮಿಸಿರುವ ಟ್ರ್ಯಾಕ್ ಗಳಲ್ಲಿ ಕೋಣಗಳು ಮೈನವಿರೇಳಿಸುವಂತೆ ಓಡುವುದನ್ನು ವೀಕ್ಷಿಸಲು ಲಕ್ಷಗಟ್ಟಲೆ ಜನ ಸೇರಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ