Bengaluru Kambala: ಅರಮನೆ ಮೈದಾನ ಪ್ರವೇಶಿಸಿ ಮಿಂಚು ಹರಿಸಿದ ಮಿಂಚುಳ್ಳಿ ಪೂಜಾ ಹೆಗ್ಡೆಗೆ ಹಲವು ಭಾಷೆ ಗೊತ್ತು, ಕನ್ನಡ ಗೊತ್ತಿಲ್ಲ!
Bengaluru Kambala: ಬೆಂಗಳೂರು ಕಂಬಳ ಆಯೋಜಕರಲ್ಲಿ ಕೆಲವರು ಪೂಜಾಗೆ ಸಂಬಂಧಿಕರು. ಹಸಿರು ಸೀರೆಯಲ್ಲಿ ಬಹಳ ಮುದ್ದಾಗಿ ಕಾಣುತ್ತಿದ್ದ ನೀಳಕಾಯದ ಬೆಡಗಿ ಟಾಲಿವುಡ್ ಮತ್ತು ಕೋಲಿವುಡ್ ನಲ್ಲಿ ಸೂಪರ್ ಸ್ಟಾರಿಣಿ, ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ನಲ್ಲಿ ಭಯಂಕರ ಬ್ಯೂಸಿಯಾಗಿದ್ದಾರೆ ಮಾರಾಯ್ರೇ. ಬಿಗ್ ಬಿ ಅಮಿತಾಬ್ ಬಚ್ಚನ್ ಜೊತೆ ಜಾಹೀರಾತುಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ.
ಬೆಂಗಳೂರು: ನಗರದಲ್ಲಿ ಮೊದಲ ಬಾರಿಗೆ ಆಯೋಜಿಸಲಾಗುತ್ತಿರುವ ಕಂಬಳ ಉತ್ಸವದಲ್ಲಿ ಓಡಲು ಬಂದಿರುವ ಕೋಣಗಳಿಗೆ ಬಹುಭಾಷಾ ತಾರೆ, ಬಂಟರ ಹುಡುಗಿ ಪೂಜಾ ಹೆಗ್ಡೆ (Pooja Hegde) ಮೇಲೆ ಉಗ್ರ ಕೋಪ ಬಂದಿರಲಿಕ್ಕೂ ಸಾಕು. ಪೂಜಾ ಇಂದು ಮಧ್ಯಾಹ್ನ ಬೆಂಗಳೂರು ಕಂಬಳ (Bengaluru Kambala) ವೀಕ್ಷಿಸಲು ಆಗಮಿಸುವ ಮೊದಲು ಅರಮನೆ ಮೈದಾನದಲ್ಲಿ (Palace Grounds) ಹಾಜರಿದ್ದ ಲಕ್ಷಾಂತರ ಜನರ ದೃಷ್ಟಿಯೆಲ್ಲ ಮಿರಮಿರ ಮಿಂಚುತ್ತಿದ್ದ ಕೋಣಗಳ ಮೇಲಿತ್ತು. ಆದರೆ ಮಿಂಚುಳ್ಳಿಯ ಆಗಮನವಾಗುತ್ತಿದ್ದಂತೆಯೇ ಅವರೆಲ್ಲರ ಗಮನ ತಾರೆಯ ಕಡೆ ಹರಿಯಿತು, ಕೋಪ ಬರದಿರುತ್ತದೆಯೇ ಕೋಣಗಳಿಗೆ? ಜೋಕ್ಸ್ ಅಪಾರ್ಟ್, ಪೂಜಾ ಹೆಗ್ಡೆ ಆಗಮನ ಅರಮನೆ ಮೈದಾನದಲ್ಲಿ ಮಿಂಚು ಹರಿಸಿದ್ದು ಸುಳ್ಳಲ್ಲ. ತುಳುನಾಡಿನ ಸುಂದರಿ ಹುಟ್ಟಿ ಬೆಳೆದಿದ್ದು ಮುಂಬೈನಲ್ಲಿ, ಹಾಗಾಗಿ, ಅವರು ತುಳು ಕಷ್ಟಪಟ್ಟು ಮಾತಾಡುತ್ತ್ತಾರೆ ಆದರೆ ಕನ್ನಡ ಸ್ವಲ್ಪವೂ ಬಾರದು! ಹಿಂದಿ ಇಂಗ್ಲಿಷ್ ಮತ್ತು ತೆಲುಗು ನಿರರ್ಗಳವಾಗಿ ಮಾತಾಡುತ್ತಾರಂತೆ!
ಬೆಂಗಳೂರು ಕಂಬಳ ಆಯೋಜಕರಲ್ಲಿ ಕೆಲವರು ಪೂಜಾಗೆ ಸಂಬಂಧಿಕರು. ಹಸಿರು ಸೀರೆಯಲ್ಲಿ ಬಹಳ ಮುದ್ದಾಗಿ ಕಾಣುತ್ತಿದ್ದ ನೀಳಕಾಯದ ಬೆಡಗಿ ಟಾಲಿವುಡ್ ಮತ್ತು ಕೋಲಿವುಡ್ ನಲ್ಲಿ ಸೂಪರ್ ಸ್ಟಾರಿಣಿ, ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ನಲ್ಲಿ ಭಯಂಕರ ಬ್ಯೂಸಿಯಾಗಿದ್ದಾರೆ ಮಾರಾಯ್ರೇ. ಬಿಗ್ ಬಿ ಅಮಿತಾಬ್ ಬಚ್ಚನ್ ಜೊತೆ ಜಾಹೀರಾತುಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ನಿಮಗೆ ಗೊತ್ತಿದೆ ತಾನೇ ಯೆ ನಾಚ್ತಿ ಬಹುತ್ ಅಚ್ಛಾ ಅಂತ ಆ್ಯಡ್ ಒಂದರಲ್ಲಿ ಅಮಿತಾಬ್ ಹೇಳೋದು!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ