AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಕಂಬಳ 2ನೇ ದಿನ: ನಟ ದರ್ಶನ ಭಾಗಿ ಸಾಧ್ಯತೆ, ಅರ್ಜುನ್ ​ಜನ್ಯರಿಂದ ಸಂಗೀತ ರಸ ಸಂಜೆ

Bengaluru Kambala: ಬೆಂಗಳೂರು ಕಂಬಳ ಬೆಳ್ಳಗ್ಗೆಯಿಂದ ಆರಂಭವಾಗಿ ಮಧ್ಯರಾತ್ರಿಯವರೆಗೂ ನಡೆಯಲಿದೆ. ರವಿವಾರ ಕಡೆಯ ದಿನವಾದ್ದರಿಂದ ಲಕ್ಷಂತರ ಸಂಖ್ಯೆಯಲ್ಲಿ ಜನರು ಬರಲಿದ್ದು, ಪ್ಯಾಲೇಸ್ ಗ್ರೌಂಡ್ ಸುತ್ತ-ಮುತ್ತ ಟ್ರಾಫಿಕ್ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಬೆಂಗಳೂರು ಕಂಬಳ ವೀಕ್ಷಣೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ, ತೆಲುಗು ನಟಿ ಅನುಷ್ಕಾ ಶೆಟ್ಟಿ ಬರುವ ಸಾಧ್ಯತೆ ಇದೆ.

ಬೆಂಗಳೂರು ಕಂಬಳ 2ನೇ ದಿನ: ನಟ ದರ್ಶನ ಭಾಗಿ ಸಾಧ್ಯತೆ, ಅರ್ಜುನ್ ​ಜನ್ಯರಿಂದ ಸಂಗೀತ ರಸ ಸಂಜೆ
ಬೆಂಗಳೂರು ಕಂಬಳ
Poornima Agali Nagaraj
| Edited By: |

Updated on:Nov 26, 2023 | 9:16 AM

Share

ಬೆಂಗಳೂರು ನ.26: ರಾಜಧಾನಿ, ಸಿಲಿಕಾನ್​ ಸಿಟಿ ಬೆಂಗಳೂರಿನ (Bengaluru) ಅರಮನೆ ಮೈದಾನದಲ್ಲಿ ತುಳುನಾಡಿನ (Tulunadu) ವೈಭವ ತೆರೆದುಕೊಂಡಿದೆ. ಇದೇ ನಗರದಲ್ಲಿ ಮೊದಲ ಬಾರಿಗೆ ಕಂಬಳ ಪಂದ್ಯ ನಡೆಯುತ್ತಿದೆ. “ಬೆಂಗಳೂರು ಕಂಬಳ (Bengaluru Kambala) ನಮ್ಮ ಕಂಬಳ”ಕ್ಕೆ ಶನಿವಾರ (ನ.25) ಅದ್ಧೂರಿಯಾಗಿ ಚಾಲನೆ ನೀಡಲಾಯಿತು. ಮೊದಲ ದಿನ ಕರಾವಳಿ ಕರ್ನಾಟಕದ ಆಹಾರ, ಸಂಸ್ಕೃತಿ ಜನರನ್ನು ಆಕರ್ಷಿಸಿತು. ಶನಿವಾರ ಬೆಳಿಗ್ಗೆಯಿಂದ ಆರಂಭವಾದ ಕಂಬಳ ಪ್ಯಂದಾವಳಿಗಳು ಮಧ್ಯರಾತ್ರಿವರೆಗು ನಡೆದವು. ಕೊನೆಯ ಮತ್ತು ಎರಡನೇ ದಿನವಾದ ಇಂದು (ನ.26) ಬೆಂಗಳೂರು ಕಂಬಳ ಹಲವು ವಿಶೇಷತೆಗಳಿಂದ ಕೂಡಿದೆ. ಇಲ್ಲಿದೆ ಮಾಹಿತಿ…

ಕಂಬಳ ಬೆಳ್ಳಗ್ಗೆಯಿಂದ ಆರಂಭವಾಗಿ ಮಧ್ಯರಾತ್ರಿಯವರೆಗೂ ನಡೆಯಲಿದೆ. ರವಿವಾರ ಕಡೆಯ ದಿನವಾದ್ದರಿಂದ ಲಕ್ಷಂತರ ಸಂಖ್ಯೆಯಲ್ಲಿ ಜನರು ಬರಲಿದ್ದು, ಪ್ಯಾಲೇಸ್ ಗ್ರೌಂಡ್ ಸುತ್ತ-ಮುತ್ತ ಟ್ರಾಫಿಕ್ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಬೆಂಗಳೂರು ಕಂಬಳ ವೀಕ್ಷಣೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ, ತೆಲುಗು ನಟಿ ಅನುಷ್ಕಾ ಶೆಟ್ಟಿ ಬರುವ ಸಾಧ್ಯತೆ ಇದೆ.

ಇದನ್ನೂ ಓದಿ: Bengaluru Kambala: ಬೆಂಗಳೂರು ಕಂಬಳದ ಶನಿವಾರದ ಝಲಕ್ ಫೋಟೋಗಳಲ್ಲಿ ನೋಡಿ

ಕಂಬಳವನ್ನು ಕಣ್ತುಂಬಿಕೊಳ್ಳಲು ಇವತ್ತು ಕೂಡ ಘಟಾನುಘಟಿ ರಾಜಕೀಯ ನಾಯಕರು ಬರುತ್ತಿದ್ದಾರೆ. ಕಂಬಳದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಬೆಳಿಗ್ಗೆ ಸುಮಾರು 10 ಗಂಟೆಗೆ ಸಭಾ ಕಾರ್ಯಕ್ರಮ ಆರಂಭವಾಗಲಿದೆ. ಕಾರ್ಯಕ್ರಮದಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಸೇರಿದಂತೆ ಇನ್ನೂ ಅನೇಕ ಹಿರಿಯ ರಾಜಕಾರಣಿಗಳು, ಅಧಿಕಾರಿಗಳು ಭಾಗಿಯಾಗುವ ಸಾಧ್ಯತೆ ಇದೆ.

ಮಧ್ಯಾಹ್ನ 1 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ನವದೆಹಲಿ ಎನ್​​ಸಿಸಿಎಫ್​ ಅಧ್ಯಕ್ಷ ವಿಶಾಲ್ ಸಿಂಗ್ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗುವ ಸಾಧ್ಯತೆ ಇದೆ. ಸಾಧಕ ಕುಸ್ತಿಪಟುಗಳಿಗೆ ಕಂಬಳ ಸಮಿತಿಯ ವತಿಯಿಂದ ಸನ್ಮಾನ ಮಾಡಲಾಗುತ್ತದೆ. ಇಂದು ಸಂಜೆ 4 ಗಂಟೆಗೆ ಕಂಬಳ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಗುತ್ತದೆ. ನಂತರ ಸಮಾರೋಪ ಸಮಾರಂಭ ನಡೆಯಲಿದೆ.

ವೇದಿಕೆ 2ರಲ್ಲಿ ನಡೆಯುವ ಕಾರ್ಯಕ್ರಮಗಳು

2ರಲ್ಲಿ ನಿರಂತರವಾಗಿ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಲಿವೆ. ಕರಂಗೋಲು ನೃತ್ಯ, ಗಂಡುಕಲೆ ಯಕ್ಷಗಾನ, ಆಟಿ ಕಳಂಜ, ಆಕ್ಸಿಜನ್ ಡ್ಯಾನ್ಸ್ ಟೀಂ, ಮಂಕಾಳಿ ನಲಿಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಸಂಜೆ 7ರಿಂದ ಸೆಲೆಬ್ರಿಟಿಗಳ ಸಂಗೀತ ಸಂಜೆ ಆರಂಭವಾಗುತ್ತದೆ. ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ​ಜನ್ಯ ಅವರಿಂದ ಸಂಗೀತ ರಸ ಸಂಜೆ ನಡೆಯಲಿದೆ. ಬಳಿಕ ಇಂದು ನಾಗರಾಜ್ ಅವರ ಮ್ಯೂಸಿಕಲ್ ಪ್ರೋಗ್ರಾಂ, ಇದಾದ ಮೇಲೆ ಖ್ಯಾತ ಗಾಯಕಿ ಶಮಿತಾ ಮಲ್ನಾಡ್ ಅವರಿಂದ ಕೂಡ ಸಂಗೀತ ಕಾರ್ಯಕ್ರಮ ಜರುಗಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:14 am, Sun, 26 November 23