Bengaluru Kambala: ತಡರಾತ್ರಿವರೆಗೂ ಮುಂದುವರಿದ ಬೆಂಗಳೂರು ಕಂಬಳ, ಟೈ ಬ್ರೇಕರ್ ಕೋಣಗಳ ನಡುವೆ ಇಂದು ಎರಡನೇ ಸುತ್ತಿನ ಜಿದ್ದಾಜಿದ್ದಿ
ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಬೆಂಗಳೂರು ಕಂಬಳದ ಮೊದಲ ದಿನವೇ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ತಡರಾತ್ರಿ 12 ಗಂಟೆ ಬಳಿಕವೂ ಕೋಣಗಳ ಓಟದ ಸ್ಪರ್ಧೆ ನಡೆದಿದ್ದು, ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ಮೊದಲ ಸುತ್ತಿನಲ್ಲಿ ಟೈ ಬ್ರೇಕರ್ ಆದ ಕೋಣಗಳು ಎರಡನೇ ಸುತ್ತಿಗೆ ಸಜ್ಜಾಗುತ್ತಿವೆ.
ಬೆಂಗಳೂರು, ನ.26: ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಬೆಂಗಳೂರು ಕಂಬಳದ (Bengaluru Kambala) ಮೊದಲ ದಿನವೇ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ತಡರಾತ್ರಿ 12 ಗಂಟೆ ಬಳಿಕವೂ ಕೋಣಗಳ ಓಟದ ಸ್ಪರ್ಧೆ ನಡೆದಿದ್ದು, ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ.
ಮೊದಲ ಬಾರಿಗೆ ಬೆಂಗಳೂರಿನಲ್ಲಿ ಆಯೋಜಿಸಿದ ಕರಾವಳಿ ಭಾಗದ ಕಂಬಳವನ್ನು ತಡರಾತ್ರಿ 10 ಗಂಟೆವರೆಗೆ 1.60 ಲಕ್ಷಕ್ಕೂ ಅಧಿಕ ಜನರು ವೀಕ್ಷಣೆ ಮಾಡಿದ್ದಾರೆ. ರಾತ್ರಿ 12ಗಂಟೆ ಬಳಿಕವು ಕಂಬಳ ವೀಕ್ಷಣೆ ಮಾಡಿದ್ದಾರೆ. ಇಂದು ಭಾನುವಾರವಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಮಿಸುವ ನಿರೀಕ್ಷಣೆಯಲ್ಲಿ ಕಂಬಳ ಆಯೋಜಕರಿದ್ದಾರೆ.
ಇದನ್ನೂ ಓದಿ: Bengaluru Kambala: ಬೆಂಗಳೂರು ಕಂಬಳದ ಇಂದಿನ ಝಲಕ್ ಫೋಟೋಗಳಲ್ಲಿ ನೋಡಿ
ಕೋಣಗಳ ಓಟದ ವೀಕ್ಷಣೆಯ ಜೊತೆಗೆ ಮೈದಾನದಲ್ಲಿ ಹಾಕಿರುವ ಕರಾವಳಿಯ ಆಹಾರ ಮಳಿಗೆಗಳಲ್ಲಿ ಜನರು ಆಹಾರ ಸವಿಯುತ್ತಿದ್ದಾರೆ. ಸದ್ಯ, ನಿನ್ನೆ ಮೊದಲ ರೌಂಡ್ ಮುಗಿಸಿದ ಕೋಣಗಳು ಎರಡನೇ ಸುತ್ತಿಗೆ ರೆಡಿಯಾಗುತ್ತಿವೆ. ಮೊದಲ ಸುತ್ತಿನಲ್ಲಿ ಟೈ ಬ್ರೇಕರ್ ಆದ ಕೋಣಗಳ ನಡುವೆ ಇಂದು ಜಿದ್ದಾಜಿದ್ದಿ ನಡೆಯಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ