Bengaluru Kambala: ಬೆಂಗಳೂರು ಕಂಬಳದಲ್ಲಿ ಅಂಕದ ಕೋಳಿಗಳ ಲಕ್ಕಿ ಡ್ರಾ, ಯಾರಿಗುಂಟು.. ಯಾರಿಗಿಲ್ಲ..
ಬೆಂಗಳೂರು ನಗರದ ಅರಮನೆ ಮೈದಾನದಲ್ಲಿ ಬೆಂಗಳೂರು ಕಂಬಳ ನಡೆಯುತ್ತಿದ್ದು, ಇದನ್ನು ವೀಕ್ಷಣೆ ಮಾಡಲು ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದಾರೆ. ಮೈದಾನದಲ್ಲಿ ಕರಾವಳಿ ಭಾಗದ ವಸ್ತು ಪ್ರದರ್ಶನ, ಆಹಾರದ ಸ್ಟಾಲ್ಗಳು ಒಂದಡೆಯಾದರೆ, ಇನ್ನೊಂದೆಡೆ, ಅಂಕದ ಕೋಳಿಗಳ ಮಾರಾಟವೂ ನಡೆಯುತ್ತಿದೆ.
ಬೆಂಗಳೂರು, ನ.25: ನಗರದ ಅರಮನೆ ಮೈದಾನದಲ್ಲಿ ಬೆಂಗಳೂರು ಕಂಬಳ (Bengaluru Kambala) ನಡೆಯುತ್ತಿದ್ದು, ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ ಜನರು ಕೋಣಗಳ ಓಟಗಳನ್ನು ವೀಕ್ಷಣೆ ಮಾಡುತ್ತಿದ್ದಾರೆ. ಒಂದೆಡೆ, ಕಂಬಳದ ಕೋಣಗಳನ್ನು ನೋಡಲು ಜನರು ಮುಗಿಬಿದ್ದರೆ, ಇನ್ನೊಂದೆಡೆ ಅಂಕದ ಕೋಳಿಗಳ ಖರೀದಿಗೂ ಜನರು ಮುಗಿಬೀಳುತ್ತಿದ್ದಾರೆ.
ಕರಾವಳಿ ಭಾಗದಲ್ಲಿ ಕೋಳಿ ಅಂಕ ಆಟ ಹೆಚ್ಚಾಗಿ ನಡೆಯುತ್ತಿರುತ್ತದೆ. ಇಂತಹ ಕೋಳಿಗಳಿಗೆ ಬಹು ಬೇಡಿಕೆ ಇದ್ದು, ದುಬಾರಿಯೂ ಹೌದು. ಈ ಕೋಳಿಗಳನ್ನು ಈಗ ಬೆಂಗಳೂರಿನಲ್ಲೂ ಕಾಣಬಹುದು. ಬೆಂಗಳೂರು ಕಂಬಳದಲ್ಲಿ ಕೋಣಗಳನ್ನು ನೋಡುವ ಕ್ರೇಜ್ ಒಂದು ಕಡೆಯಾದರೆ, ಮತ್ತೊಂದೆಡೆ ಅಂಕದ ಕೋಳಿಗಳಿಗೂ ಗ್ರಾಹಕರಿಂದ ಬೇಡಿಕೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: Bengaluru Kambala: ಬೆಂಗಳೂರು ಕಂಬಳ ನೋಡಲು ಬರುವವರಿಗೆ ಉಚಿತ ಊಟದ ವ್ಯವಸ್ಥೆ
ಲಕ್ಕಿ ಡ್ರಾ ಮೂಲಕ ಅಂಕದ ಕೋಳಿಗಳನ್ನ ಮೈದಾನದಲ್ಲಿ ಗ್ರಾಹಕರು ಖರೀದಿಸುತ್ತಿದ್ದಾರೆ. ಅಂಕದ ಕೋಳಿಗಳನ್ನ ಮಾರಾಟ ಮಾಡಲೆಂದೇ ವ್ಯಾಪಾರಸ್ಥರು ಒಟ್ಟು 40 ಅಂಕದ ಕೋಳಿಗಳನ್ನ ತಂದಿದ್ದು, ಲಕ್ಕಿ ಡ್ರಾದಲ್ಲಿ ಗೆದ್ದವರಿಗೆ ಉಚಿತವಾಗಿ ನೀಡಲಾಗುತ್ತಿದೆ. ಈ ಅಂಕದ ಕೋಳಿಗಳಿಗೆ 3 ರಿಂದ 5 ಸಾವಿರ ರೂಪಾಯಿ ಇರುತ್ತದೆ. ಆದರೆ ಇಲ್ಲಿ 130 ರೂಪಾಯಿಗೆ ಒಂದು ಕೂಪನ್ ಖರೀದಿಸಬೇಕು ಹಾಗೂ ಅದೃಷ್ಟ ಯಾರಿಗೆ ಇರುತ್ತೋ ಅವರಿಗೆ ಅಂಕದ ಕೋಳಿ ಸಿಗಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:42 pm, Sat, 25 November 23