‘ಗಟ್ಟಿಮೇಳ’ ಧಾರಾವಾಹಿಯ ಅಂತಿಮ ಸಂಚಿಕೆಯ ಪ್ರಚಾರಕ್ಕೆ ಜೀ ಕನ್ನಡ ಸಿದ್ಧತೆ

ಕಳೆದ ಕೆಲ ತಿಂಗಳಿಂದ ‘ಗಟ್ಟಿಮೇಳ’ ಧಾರಾವಾಹಿ ಪೂರ್ಣಗೊಳ್ಳುವ ಬಗ್ಗೆ ಸುದ್ದಿ ಹರಿದಾಡುತ್ತಲೇ ಇತ್ತು. ಈಗ ಕಥೆ ಅಂತಿಮ ಹಂತ ತಲುಪಿದೆ. ಈ ಜಾಗದಲ್ಲಿ ಹೊಸ ಧಾರಾವಾಹಿ ಪ್ರಸಾರ ಕಾಣಲಿದೆ.

‘ಗಟ್ಟಿಮೇಳ’ ಧಾರಾವಾಹಿಯ ಅಂತಿಮ ಸಂಚಿಕೆಯ ಪ್ರಚಾರಕ್ಕೆ ಜೀ ಕನ್ನಡ ಸಿದ್ಧತೆ
ನಿಶಾ
Follow us
ರಾಜೇಶ್ ದುಗ್ಗುಮನೆ
|

Updated on: Dec 28, 2023 | 12:26 PM

‘ಗಟ್ಟಿಮೇಳ’ ಧಾರಾವಾಹಿ (Gattimela Serial) ಸಾವಿರಾರು ಸಂಚಿಕೆಗಳನ್ನು ಪೂರ್ಣಗೊಳಿಸಿದೆ. ಆದಾಗ್ಯೂ ಟಿಆರ್​ಪಿಯಲ್ಲಿ ಈ ಧಾರಾವಾಹಿ ಹಿಂದೆ ಬಿದ್ದಿಲ್ಲ. ಟಿಆರ್​ಪಿ ಲಿಸ್ಟ್​​ನಲ್ಲಿ ಎರಡು ಅಥವಾ ಮೂರನೇ ಸ್ಥಾನದಲ್ಲಿ ಈ ಧಾರಾವಾಹಿ ಇರುತ್ತಿತ್ತು. ಆರಂಭ ಆದಮೇಲೆ ಕೊನೆ ಆಗಲೇಬೇಕು. ಅದೇ ರೀತಿ 2019ರಲ್ಲಿ ಪ್ರಸಾರ ಆರಂಭಿಸಿದ ‘ಗಟ್ಟಿಮೇಳ’ ಧಾರಾವಾಹಿಯೂ ಕೊನೆ ಆಗುತ್ತಿದೆ.  ಜನವರಿ 1ರಿಂದ ಅಂತಿಮ ಸಂಚಿಕೆಗಳ ಪ್ರಸಾರ ಆರಂಭ ಆಗಲಿದೆ. ಜನವರಿ 5ರಂದು (ಶುಕ್ರವಾರ) ಧಾರಾವಾಹಿ ಕೊನೆಗೊಳ್ಳಲಿದೆ.

ರಕ್ಷ್ ಹಾಗೂ ನಿಶಾ ರವಿಕೃಷ್ಣನ್ ಅವರು ‘ಗಟ್ಟಿಮೇಳ ಧಾರಾವಾಹಿಯಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ಈ ಧಾರಾವಾಹಿ ಜನರಿಗೆ ಸಾಕಷ್ಟು ಇಷ್ಟ ಆಗಿದೆ. ಇದು ಅನೇಕರ ಫೇವರಿಟ್ ಧಾರಾವಾಹಿ ಆಗಿದೆ. ಕಳೆದ ಕೆಲ ತಿಂಗಳಿಂದ ಧಾರಾವಾಹಿ ಪೂರ್ಣಗೊಳ್ಳುವ ಬಗ್ಗೆ ಸುದ್ದಿ ಹರಿದಾಡುತ್ತಲೇ ಇತ್ತು. ಈಗ ಕಥೆ ಅಂತಿಮ ಹಂತ ತಲುಪಿದೆ. ಈ ಜಾಗದಲ್ಲಿ ಹೊಸ ಧಾರಾವಾಹಿ ಪ್ರಸಾರ ಕಾಣಲಿದೆ. ಈ ವಿಚಾರ ಕೇಳಿ ‘ಗಟ್ಟಿಮೇಳ’ ಧಾರಾವಾಹಿ ವೀಕ್ಷರಿಗೆ ಬೇಸರ ಆಗಿದೆ.

2019ರ ಮಾರ್ಚ್ ತಿಂಗಳಲ್ಲಿ ‘ಗಟ್ಟಿಮೇಳ’ ಧಾರಾವಾಹಿ ಪ್ರಸಾರ ಆರಂಭಿಸಿತು. ಈ ಧಾರಾವಾಹಿ 1200 ಎಪಿಸೋಡ್ ಪೂರ್ಣಗೊಳಿಸಿದೆ. ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಈ ಧಾರಾವಾಹಿ ಒಳ್ಳೆಯ ಟಿಆರ್​ಪಿ ಪಡೆದುಕೊಳ್ಳುತ್ತಿದೆ. ಈಗ ಧಾರಾವಾಹಿ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ನಾಲ್ಕು ಮುಕ್ಕಾಲು ವರ್ಷಗಳ ಕಾಲ ಈ ಧಾರಾವಾಹಿ ಪ್ರಸಾರ ಕಂಡಿದೆ.

ಇದನ್ನೂ ಓದಿ: Exclusive: ಶೀಘ್ರವೇ ಪೂರ್ಣಗೊಳ್ಳಲಿದೆ ‘ಗಟ್ಟಿಮೇಳ’; ಹೊಸ ಧಾರಾವಾಹಿ ಶೂಟ್​ಗೆ ನಡೆದಿದೆ ಸಿದ್ಧತೆ

‘ಗಟ್ಟಿಮೇಳ’ ಧಾರಾವಾಹಿ ನಟ ರಕ್ಷ್ ರಾಮ್ ಅವರು ಹಿರಿತೆರೆಗೆ ಕಾಲಿಡುತ್ತಿದ್ದಾರೆ. ಅವರು ‘ಬರ್ಮ’ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ‘ಬಹದ್ದೂರ್’, ‘ಭರ್ಜರಿ’ ನಿರ್ದೇಶಕ ಚೇತನ್ ಕುಮಾರ್ ಅವರು ‘ಬರ್ಮ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾ ಬಗ್ಗೆ ಈಗಲೇ ನಿರೀಕ್ಷೆ ಸೃಷ್ಟಿ ಆಗಿದೆ. ‘ಗಟ್ಟಿಮೇಳ’ ಬಳಿಕ ಈ ಸಿನಿಮಾದ ಕೆಲಸದಲ್ಲಿ ಅವರು ಬ್ಯುಸಿ ಆಗಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್