ವಿನಯ್ಗೆ ವಿಶೇಷ ಅಡ್ವಾಂಟೇಜ್ ಕೊಟ್ಟ ಬಿಗ್ ಬಾಸ್; ಸಿಗಲಿದೆ ಬಯಸಿದ ಊಟ
ಬಿಗ್ ಬಾಸ್ ವಿನಯ್ಗೆ ಸೀಕ್ರೆಟ್ ಟಾಸ್ಕ್ ನೀಡಿದರು. ಇದನ್ನು ಯಶಸ್ವಿಯಾಗಿ ನಿರ್ವಹಿಸುವುದಾದರೆ ವಿನಯ್ಗೆ ಬಯಸಿದ ಊಟ ಸಿಗಲಿದೆ. ಮೊದಲ ದಿನ ಅವರು ಜಾಮೂನನ್ನು ಕೇಳಿದ್ದಾರೆ.
ವಿನಯ್ ಗೌಡ ಅವರು ಫಿನಾಲೆ ವಾರದ ಸಮೀಪದಲ್ಲಿದ್ದಾರೆ. ಅವರು ಸ್ಟ್ರಾಂಗ್ ಸ್ಪರ್ಧಿ ಆಗಿ ಗುರುತಿಸಿಕೊಂಡಿದ್ದಾರೆ. ಫಿನಾಲೆ ತಲುಪಿ ಕಪ್ ಎತ್ತಬೇಕು ಎನ್ನುವ ಕನಸನ್ನು ಅವರು ಹೊಂದಿದ್ದಾರೆ. ಈ ಮಧ್ಯೆ ಬಿಗ್ ಬಾಸ್ (Bigg Boss) ಮನೆಯಲ್ಲಿ ವಿನಯ್ ಗೌಡಗೆ ವಿಶೇಷ ಅಡ್ವಾಂಟೇಜ್ ಸಿಕ್ಕಿದೆ. ಇದರಿಂದ ಬಯಸಿದ ಊಟ ಅವರಿಗೆ ಸಿಗಲಿದೆ. ಬಿಗ್ ಬಾಸ್ ವಿನಯ್ಗೆ ಸೀಕ್ರೆಟ್ ಟಾಸ್ಕ್ ಕೊಟ್ಟರು. ಇದನ್ನು ಯಶಸ್ವಿಯಾಗಿ ನಿರ್ವಹಿಸುವುದಾದರೆ ವಿನಯ್ಗೆ ಬಯಸಿದ ಊಟ ಸಿಗುತ್ತಿದೆ. ಮೊದಲ ದಿನ ಅವರು ಜಾಮೂನನ್ನು ಕೇಳಿದರು.
ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳಿಗೆ ಮೂರು ಪ್ರಶ್ನೆಗಳನ್ನು ಕೇಳಿದರು. ಇದಕ್ಕೆ ಮನೆ ಮಂದಿ ಕನ್ಫೆಷನ್ರೂಂಗೆ ಬಂದು ಉತ್ತರ ನೀಡಬೇಕು. ಇದಕ್ಕೆ ಎಲ್ಲರೂ ಅವರವರ ಉತ್ತರ ನೀಡಿದರು. ಈ ಮಧ್ಯೆ ವಿನಯ್ ಕನ್ಫೆಷನ್ ರೂಂಗೆ ಬಂದಾಗ ಬಿಗ್ ಬಾಸ್ ಅವರಿಗೆ ಒಂದು ಸೀಕ್ರೆಟ್ ಟಾಸ್ಕ್ ನೀಡಿದರು. ಈ ಟಾಸ್ಕ್ನ ಅನುಸಾರ ವಿನಯ್ ಸೂಚಿಸುವ ಹೆಸರು ಮನೆಯವರ ಒಮ್ಮತಕ್ಕೆ ವಿರುದ್ಧವಾಗಿರಬೇಕು. ವಿನಯ್ ನೀಡುವ ಹೆಸರೇ ಬಹುಮತ ಎಂದು ಬಿಗ್ ಬಾಸ್ ಪರಿಗಣಿಸಲಾಗುತ್ತದೆ.
ಯಾರ ಮೇಕಪ್ ಕಿಟ್ ಹಿಂಪಡಯಬೇಕು ಎಂದು ಬಿಗ್ ಬಾಸ್ ಪ್ರಶ್ನಿಸಿದರು. ಇದಕ್ಕೆ ತನಿಷಾ ಹೆಸರನ್ನು ತೆಗೆದುಕೊಂಡರು ವಿನಯ್. ಯಾರು ಅಡುಗೆ ಮಾಡಬೇಕು ಎನ್ನುವ ವಿಚಾರದಲ್ಲಿ ತನಿಷಾ ಹೆಸರನ್ನು ಎಲ್ಲರೂ ಸೂಚಿಸಿದರು. ಆದರೆ, ವರ್ತೂರು ಸಂತೋಷ್ ಹೆಸರನ್ನು ವಿನಯ್ ತೆಗೆದುಕೊಂಡರು. ಇನ್ನು, ಮನೆಯಲ್ಲಿ ಯಾವ ಪುರುಷ ಸದಸ್ಯ ಹೆಣ್ಣಿನ ವೇಷ ಧರಿಸಿ ಸುತ್ತಾಡಬೇಕು ಎಂದು ಬಿಗ್ ಬಾಸ್ ಕೇಳಿದರು. ಬಹುತೇಕ ಸದಸ್ಯರು ವಿನಯ್ ಹೆಸರು ಹೇಳಿದರು. ಆದರೆ ವಿನಯ್ ಅವರು ಕಾರ್ತಿಕ್ ಹೆಸರು ಸೂಚಿಸಿದರು. ಇದರಿಂದ ಕಾರ್ತಿಕ್ ಹೆಣ್ಣಿನಂತೆ ವೇಷ ಧರಿಸಿದರು. ಒಂದು ವಾರಗಳ ಕಾಲ ರಾತ್ರಿ ಊಟಕ್ಕೆ ವಿನಯ್ ಬಯಸಿದ ತಿಂಡಿ ಸಿಗಲಿದೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಎಲಿಮಿನೇಟ್ ಆದ ಸ್ಪರ್ಧಿಗಳ ರೀ ಎಂಟ್ರಿ; ನಮ್ರತಾಗೆ ಕೈಮುಗಿದ ಸ್ನೇಹಿತ್
ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ ಲೈವ್ ನೋಡಬಹುದು. ಇನ್ನು ಕೆಲವೇ ದಿನಗಳಲ್ಲಿ ಬಿಗ್ ಬಾಸ್ ಫಿನಾಲೆ ನಡೆಯಲಿದೆ. ಯಾರು ಕಪ್ ಎತ್ತುತ್ತಾರೆ ಅನ್ನೋ ಪ್ರಶ್ನೆ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:43 am, Tue, 16 January 24