ತನಿಷಾ, ಕಾರ್ತಿಕ್, ಪಂತುಗೆ ಪೀಕಲಾಟ, ವಿನಯ್​ಗೆ ಖುಷಿಯೋ ಖುಷಿ

Bigg Boss: ಮನೆ ಮಂದಿಗೆ ಪೀಕಲಾಟ ತಂದಿಟ್ಟು ವಿನಯ್ ಮಾತ್ರ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಬಿಗ್​ಬಾಸ್ ಕೊಟ್ಟ ಸೀಕ್ರೆಟ್ ಟಾಸ್ಕ್​ನಿಂದ ವಿನಯ್​ಗೆ ಖುಷಿಯೋ ಖುಷಿ.

ತನಿಷಾ, ಕಾರ್ತಿಕ್, ಪಂತುಗೆ ಪೀಕಲಾಟ, ವಿನಯ್​ಗೆ ಖುಷಿಯೋ ಖುಷಿ
Follow us
ಮಂಜುನಾಥ ಸಿ.
|

Updated on: Jan 15, 2024 | 11:49 PM

ಬಿಗ್​ಬಾಸ್ (BiggBoss) ಮನೆಯಲ್ಲಿ ಸಂಕ್ರಾಂತಿ ದಿನ ಸ್ಪರ್ಧಿಗಳು ಹಳೆಯ ದ್ವೇಷ, ಕೋಪ ಮರೆತು ಪರಸ್ಪರರಿಗೆ ಎಳ್ಳು ಬೆಲ್ಲ ತಿನ್ನಿಸಿ ಹೊಸ ಸ್ನೇಹಕ್ಕೆ ನಾಂದಿ ಹಾಡಿದರು. ಆದರೆ ಆ ನಂತರ ಬಿಗ್​ಬಾಸ್ ನೀಡಿದ ಒಂದು ಆಕ್ಟಿವಿಟಿಯಲ್ಲಿ ಮನೆಯ ಕೆಲ ಮಂದಿ ಪೀಕಲಾಟಕ್ಕೆ ಸಿಲುಕಿದರೆ ವಿನಯ್ ಮಾತ್ರ ಸಖತ್ ಮಜಾ ಮಾಡಿದರು. ವಿನಯ್​ಗೆ ವಿಶೇಷ ಅಧಿಕಾರವೊಂದನ್ನು ಬಿಗ್​ಬಾಸ್ ನೀಡಿದರು, ಆ ಅಧಿಕಾರವನ್ನು ಸರಿಯಾಗಿಯೇ ಬಳಸಿಕೊಂಡರು ವಿನಯ್.

ಮನೆಗೆ ದಿನಸಿ ಕಳಿಸಬೇಕೆಂದರೆ ಬಿಗ್​ಬಾಸ್ ಕೇಳಿದ ಕೆಲವು ಪ್ರಶ್ನೆಗಳಿಗೆ ಸ್ಪರ್ಧಿಗಳು ಉತ್ತರ ನೀಡಬೇಕು ಎಂದರು. ಮನೆಯ ಸದಸ್ಯರು ಒಬ್ಬೊಬ್ಬರಾಗಿ ಸೀಕ್ರೆಟ್ ರೂಂಗೆ ಬಂದು ಉತ್ತರ ನೀಡಬೇಕು, ನೀಡಿರುವ ಉತ್ತರವನ್ನು ಮನೆಯ ಸದಸ್ಯರೊಟ್ಟಿಗೆ ಚರ್ಚಿಸಬಾರದು ಎಂಬ ಷರತ್ತು ಹಾಕಿದರು.

ಬಿಗ್​ಬಾಸ್​ನ ಮುಂದಿನ ಆದೇಶದ ವರೆಗೆ ಮನೆಯ ಯಾವ ಮಹಿಳಾ ಸದಸ್ಯೆ ಮೇಕಪ್ ಕಿಟ್ ಬಳಸಬಾರದು ಎಂದು ಬಿಗ್​ಬಾಸ್ ಕೇಳಿದರು. ಅದಕ್ಕೆ ಕೆಲವರು ತನಿಷಾ, ಕೆಲವರು ಸಂಗೀತಾ ಹೆಸರು ಹೇಳಿದರು. ಸ್ವತಃ ಸಂಗೀತಾ ಸಹ ಸಂಗೀತಾ ಹೆಸರನ್ನೇ ಹೇಳಿದರು. ಆದರೆ ವಿನಯ್​ ಬಂದಾಗ, ‘ನಿಮಗೆ ಸೀಕ್ರೆಟ್ ಟಾಸ್ಕ್ ಕೊಡುತ್ತಿದ್ದೇವೆ. ನೀವು ನೀಡಿದ ಉತ್ತರವನ್ನೇ ಬಹುಮತವೆಂದು ಮನೆಯ ಸದಸ್ಯರಿಗೆ ಹೇಳಲಾಗುತ್ತದೆ. ಅದಕ್ಕೆ ಬದಲಾಗಿ, ನಿಮಗೆ ಪ್ರತಿದಿನ ನೀವು ಕೇಳಿದ ಊಟ ಸಿಗಲಿದೆ’ ಎಂದರು. ಅದಕ್ಕೆ ಒಪ್ಪಿದ ವಿನಯ್, ತನಿಷಾರ ಮೇಕಪ್ ಕಿಟ್ ವಾಪಸ್ ನೀಡಬೇಕು ಎಂದರು.

ಇದನ್ನೂ ಓದಿ:ಬಿಗ್​ಬಾಸ್ ತಮಿಳು ವಿನ್ನರ್​ಗೆ ಸಿಕ್ಕ ಮೊತ್ತವೆಷ್ಟು? ರನ್ನರ್ ಅಪ್​ಗೆ ಸಿಕ್ಕಿದ್ದೆಷ್ಟು?

ತನಿಷಾ, ಅತ್ತು ಕರೆದು ತಮ್ಮ ಮೇಕಪ್ ಟಿಕ್ ಅನ್ನು ಬಿಗ್​ಬಾಸ್​ಗೆ ಮರಳಿಸಿದರು. ಅದಾದ ಬಳಿಕ ಮನೆಯ ಅಡುಗೆ ಕೆಲಸವನ್ನು ಮುಂದಿನ ಆದೇಶದ ವರೆಗೆ ಯಾರು ನಿರ್ವಹಿಸಬೇಕು ಎಂದು ಕೇಳಲಾಯ್ತು. ಆಗ ಬಹುತೇಕರ ಉತ್ತರ ತನಿಷಾ ಎಂದಾಗಿತ್ತು. ಆದರೆ ವಿನಯ್, ವರ್ತೂರು ಸಂತೋಷ್ ಎಂದರು. ಅದರಂತೆ ವರ್ತೂರು ಸಂತೋಷ್ ಎಂದು ಘೋಷಿಸಿದಾಗ ಮನೆಯ ಎಲ್ಲ ಸದಸ್ಯರಿಗೂ ಶಾಕ್ ಆಯ್ತು. ಸ್ವತಃ ವರ್ತೂರು ಸಹ ಶಾಕ್​ ಆಯ್ತು. ವರ್ತೂರು ಮಾಡಿದ ಅಡುಗೆ ತಿನ್ನವುದು ಹೇಗಪ್ಪ ಎಂದು ಮನೆ ಮಂದಿ ಚಿಂತೆಗೆ ಬಿದ್ದರು. ಆದರೆ ವಿನಯ್ ಮಾತ್ರ ಇದನ್ನೆಲ್ಲ ಎಂಜಾಯ್ ಮಾಡಿದರು.

ಮನೆಯಲ್ಲಿ ಯಾವ ಪುರುಷ ಸದಸ್ಯ ಹೆಣ್ಣಿನ ವೇಷ ಧರಿಸಿ ಓಡಾಡಬೇಕು ಎಂದು ಕೇಳಿದ ಪ್ರಶ್ನೆಗೆ ಮನೆಯ ಬಹುತೇಕ ಸದಸ್ಯರು ವಿನಯ್ ಹೆಸರು ಹೇಳಿದರು. ಆದರೆ ವಿನಯ್, ಕಾರ್ತಿಕ್ ಹೆಸರು ಹೇಳಿದರು. ಇದರಿಂದಾಗಿ ಕಾರ್ತಿಕ್ ಹೆಣ್ಣಿನಂತೆ ವೇಷ ಧರಿಸಿ ಓಡಾಡುವಂತಾಯ್ತು. ಬಿಗ್​ಬಾಸ್​ನ ಮುಂದಿನ ಆದೇಶ ಬರುವವರೆಗೆ ಇವರೆಲ್ಲರೂ ಈಗ ನೀಡಿರುವ ಆದೇಶ ಪಾಲಿಸಬೇಕಾಗಿದೆ. ಇದೆಲ್ಲವೂ ಬಹುಮತದ ಆದೇಶ ಅಲ್ಲ ಬದಲಿಗೆ ವಿನಯ್ ನೀಡಿದ ಆದೇಶ. ಇದಕ್ಕೆ ಬದಲಾಗಿ ಅವರಿಗೆ ದಿನನಿತ್ಯವೂ ಒಳ್ಳೊಳ್ಳೆ ಊಟ ಸಹ ಸಿಕ್ಕಿದೆ ಎಂದು ಗೊತ್ತಾದಾಗ ಮನೆ ಸದಸ್ಯರ ಪ್ರತಿಕ್ರಿಯೆ ಹೇಗಿರುತ್ತದೆ ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ