ಮದುವೆ ನಿರ್ಧಾರದ ಬಗ್ಗೆ ಬಿಗ್ ಬಾಸ್ ಮನೆಯಲ್ಲೇ ಕಣ್ಣೀರು ಹಾಕಿದ ಅಂಕಿತಾ ಲೋಖಂಡೆ

ವಿಕ್ಕಿ ಹಾಗೂ ಮನ್ನಾರಾ ಚೋಪ್ರಾ ಕ್ಲೋಸ್ ಆಗುತ್ತಿದ್ದಾರೆ ಎಂದು ಅಂಕಿತಾಗೆ ಅನಿಸಿದೆ. ಈ ವಿಚಾರವನ್ನು ಅಂಕಿತಾ ಅವರು ವಿಕ್ಕಿ ಬಳಿ ಪ್ರಶ್ನೆ ಮಾಡಿದ್ದಾರೆ. ಜೊತೆಗೆ ಮದುವೆ ನಿರ್ಧಾರಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ.

ಮದುವೆ ನಿರ್ಧಾರದ ಬಗ್ಗೆ ಬಿಗ್ ಬಾಸ್ ಮನೆಯಲ್ಲೇ ಕಣ್ಣೀರು ಹಾಕಿದ ಅಂಕಿತಾ ಲೋಖಂಡೆ
ವಿಕ್ಕಿ-ಅಂಕಿತಾ
Follow us
ರಾಜೇಶ್ ದುಗ್ಗುಮನೆ
|

Updated on: Jan 09, 2024 | 11:05 AM

ಹಿಂದಿ ‘ಬಿಗ್ ಬಾಸ್’ (Bigg Boss) ಮನೆಯಲ್ಲಿರುವ ಅಂಕಿತಾ ಲೋಖಂಡೆ ಹಾಗೂ ವಿಕ್ಕಿ ಜೈನ್ ದಂಪತಿ ಮಧ್ಯೆ ಯಾವುದೂ ಸರಿ ಇಲ್ಲ. ಇವರ ಸಂಬಂಧ ದಿನ ಕಳೆದಂತೆ ಹಳಸುತ್ತಲೇ ಇದೆ. ಈಗ ವಿಕ್ಕಿಯನ್ನು ಮದುವೆ ಆಗಿದ್ದಕ್ಕೆ ಅಂಕಿತಾಗೆ ವಿಷಾದ ಉಂಟಾಗಿದೆ. ಈ ಬಗ್ಗೆ ಅವರು ಬೇಸರ ಹೊರ ಹಾಕಿದ್ದಾರೆ. ಸದ್ಯ ಈ ಪ್ರೋಮೋ ವೈರಲ್ ಆಗುತ್ತಿದೆ. ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ಇಬ್ಬರೂ ವಿಚ್ಛೇದನ ಪಡೆದುಕೊಳ್ಳುತ್ತಾರೆಯೇ ಎನ್ನುವ ಪ್ರಶ್ನೆ ಮೂಡಿದೆ.

ವಿಕ್ಕಿ ಹಾಗೂ ಮನ್ನಾರಾ ಚೋಪ್ರಾ ಕ್ಲೋಸ್ ಆಗುತ್ತಿದ್ದಾರೆ ಎಂದು ಅಂಕಿತಾಗೆ ಅನಿಸಿದೆ. ಈ ವಿಚಾರವನ್ನು ಅಂಕಿತಾ ಅವರು ವಿಕ್ಕಿ ಬಳಿ ಪ್ರಶ್ನೆ ಮಾಡಿದ್ದಾರೆ. ‘ಮನ್ನಾರಾ ನಿನ್ನ ಜೀವನದಲ್ಲಿ ಬಂದಳು. ನೀನು ಅವಳನ್ನು ಇಷ್ಟಪಡೋಕೆ ಆರಂಭಿಸಿದೆ. ಅವಳ ಜೊತೆ ಮಾತನಾಡಿದರೆ ನಿನಗೆ ಖುಷಿ ಸಿಗುತ್ತದೆ ಅಲ್ಲವೇ? ಮುಂದುವರಿಸು’ ಎಂದು ವಿಕ್ಕಿಗೆ ಅಂಕಿತಾ ಹೇಳಿದರು. ಆದರೆ, ವಿಕ್ಕಿ ಇದನ್ನು ಅಲ್ಲಗಳೆದರು. ‘ನನ್ನನ್ನು ಗೆಳೆಯರಿಂದ ನೀನು ದೂರ ಮಾಡುತ್ತಿದ್ದೀಯಾ’ ಎಂದರು ವಿಕ್ಕಿ.

ಈ ವಿಚಾರದಲ್ಲಿ ಅಂಕಿತಾ ಹಾಗೂ ವಿಕ್ಕಿ ಮಧ್ಯೆ ಸಾಕಷ್ಟು ಕಿತ್ತಾಟ ನಡೆಯಿತು. ‘ವಿಕ್ಕಿ ಕೆನ್ನೆಗೆ ಹೊಡೆಯಬೇಕು ಅನಿಸುತ್ತಿದೆ’ ಎಂದರು ಅಂಕಿತಾ. ‘ಎಲ್ಲಾದರೂ ಹೋಗಿ ಶಿಕ್ಷಣ ಪಡೆದು ಬಾ’ ಎಂದು ಅಂಕಿತಾಗೆ ವಿಕ್ಕಿ ಹೇಳಿದ್ದಾರೆ. ಈ ವೇಳೆ ವಿಕ್ಕಿಯನ್ನು ಮದುವೆ ಆದ ನಿರ್ಧಾರದ ಬಗ್ಗೆ ಅಂಕಿತಾ ವಿಷಾದ ವ್ಯಕ್ತಪಡಿಸಿದ್ದಾರೆ.

ಸನಾ ರಾಯೀಸ್ ಜೊತೆ ವಿಕ್ಕಿ ಕೈ ಕೈ ಹಿಡಿದು ಓಡಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಚಾರದ ಬಗ್ಗೆಯೂ ಚರ್ಚೆ ನಡೆದಿದೆ. ಆಯೆಷಾ ಖಾನ್ ಅವರು ಈ ವಿಚಾರದ ಬಗ್ಗೆ ಎಲ್ಲರ ಜೊತೆ ಓಪನ್ ಆಗಿ ಮಾತನಾಡಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಮರಳಿದ ಬಳಿಕ ಮೌನಕ್ಕೆ ಶರಣಾದ ಪ್ರತಾಪ್; ಮೊದಲು ಮಾಡಿದ್ದೇನು?

ಸಮರ್ಥ್ ಅವರಿಗೆ ಕೆನ್ನೆಗೆ ಹೊಡೆದ ಪ್ರಕರಣದಲ್ಲಿ ಅಭಿಷೇಕ್ ಮನೆಯಿಂದ ಔಟ್ ಆಗಿದ್ದರು. ಕಳೆದ ವಿಕೆಂಡ್ ಎಪಿಸೋಡ್​ನಲ್ಲಿ ಅವರು ದೊಡ್ಮನೆಗೆ ಮರಳಿದ್ದಾರೆ. ಇದರಿಂದ ಸ್ಪರ್ಧೆ ಜೋರಾಗಿದೆ. ಶೀಘ್ರವೇ ಬಿಗ್ ಬಾಸ್ ಫಿನಾಲೆ ನಡೆಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ