Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಕಿ ಬಂತೋ: ತನಿಷಾ ಕುಪ್ಪಂಡ ಮೇಲಿನ ಅಭಿಮಾನಕ್ಕಾಗಿ ಒಂದು ಹೊಸ ಹಾಡು

‘ಬೆಂಕಿ ಬಂತೋ..’ ಹಾಡಿನ ಮೂಲಕ ತನಿಷಾ ಕುಪ್ಪಂಡ ಅವರಿಗೆ ಫ್ಯಾನ್ಸ್​ ಬೆಂಬಲ ನೀಡುತ್ತಿದ್ದಾರೆ. ಅವರೇ ಟ್ರೋಫಿ ಗೆಲ್ಲಬೇಕು ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ. ಈ ಹಾಡಿಗೆ ಶಮಂತ್ ನಾಗರಾಜ್ ಅವರು ಸಾಹಿತ್ಯ ಬರೆದಿದ್ದಾರೆ. ಖ್ಯಾತ ಗಾಯಕ ಶಶಾಂಕ್ ಶೇಷಗಿರಿ ಅವರು ಧ್ವನಿ ನೀಡಿದ್ದಾರೆ. ಸಂಗೀತ ನಿರ್ದೇಶನ ಕೂಡ ಅವರದ್ದೇ.

ಬೆಂಕಿ ಬಂತೋ: ತನಿಷಾ ಕುಪ್ಪಂಡ ಮೇಲಿನ ಅಭಿಮಾನಕ್ಕಾಗಿ ಒಂದು ಹೊಸ ಹಾಡು
ತನಿಷಾ ಕುಪ್ಪಂಡ
Follow us
ಮದನ್​ ಕುಮಾರ್​
|

Updated on: Jan 09, 2024 | 1:17 PM

‘ಮಂಗಳಗೌರಿ’ ಧಾರಾವಾಹಿಯಲ್ಲಿ ವಿಲನ್​ ಪಾತ್ರ ಮಾಡಿ ಜನಪ್ರಿಯತೆ ಪಡೆದವರು ನಟಿ ತನಿಷಾ ಕುಪ್ಪಂಡ. ನಂತರ ಅವರು ಹಿರಿತೆರೆಗೆ ಕಾಲಿಟ್ಟರು. ‘ಪೆಂಟಗನ್’ ಸಿನಿಮಾದಲ್ಲಿ ಅವರು ಮಾಡಿದ ಪಾತ್ರ ಗಮನ ಸೆಳೆಯಿತು. ಬಳಿಕ ಕೋಮಲ್ ನಟನೆಯ ‘ಉಂಡೆನಾಮ’ ಸಿನಿಮಾದಲ್ಲೂ ತನಿಷಾ ಕುಪ್ಪಂಡ (Tanisha Kuppanda) ಅಭಿನಯಿಸಿದರು. ಇನ್ನೂ ಹಲವು ಹೊಸ ಸಿನಿಮಾಗಳು ಅವರ ಕೈಯಲ್ಲಿ ಇವೆ. ಬೋಲ್ಡ್ ಆಗಿ ಗುರುತಿಸಿಕೊಂಡಿರುವ ಅವರು ಈಗ ‘ಬಿಗ್ ಬಾಸ್ ಕನ್ನಡ ಸೀಸನ್ 10’ ಶೋನಲ್ಲಿ ಟಫ್​ ಸ್ಪರ್ಧಿ ಆಗಿದ್ದಾರೆ. ವಿಶೇಷ ಏನೆಂದರೆ, ಅವರಿಗಾಗಿ ‘ಬೆಂಕಿ ಬಂತೋ..’ (Benki Bantho) ಎಂಬ ಹೊಸ ಹಾಡು ಬಿಡುಗಡೆ ಮಾಡಲಾಗಿದೆ.

‘ಬೆಂಕಿ ಬಂತೋ..’ ಹಾಡಿನ ಮೂಲಕ ತನಿಷಾ ಕುಪ್ಪಂಡ ಅವರಿಗೆ ಫ್ಯಾನ್ಸ್​ ಬೆಂಬಲ ನೀಡುತ್ತಿದ್ದಾರೆ. ಅವರೇ ಟ್ರೋಫಿ ಗೆಲ್ಲಬೇಕು ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ. ಈ ಹಾಡಿಗೆ ಶಮಂತ್ ನಾಗರಾಜ್ ಅವರು ಸಾಹಿತ್ಯ ಬರೆದಿದ್ದಾರೆ. ಖ್ಯಾತ ಗಾಯಕ ಶಶಾಂಕ್ ಶೇಷಗಿರಿ ಅವರು ಧ್ವನಿ ನೀಡಿದ್ದಾರೆ. ಸಂಗೀತ ನಿರ್ದೇಶನ ಕೂಡ ಅವರದ್ದೇ. ತನಿಷಾ ಕುಪ್ಪಂಡ ಅವರ ಎನರ್ಜಿ, ಮಾತಿನ ಶೈಲಿ, ಎದುರಾಳಿ ಸ್ಪರ್ಧಿಗಳಿಗೆ ಟಕ್ಕರ್ ಕೊಡುವ ರೀತಿ ಸೇರಿದಂತೆ ಅನೇಕ ಗುಣಗಳನ್ನು ಈ ಹಾಡಿನಲ್ಲಿ ವರ್ಣಿಸಲಾಗಿದೆ.

‘ಬಿಗ್ ಬಾಸ್​ ಕನ್ನಡ ಸೀಸನ್​ 10’ ರಿಯಾಲಿಟಿ ಶೋನಲ್ಲಿ ತನಿಷಾ ಕುಪ್ಪಂಡ ಅವರು ಬೆಂಕಿ ಎಂದೇ ಫೇಮಸ್​ ಆಗಿದ್ದಾರೆ. ಎಲ್ಲರೂ ಅವರನ್ನು ಬೆಂಕಿ ಎಂದು ಕರೆಯುತ್ತಾರೆ. ಸಖತ್​ ಪೈಪೋಟಿ ನೀಡುವ ಮೂಲಕ ಅವರು ಈವರೆಗೂ ಬಂದಿದ್ದಾರೆ. ಅವರು ಫಿನಾಲೆಗೂ ಎಂಟ್ರಿ ನೀಡಬೇಕು, ಟ್ರೋಫಿ ಗೆಲ್ಲಬೇಕು ಎಂದು ಅಭಿಮಾನಿಗಳು ಈ ಹಾಡಿಗೆ ಕಮೆಂಟ್​ ಮಾಡುತ್ತಿದ್ದಾರೆ.

ಇದನ್ನೂ ಓದಿ: ವರ್ತೂರು ಸಂತೋಷ್​-ತನಿಷಾ ನಡುವಿನ ಸಂಬಂಧ ಎಂಥದ್ದು? ಹತ್ತಿರದಿಂದ ಕಂಡ ಪವಿ ಹೇಳಿದ್ದಿಷ್ಟು..

‘ಎ2 ಫಿಲ್ಮ್ಸ್​’ ಯೂಟ್ಯೂಬ್​ ಚಾನೆಲ್​ನಲ್ಲಿ ‘ಬೆಂಕಿ ಬಂತೋ..’ ಹಾಡು ಬಿಡುಗಡೆ ಆಗಿದೆ. ಬಿಗ್​ ಬಾಸ್​ ಕಾರ್ಯಕ್ರಮಕ್ಕೆ ಮೊದಲು ಬಂದಾಗ ತನಿಷಾ ಕುಪ್ಪಂಡ ಅವರನ್ನು ಅಸಮರ್ಥರ ಗುಂಪಿನಲ್ಲಿ ಇರಿಸಲಾಗಿತ್ತು. ಕಡಿಮೆ ವೋಟ್​ ಪಡೆದಿದ್ದರಿಂದ ಅವರು ಅಸಮರ್ಥರು ಎನಿಸಿಕೊಂಡಿದ್ದರು. ಆದರೆ ನಂತರದ ದಿನಗಳಲ್ಲಿ ಉತ್ತಮವಾಗಿ ಆಡುವ ಮೂಲಕ ಅವರು ಮೆಚ್ಚುಗೆ ಪಡೆದರು. ವೀಕ್ಷಕರಿಂದ ಅಪಾರ ವೋಟ್​ ಪಡೆದು 92 ದಿನಗಳಿಗೂ ಹೆಚ್ಚು ಕಾಲ ಬಿಗ್​ ಬಾಸ್​ ಮನೆಯಲ್ಲಿ ಫೈಟ್​ ನೀಡಿ ಮುನ್ನುಗ್ಗುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

KSRTC ಬಸ್​​ನಲ್ಲಿ ಅಕ್ರಮ ಗೋಮಾಂಸ ಸಾಗಿಸುತ್ತಿದ್ದ ಶಕೀರಾ ವಶಕ್ಕೆ
KSRTC ಬಸ್​​ನಲ್ಲಿ ಅಕ್ರಮ ಗೋಮಾಂಸ ಸಾಗಿಸುತ್ತಿದ್ದ ಶಕೀರಾ ವಶಕ್ಕೆ
ಇಂಜಿನಿಯರಿಂಗ್​​ಗೆ ಯಾವ ಕಾಲೇಜು, ಯಾವ ಕೋರ್ಸ್ ಬೆಸ್ಟ್?
ಇಂಜಿನಿಯರಿಂಗ್​​ಗೆ ಯಾವ ಕಾಲೇಜು, ಯಾವ ಕೋರ್ಸ್ ಬೆಸ್ಟ್?
ಮಾಜಿ ಪ್ರಧಾನಿಯ ಮಗನಾಗಿ ಸರ್ಕಾರಿ ಜಮೀನು ಒತ್ತುವರಿ ಮಾಡ್ತೀನಾ? ಕುಮಾರಸ್ವಾಮಿ
ಮಾಜಿ ಪ್ರಧಾನಿಯ ಮಗನಾಗಿ ಸರ್ಕಾರಿ ಜಮೀನು ಒತ್ತುವರಿ ಮಾಡ್ತೀನಾ? ಕುಮಾರಸ್ವಾಮಿ
ಪಂದ್ಯವಾಡು ಫೈನ್ ಕಟ್ಟು: ಬ್ಯಾಕ್ ಟು ಬ್ಯಾಕ್ ದಂಡ ಕಟ್ಟಿದ ದಿಗ್ವೇಶ್ ರಾಠಿ
ಪಂದ್ಯವಾಡು ಫೈನ್ ಕಟ್ಟು: ಬ್ಯಾಕ್ ಟು ಬ್ಯಾಕ್ ದಂಡ ಕಟ್ಟಿದ ದಿಗ್ವೇಶ್ ರಾಠಿ
ಪೊಲೀಸರನ್ನು ಸ್ವತಂತ್ರವಾಗಿ ಕೆಲಸ ಮಾಡಲು ಬಿಡಿ: ಪ್ರತಾಪ್ ಸಿಂಹ
ಪೊಲೀಸರನ್ನು ಸ್ವತಂತ್ರವಾಗಿ ಕೆಲಸ ಮಾಡಲು ಬಿಡಿ: ಪ್ರತಾಪ್ ಸಿಂಹ
ಹಾರ್ದಿಕ್ ಪಾಂಡ್ಯ ನಿರ್ಧಾರಕ್ಕೆ ಅಸಮಾಧಾನ ಹೊರಹಾಕಿದ ಸೂರ್ಯಕುಮಾರ್ ಯಾದವ್
ಹಾರ್ದಿಕ್ ಪಾಂಡ್ಯ ನಿರ್ಧಾರಕ್ಕೆ ಅಸಮಾಧಾನ ಹೊರಹಾಕಿದ ಸೂರ್ಯಕುಮಾರ್ ಯಾದವ್
ಪೊಲೀಸರಿಗೆ ದೂರು ನೀಡುವುದು ಸಹ ಗೊತ್ತಿರದ ಮಹಿಳೆಯ ಕುಟುಂಬ
ಪೊಲೀಸರಿಗೆ ದೂರು ನೀಡುವುದು ಸಹ ಗೊತ್ತಿರದ ಮಹಿಳೆಯ ಕುಟುಂಬ
ಶಿವನಿಗೆ ಪೂಜಾ ಸಮಯದಲ್ಲಿ ಇಡಬಾರದ ವಸ್ತು ಯಾವುದು ಗೊತ್ತಾ?
ಶಿವನಿಗೆ ಪೂಜಾ ಸಮಯದಲ್ಲಿ ಇಡಬಾರದ ವಸ್ತು ಯಾವುದು ಗೊತ್ತಾ?
Daily Horoscope: ಸೂರ್ಯ ಮೀನ ರಾಶಿಗೆ, ಚಂದ್ರ ಮಿಥುನ ರಾಶಿಯಲ್ಲಿ ಸಂಚಾರ
Daily Horoscope: ಸೂರ್ಯ ಮೀನ ರಾಶಿಗೆ, ಚಂದ್ರ ಮಿಥುನ ರಾಶಿಯಲ್ಲಿ ಸಂಚಾರ
ಕಾರ್ ಮಂಚದ ಮೇಲೆ ಮಲಗಿ ಯುವಕನ ಸವಾರಿ; ಇದೆಂಥಾ ಶೋಕಿ ಎಂದ ನೆಟ್ಟಿಗರು
ಕಾರ್ ಮಂಚದ ಮೇಲೆ ಮಲಗಿ ಯುವಕನ ಸವಾರಿ; ಇದೆಂಥಾ ಶೋಕಿ ಎಂದ ನೆಟ್ಟಿಗರು