ವರ್ತೂರು ಸಂತೋಷ್-ತನಿಷಾ ನಡುವಿನ ಸಂಬಂಧ ಎಂಥದ್ದು? ಹತ್ತಿರದಿಂದ ಕಂಡ ಪವಿ ಹೇಳಿದ್ದಿಷ್ಟು..
ಬಿಗ್ ಬಾಸ್ ಮನೆಯಲ್ಲಿ ವರ್ತೂರು ಸಂತೋಷ್ ಮತ್ತು ತನಿಷಾ ಕುಪ್ಪಂಡ ಅವರು ಬಹಳ ಆಪ್ತವಾಗಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವಂಥದ್ದು. ಈ ಬಗ್ಗೆ ಪವಿ ಪೂವಪ್ಪ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಎಲಿಮಿನೇಟ್ ಆದ ಬಳಿಕ ನೀಡಿದ ಸಂದರ್ಶನದಲ್ಲಿ ಅವರು ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ.
ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ‘ಬಿಗ್ ಬಾಸ್ ಕನ್ನಡ ಸೀಸನ್ 10’ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದ ಮಾಡೆಲ್ ಪವಿ ಪೂವಪ್ಪ (Pavi Poovappa) ಅವರು ಎಲಿಮಿನೇಟ್ ಆದರು. ಬಿಗ್ ಬಾಸ್ ಮನೆಯಲ್ಲಿ ಗುಂಪುಗಾರಿಕೆ ಇದೆ. ಹಾಗೆಯೇ ಕೆಲವರ ನಡುವೆ ಆಪ್ತತೆ ಹೆಚ್ಚಿದೆ. ವರ್ತೂರು ಸಂತೋಷ್ (Varthur Santhosh) ಮತ್ತು ತನಿಷಾ ಕುಪ್ಪಂಡ (Tanisha Kuppanda) ಅವರು ಪರಸ್ಪರ ಕ್ಲೋಸ್ ಆಗಿದ್ದಾರೆ. ‘ವರ್ತೂರು ಸಂತೋಷ್ ಅವರನ್ನು ನೋಡಿದರೆ ತನಿಷಾ ನಾಚಿಕೊಳ್ಳುತ್ತಿದ್ದರು. ತನಿಷಾ ಆಸ್ಪತ್ರೆಗೆ ಹೋದಾಗ ವರ್ತೂರು ಸಂತೋಷ್ ಸಖತ್ ಮಿಸ್ ಮಾಡಿಕೊಳ್ಳುತ್ತಿದ್ದರು. ಅದನ್ನು ನಾನು ನೇರವಾಗಿ ಕೇಳಿದೆ. ಆ ರೀತಿ ಏನೂ ಇಲ್ಲ ಅಂತ ವರ್ತೂರು ಹೇಳಿದ್ದರು. ಹೊರಗಡೆ ಹೋದ ಬಳಿಕ ಮದುವೆ ಆಗಲ್ಲ ಅಂತಲೂ ಹೇಳಿದ್ದರು. ಅದು ಒನ್ ಸೈಡೆಡ್ ಆಗಿರಬಹುದು. ಕ್ಯಾಮೆರಾದಲ್ಲಿ ಕಾಣಬೇಕು ಎಂಬ ಕಾರಣದಿಂದಲೂ ಹಾಗೆ ಮಾಡಿರಬಹುದು’ ಎಂದು ಪವಿ ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
