ತನಿಷಾ ಹಾರ್ಟ್​ಗೆ ಗಟ್ಟಿಯಾಗಿ ಚುಚ್ಚಿದ ಕಾರ್ತಿಕ್; ಈ ತಪ್ಪನ್ನು ಅವರು ಎಂದಿಗೂ ಕ್ಷಮಿಸಲ್ಲ..

ಈ ವಾರ ತನಿಷಾಗೆ ಬಿದ್ದಿದ್ದು ಒಂದೇ ವೋಟ್. ಅದೂ ಕಾರ್ತಿಕ್​ನಿಂದ. ಒಂದೊಮ್ಮೆ ಅವರು ವೋಟ್ ಮಾಡದೇ ಇದ್ದಿದ್ದರೆ ತನಿಷಾ ಸೇವ್ ಆಗುತ್ತಿದ್ದರು.

ತನಿಷಾ ಹಾರ್ಟ್​ಗೆ ಗಟ್ಟಿಯಾಗಿ ಚುಚ್ಚಿದ ಕಾರ್ತಿಕ್; ಈ ತಪ್ಪನ್ನು ಅವರು ಎಂದಿಗೂ ಕ್ಷಮಿಸಲ್ಲ..
ಕಾರ್ತಿಕ್-ತನಿಷಾ
Follow us
|

Updated on: Jan 10, 2024 | 8:27 AM

ತನಿಷಾ ಕುಪ್ಪಂಡ ಅವರು ಬಿಗ್ ಬಾಸ್ (Bigg Boss) ಮನೆಯಲ್ಲಿ ಇತ್ತೀಚೆಗೆ ಡಲ್ ಆಗಿದ್ದಾರೆ. ಅವರ ಕಾಲಿಗೆ ಏಟಾಗಿತ್ತು. ಆ ಬಳಿಕ ಅವರು ಪರ್ಫಾರ್ಮೆನ್ಸ್ ಸ್ವಲ್ಪ ಕಡಿಮೆ ಆಗಿದೆ. ಈ ವಾರ ಕಾರ್ತಿಕ್ ಅವರಿಂದಲೇ ತನಿಷಾಗೆ ದ್ರೋಹ ಆಗಿದೆ. ಇದನ್ನು ಎಂದಿಗೂ ಕ್ಷಮಿಸಲ್ಲ ಎಂದು ತನಿಷಾ ಕಣ್ಣೀರು ಹಾಕಿದ್ದಾರೆ. ಇದಕ್ಕೆ ಏನು ಉತ್ತರ ನೀಡಬೇಕು ಎಂಬುದು ತಿಳಿಯದೇ ಮೌನಕ್ಕೆ ಶರಣಾಗಿದ್ದಾರೆ ಕಾರ್ತಿಕ್.

ಫ್ರೆಂಡ್​ಶಿಪ್ ಹೆಸರಲ್ಲಿ ಕಾರ್ತಿಕ್ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎನ್ನುವ ಆರೊಪ ಬಂತು. ‘ಕಾರ್ತಿಕ್ ಅವರ ಲೋಟವನ್ನೂ ತನಿಷಾ ತೊಳದುಕೊಡುತ್ತಾರೆ’ ಎಂಬಿತ್ಯಾದಿ ಆರೋಪಗಳು ಬಂದವು. ಈ ಆರೋಪವನ್ನು ಕಾರ್ತಿಕ್ ಒಪ್ಪಿಲ್ಲ. ಆ ಬಳಿಕ ನಾಮಿನೇಷನ್ ಪ್ರಕ್ರಿಯೆ ನಡೆಯಿತು. ಎಲ್ಲರೂ ಒಂದು ಥರ್ಮಕೋಲ್ ಹಾರ್ಟ್ ಹಿಡಿದು ನಿಲ್ಲುತ್ತಾರೆ. ನಾಮಿನೇಟ್ ಮಾಡುವಾಗ ಆ ಹಾರ್ಟ್​ಗೆ ಚಾಕುವಿನಿಂದ ಚುಚ್ಚಬೇಕು. ಕಾರ್ತಿಕ್​ ಅವರು ತನಿಷಾನ ನಾಮಿನೇಟ್ ಮಾಡಿ ಎಲ್ಲರಿಗೂ ಅಚ್ಚರಿ ಮೂಡಿಸಿದರು. ಕಾರ್ತಿಕ್ ತಮ್ಮ ಹೆಸರನ್ನು ತೆಗೆದುಕೊಂಡಿದ್ದು ನೋಡಿ ಎಲ್ಲರಿಗೂ ಶಾಕ್ ಆಯಿತು. ತನಿಷಾ ಕಣ್ಣಲ್ಲಿ ನೀರು ತುಂಬಿತು. ‘ಹಾರ್ಟ್​ಗೆ ನಿಧಾನವಾಗಿ ಚುಚ್ಚು. ಈಗಾಗಲೇ ಡೀಪ್ ಆಗಿ ಚಾಕು ಹೋಗಿದೆ’ ಎಂದರು ತನಿಷಾ.

ಇದನ್ನೂ ಓದಿ: ಮೊದಲು ಸಂಗೀತಾ, ನಂತರ ನಮ್ರತಾ ಜತೆ ಕ್ಲೋಸ್​ ಆದ ಕಾರ್ತಿಕ್​ಗೆ ಸುದೀಪ್​ ಹೇಳಿದ್ದೇನು?

ಮೊದಲಿನಿಂದಲೂ ಇಬ್ಬರೂ ಒಳ್ಳೆಯ ಬಾಂಡ್ ಶೇರ್ ಮಾಡಿಕೊಳ್ಳುತ್ತಾ ಬರುತ್ತಿದ್ದಾರೆ. ಹಾಗಿದ್ದರೂ ಕಾರ್ತಿಕ್ ತಮ್ಮ ಹೆಸರನ್ನು ತೆಗೆದುಕೊಂಡಿದ್ದು ತನಿಷಾಗೆ ಬೇಸರ ತರಿಸಿದೆ. ಮತ್ತೊಂದು ವಿಚಾರ ಎಂದರೆ ಈ ವಾರ ತನಿಷಾಗೆ ಬಿದ್ದಿದ್ದು ಒಂದೇ ವೋಟ್. ಅದೂ ಕಾರ್ತಿಕ್​ನಿಂದ. ಒಂದೊಮ್ಮೆ ಅವರು ವೋಟ್ ಮಾಡದೇ ಇದ್ದಿದ್ದರೆ ತನಿಷಾ ಸೇವ್ ಆಗುತ್ತಿದ್ದರು.

ಈ ಬಗ್ಗೆ ವಿನಯ್, ನಮ್ರತಾ ಹಾಗೂ ಸಂಗೀತಾ ಚರ್ಚೆ ಮಾಡಿದ್ದಾರೆ. ‘ನಾವು ಫ್ರೆಂಡ್​ಶಿಪ್ ಕಾರ್ಡ್ ಎಂದು ಹೇಳಿದ್ದಕ್ಕೆ ಕಾರ್ತಿಕ್ ಈ ರೀತಿ ಮಾಡಿದ್ದಾರೆ. ಆರೋಪ ಸುಳ್ಳು ಎಂಬುದನ್ನು ತೋರಿಸುವುದು ಅವರ ಉದ್ದೇಶ’ ಎಂದು ಅವರು ಅಭಿಪ್ರಾಯಪಟ್ಟರು. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಬಿಗ್ ಬಾಸ್ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ ಉಚಿತವಾಗಿ 24 ಗಂಟೆ ಲೈವ್ ವೀಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಮನೆಯೆದುರು ಮೂತ್ರ ಮಾಡಿದವನಿಗೆ ಮನಬಂದಂತೆ ಥಳಿಸುತ್ತಿರುವ ವಿಡಿಯೋ ವೈರಲ್
ಮನೆಯೆದುರು ಮೂತ್ರ ಮಾಡಿದವನಿಗೆ ಮನಬಂದಂತೆ ಥಳಿಸುತ್ತಿರುವ ವಿಡಿಯೋ ವೈರಲ್
ಚದುರಂಗದ ಚತುರರನ್ನ ಭೇಟಿಯಾದ ಪ್ರಧಾನಿ ಮೋದಿ; ವಿಡಿಯೋ ನೋಡಿ
ಚದುರಂಗದ ಚತುರರನ್ನ ಭೇಟಿಯಾದ ಪ್ರಧಾನಿ ಮೋದಿ; ವಿಡಿಯೋ ನೋಡಿ
ಕಾಶ್ಮೀರಿ ಪಂಡಿತರಿಗೆ ಬಾಯ್ತಪ್ಪಿ ಪಿಓಕೆ ನಿರಾಶ್ರಿತರು ಎಂದ ರಾಹುಲ್ ಗಾಂಧಿ
ಕಾಶ್ಮೀರಿ ಪಂಡಿತರಿಗೆ ಬಾಯ್ತಪ್ಪಿ ಪಿಓಕೆ ನಿರಾಶ್ರಿತರು ಎಂದ ರಾಹುಲ್ ಗಾಂಧಿ
ಹಾಸನಾಂಬೆ ದರ್ಶನಕ್ಕೆ ಹೊಸ ವ್ಯವಸ್ಥೆ ಮಾಡಿದ ಆಡಳಿತ ಮಂಡಳಿ; ಏನದು?
ಹಾಸನಾಂಬೆ ದರ್ಶನಕ್ಕೆ ಹೊಸ ವ್ಯವಸ್ಥೆ ಮಾಡಿದ ಆಡಳಿತ ಮಂಡಳಿ; ಏನದು?
72 ದಿನಗಳ ಬಳಿಕ ನದಿಯಲ್ಲಿ ಅರ್ಜುನ ಪತ್ತೆ: ಗುಡ್ಡ ಕುಸಿತದ ಭೀಕರತೆ ನೋಡಿ..
72 ದಿನಗಳ ಬಳಿಕ ನದಿಯಲ್ಲಿ ಅರ್ಜುನ ಪತ್ತೆ: ಗುಡ್ಡ ಕುಸಿತದ ಭೀಕರತೆ ನೋಡಿ..
ಯುವ ದಸರಾನಲ್ಲಿ ಪ್ರೇಕ್ಷಕರಿಂದ ಪ್ರಮಾಣ ಮಾಡಿಸಿಕೊಂಡ ನಟ ಶ್ರೀಮುರಳಿ
ಯುವ ದಸರಾನಲ್ಲಿ ಪ್ರೇಕ್ಷಕರಿಂದ ಪ್ರಮಾಣ ಮಾಡಿಸಿಕೊಂಡ ನಟ ಶ್ರೀಮುರಳಿ
ಹಾಸನಾಂಬೆ ಭಕ್ತರಿಗೆ ಇಸ್ಕಾನ್ ಲಡ್ಡು; ಡಿಸಿ ಸಿ. ಸತ್ಯಭಾಮ ಹೇಳಿದ್ದಿಷ್ಟು
ಹಾಸನಾಂಬೆ ಭಕ್ತರಿಗೆ ಇಸ್ಕಾನ್ ಲಡ್ಡು; ಡಿಸಿ ಸಿ. ಸತ್ಯಭಾಮ ಹೇಳಿದ್ದಿಷ್ಟು
ತನಿಖೆಗೆ ಆದೇಶಿಸಿದ್ದರೂ ಸಿಎಂ ವಿರುದ್ಧ ಮತ್ತೊಂದು ಹೋರಾಟಕ್ಕೆ ಸಜ್ಜು!
ತನಿಖೆಗೆ ಆದೇಶಿಸಿದ್ದರೂ ಸಿಎಂ ವಿರುದ್ಧ ಮತ್ತೊಂದು ಹೋರಾಟಕ್ಕೆ ಸಜ್ಜು!
CM ವಿರುದ್ದ ದೂರಿಗೆ ಹಿಂಬರಹ ನೀಡಲು ಲೋಕಾಯುಕ್ತ SPಗೆ ಗಡುವು ನೀಡಿದ ದೂರುದಾರ
CM ವಿರುದ್ದ ದೂರಿಗೆ ಹಿಂಬರಹ ನೀಡಲು ಲೋಕಾಯುಕ್ತ SPಗೆ ಗಡುವು ನೀಡಿದ ದೂರುದಾರ
IND vs BAN: ಕಾನ್ಪುರ್​ಗೆ ಬಂದಿಳಿದ ಟೀಮ್ ಇಂಡಿಯಾ: ಇಲ್ಲಿದೆ ವಿಡಿಯೋ
IND vs BAN: ಕಾನ್ಪುರ್​ಗೆ ಬಂದಿಳಿದ ಟೀಮ್ ಇಂಡಿಯಾ: ಇಲ್ಲಿದೆ ವಿಡಿಯೋ